Gadag: ಕೈದಿಗಳಿಗೆ ಕ್ರಿಶ್ಚಿಯನ್ ಧರ್ಮಗ್ರಂಥ ಹಂಚಿಕೆ: ಜೈಲಲ್ಲಿ ಮತಾಂತರ ನಡಿತಿದ್ಯಾ?

By Girish GoudarFirst Published Apr 6, 2022, 9:14 AM IST
Highlights

*  ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟ ಕ್ರಿಶ್ಚಿಯನ್ ಧರ್ಮೀಯರು ಕಾರಾಗೃಹ ವಿಸಿಟ್
*  ವಿವಿಧ ಧರ್ಮೀಯ ಕೈದಿಗಳ ಮತಾಂತರ ಮಾಡುವ ಹುನ್ನಾರ
*  ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳ ಆಗ್ರಹ 
 

ಗದಗ(ಏ.06):  ಗದಗ ಜಿಲ್ಲಾ ಕಾರಾಗೃಹದಲ್ಲಿ(Jail) ಕೈದಿಗಳಿಗೆ ಕ್ರಿಶ್ಚಿಯನ್ ಧರ್ಮಗ್ರಂಥ ಹಂಚುವ ಮೂಲಕ ಮತಾಂತರ(Conversion) ಹುನ್ನಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಕ್ರಿಶ್ಚಿಯನ್(Christian) ಧರ್ಮೀಯರು ಮಾರ್ಚ್ ತಿಂಗಳ 12 ರಂದು ಕಾರಾಗೃಹ ವಿಸಿಟ್ ಮಾಡಿರುವ ವಿಚಾರ ಸದ್ಯ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು(Bengaluru) ಮೂಲದ ಪಾದ್ರಿ ಡ್ಯಾನಿಯಲ್ ಸೇರಿದಂತೆ ಏಳು ಜನರ ತಂಡ ಮಾ.12 ಕ್ಕೆ ಕಾರಾಗೃಹ ವಿಸಿಟ್ ಮಾಡಿದೆ. ಪ್ರಾರ್ಥನೆ, ಕೈದಿಗಳ(Prisoners) ಮನಃ ಪರಿವರ್ತನೆ ಕಾರ್ಯಕ್ರಮ ಹಿನ್ನೆಲೆ ತಂಡ ಭೇಟಿ ನೀಡಿತ್ತು ಎನ್ನಲಾಗಿದೆ. ಆದ್ರೆ, ಪ್ರಾರ್ಥನೆ, ಭಜನೆ ಮಾಡೋದ್ರ ಜೊತೆ ಕ್ರೈಸ್ತರ ಧರ್ಮಗ್ರಥದ ಬೈಬಲ್‌ನ(Bible) ಎರಡನೇ ಭಾಗ ಎಂದು ಕರೆಸಿಕೊಳ್ಳುವ 'ಹೊಸ ಒಡಂಬಡಿಕೆ' ಅನ್ನೋ ಪುಸ್ತಕವನ್ನ ನೀಡಲಾಗಿದೆ. ಈ ಮೂಲಕ ವಿವಿಧ ಧರ್ಮೀಯ ಕೈದಿಗಳನ್ನ ಮತಾಂತರ ಮಾಡುವ ಹುನ್ನಾರ ನಡೆದಿದೆ ಅನ್ನೋ ಆರೋಪ ಇದೆ. ಕಾರಾಗೃಹದಲ್ಲಿ ಪುಸ್ತಕ ಹಂಚುವುದರ ಜೊತೆಗೆ ಸುಮಾರು ಒಂದು ಗಂಟೆಗಳ ಕಾಲ ವಿವಿಧ ಕಾರ್ಯಕ್ರಮ ನಡೆದಿರೋ ಬಗ್ಗೆಯೂ ಮಾಹಿತಿ ಇದೆ.

Latest Videos

ನೆರೆ ಮನೆ ವಿವಾಹಿತ ಮಹಿಳೆಯ ಮತಾಂತರಗೊಳಿಸಿ 'ನಿಖಾ' ಮಾಡಿಕೊಂಡ ಯುವಕ!

ವಿಸಿಟ್ ನಂತರ ಕಾರಾಗೃಹದ ಆಚೆ ನಿಂತು ಡೆನಿಯಲ್ ಆ್ಯಂಡ್ ಟೀಮ್ ಫೋಟೋ ತೆಗೆಸಿಕೊಂಡಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಪಡೆಯೋದಕ್ಕೆ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾಗಿರೋ ನಾಗರತ್ನ ಅವರನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪರ್ಕಿಸಿದೆ. ಕಾರಾಗೃಹ ಇಲಾಖೆ ಅನುಮತಿ ಮೇರೆಗೆ ಡೆನಿಯಲ್ ವಿಸಿಟ್ ಮಾಡಿರೋದಾಗಿ ಹೇಳಿದ ಅವರು ಕ್ಯಾಮರಾ ಎದುರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಹಿಂದೆಯೂ ಹಲವಾರು ವರ್ಷಗಳಿಂದ ಈಶ್ವರಿ ವಿಶ್ವವಿದ್ಯಾಲಯ, ಮುಸ್ಲಿಂ ಸೇರಿದಂತೆ ಕ್ರಿಶ್ಚಿಯನ್ ಧರ್ಮದ ಗುರುಗಳು ಕಾರಾಗೃಹ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಕೈದಿಗಳ ಮನಃ ಪರಿವರ್ತನೆ ಕಾರ್ಯಕ್ರಮ ನಡೆಯುತ್ತೆ. ಧರ್ಮಾಂತರದಂತ ಕೆಲಸ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇತ್ತ, ಧರ್ಮ ಪ್ರಚಾರಕ್ಕೆ ಕಾರಾಗೃಹ ಪ್ರವೇಶಕ್ಕೆ ಅನುವು ನೀಡಿದ್ದಕ್ಕೆ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ವಿಶ್ವಹಿಂದೂ ಪರಿಷತ್, ಬಜರಂಗ ದಳ ಕಾರ್ಯಕರ್ತರಿಂದ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರಿಗೆ  ಮನವಿ ಸಲ್ಲಿಸಿ, ಕಾರಾಗೃಹಕ್ಕೆ ಪ್ರವೇಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

ಬಳ್ಳಾರಿ: ರಾಜ್ಯದಲ್ಲಿ ಹಿಜಾಬ್(Hijab) ಗದ್ದಲವಾಯ್ತು, ವ್ಯಾಪಾರ ಬಹಿಷ್ಕಾರವಾಯ್ತು, ಹಲಾಲ್(Halal) ಕಟ್ ಕೂಡ ಬಹುತೇಕ  ಮುಗಿತು ಎನ್ನುವಷ್ಟರಲ್ಲಿ ಬಳ್ಳಾರಿಯಲ್ಲಿ ಕ್ರೈಸ್ತ ಸುವಾರ್ತೆ ಕೂಟ ಕಾರ್ಯಕ್ರಮ ರದ್ದು ಮಾಡಬೇಕೆಂದು ಆಗ್ರಹಿಸಿ ದೊಡ್ಡ ಹೈಡ್ರಾಮಾನೇ ನಡೆದಿದೆ. ಬಳ್ಳಾರಿಯಲ್ಲಿ ಇದೀಗ ಹೊಸ ವಿವಾದ ಭುಗಿಲೆದ್ದಿದ್ದು ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದದ ನಡೆದ ಘಟನೆ ಏ.5 ರಂದು ನಡೆದಿತ್ತು.

ವಾಲ್ಮೀಕಿ ಭವನದಲ್ಲಿ ಕ್ರೈಸ್ತಮತ ಪ್ರಚಾರಕ್ಕೆ ಹಿಂದು(Hindu) ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದಿದೆ. ಗಲಾಟೆ ಹಿನ್ನೆಲೆ ಆಫ್ ಕಿಂಗ್ಸ್ ಚರ್ಚ್‌ನ 32 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರೈಸ್ತ   ಸುವಾರ್ತಾ ಉಜ್ಜೀವ ಮಹಾಸಭೆಯನ್ನು ಕ್ರೈಸ್ತರ ಸಮುದಾಯದವರು ಹಮ್ಮಿಕೊಂಡಿದ್ರು..ಇದಕ್ಕೆ ಹಿಂದು ಪರ ಸಂಘಟನೆಗಳ ಮುಖಂಡರು ಆಕ್ಷೇಪವ್ಯಕ್ತಪಡಿಸಿ ಭವನದ ಮುಂದೆ ಪ್ರತಿಭಟನೆ ಮಾಡಿದ್ದರು. 

Anti Conversion Bill ಮತಾಂತರ ನಿಷೇಧ ಕಾಯ್ದೆಯಿಂದ ಆತಂಕ: ಕ್ರಿಶ್ಚಿಯನ್‌ ಸಮುದಾಯ!

ರೆವರೆಂಡ್ ಪಿ.ವಿಜಯಕುಮಾರ್ ಮತ್ತು ರೆವರೆಂಡ್.ಕೆ.ಜಾನ್ ಮಂಗಾಚಾರ್ಯುಲು ಮತ ಪ್ರಚಾರ ಮಾಡಲು ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಆದ್ರೇ ರಾಮಾಯಣ ನಿರ್ಮಾತ್ರು ವಾಲ್ಮೀಕಿ ಭವನದಲ್ಲಿ ಕ್ರೈಸ್ತ ಪ್ರಚಾರ ಸರಿಯಲ್ಲ ಅಲ್ಲದೇ ಇಲ್ಲಿ ಮತಾಂತರ ಮಾಡಲಾಗ್ತಿದೆ ಎಂದು ಹಿಂದೂ ಕಾರ್ಯಕರ್ತರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಮಾಯಣ(Ramayana) ಬರೆಯುವ ಮೂಲಕ ರಾಮನ ಪರಿಕಲ್ಪನೆ ಹುಟ್ಟು ಹಾಕಿದ ಮಹರ್ಷಿ ವಾಲ್ಮೀಕಿ ಅವರ ಹೆಸರಲ್ಲಿ ಇರೋ ಭವನದಲ್ಲಿ ಕ್ರೈಸ್ತ ಮತಪ್ರಚಾರ ಮತ್ತು ಮತಾಂತರಕ್ಕೆ ಅವಕಾಶ ನೀಡೋದಿಲ್ಲವೆಂದು ಹಿಂದೂಪರ

ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದ್ರು.

ಕ್ರೈಸ್ತ ಮುಸ್ಲಿಂ(Muslim) ಸೇರಿದಂತೆ ಯಾವುದೇ ಸಮುದಾಯದವರು ಮದುವೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಆದ್ರೇ ಮತಾಂತರ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದರು.  ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರೋ  ವಾಲ್ಮೀಕಿ ಭವನವನ್ನು‌ ಬಾಡಿಗೆಗೆ ನೀಡಿದ್ರಿಂದ ಇಲಾಖೆಯ ವಿರುದ್ಧವೂ ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಧರ್ಮವನ್ನು ಹೀಯಾಳಿಸಿ‌ ಮಾತನಾಡುವುದಕ್ಕೆ ಹೇಗೆ ಅವಕಾಶ ನೀಡಿದ್ರಿ ಎಂದು ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದ್ದರು.  
 

click me!