ಇನ್ವೆಂಟೆಕ್ ಇನ್ಫೋ ಸಲ್ಯೂಷನ್ ಸಂಸ್ಥೆಯ ಸಂಸ್ಥಾಪಕ ವೈ.ಎಸ್. ಕೆಂಪೇಗೌಡ, ಆಶ್ವಿನಿ ಕೆಂಪೇಗೌಡ ದಂಪತಿಯ ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಬನ್ನೂರು (ಫೆ.29): ಇನ್ವೆಂಟೆಕ್ ಇನ್ಫೋ ಸಲ್ಯೂಷನ್ ಸಂಸ್ಥೆಯ ಸಂಸ್ಥಾಪಕ ವೈ.ಎಸ್. ಕೆಂಪೇಗೌಡ, ಆಶ್ವಿನಿ ಕೆಂಪೇಗೌಡ ದಂಪತಿಯ ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಹೋಬಳಿಯ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಪುನರ್ ನಿರ್ಮಾಣ ಕಟ್ಟಡದ ಉದ್ಘಾಟನೆ, ಶಾಲಾ ವಾರ್ಷಿಕೊತ್ಸವ ಹಾಗೂ ಬನ್ನೂರಿನ ಮಲಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ವಾರ್ಷಿಕ ಸೇವಾ ಯೋಜನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ನಗರೀಕರಣ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳು ಶಾಲಾ ಮಕ್ಕಳನ್ನು ಗ್ರಾಹಕನ್ನಾಗಿಸಿ ಸ್ವಾಗತಿಸುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮ ಕನ್ನಡ ಶಾಲೆಗಳು ಅಪರಂಜಿ ಇದ್ದಂತೆ. ಗ್ರಾಮಗಳಲ್ಲಿ ಕಲಿತು ಪಟ್ಟಣ ಸೇರಿರುವ ವಿದ್ಯಾವಂತರು ಗ್ರಾಮಗಳ ಅಭಿವೃದ್ದಿಯಲ್ಲಿ ಸರ್ಕಾರಗಳನ್ನು ಅವಲಂಭಿಸದೇ ಎಲ್ಲರೂ ಸ್ವಾರ್ಥ ಬಿಟ್ಟು ಕೆಲಸ ಮಾಡಿದಾಗ ಮಾತ್ರ ಹಳ್ಳಿಗಳ ಉಳಿವು. ಗ್ರಾಮಗಳಲ್ಲಿ ಟೀಕೆಗಳು ಸಹಜ, ಅದನ್ನು ಮೆಟ್ಟಿ ನಿಂತು ನಿಸ್ವಾರ್ಥ ಕೆಲಸಗಳು ಉಳಿಯುತ್ತವೆ. ಆದ್ದರಿಂದ ನಮ್ಮ ಸಂತೋಷಕ್ಕೆ ಒತ್ತು ಕೊಟ್ಟು ನಿರೀಕ್ಷೆ ಇಲ್ಲದೇ ಬದುಕಬೇಕೆಂದು ತಿಳಿಸಿದರು.
undefined
ನಾನು ಉಡಾಫೆ ರಾಜಕಾರಣ ಮಾಡಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಶಾಲೆಯ ಕಟ್ಟಡದ ಪುನರ್ ನಿರ್ಮಾಣ ಕಾರ್ಯದ ರೂವಾರಿ, ತಮ್ಮ ಹುಟ್ಟೂರಾದ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು 5 ವರ್ಷಗಳ ಅವಧಿಗೆ ದತ್ತು ಪಡೆದ ಇನ್ವೆಂಟೆಕ್ ಇನ್ಫೋಸಲ್ಯೂಷನ್ ಸಂಸ್ಥೆಯ ಸಂಸ್ಥಾಪಕ ವೈ.ಎಸ್. ಕೆಂಪೇಗೌಡ ಮಾತನಾಡಿ, ನಾನು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಓದಿ ವಿದ್ಯಾವಂತನ್ನಾಗಿಸಿದೆ, ಶಾಲೆಯ ಆಭಿವೃದ್ದಿಯು ನನ್ನ ಜವಾಬ್ದಾರಿಯಾಗಿದೆ. ನಮ್ಮ ಸೇವೆಯು ಯಾವುದೇ ನಿರೀಕ್ಷೆ ಇಟ್ಟುಕೊಂಡು ಮಾಡುತ್ತಿಲ್ಲ. ನಮ್ಮ ಗ್ರಾಮದ ಶಾಲೆಗೆ ಗ್ರಾಮಸ್ಥರು ಅಲ್ಲದೇ ಅಕ್ಕ ಪಕ್ಕದ ಗ್ರಾಮಗಳಿಂದ ಬರುವುದಾದರೆ ಉಚಿತವಾಗಿ ವಾಹನದ ವ್ಯವಸ್ಥೆ ಮಾಡಿಕೊಡುತ್ತೇನೆಂದು ತಿಳಿಸಿದರು.
ಅಧಿಕಾರ ಗದ್ದುಗೆ ಹತ್ತಲು ಕಾಂಗ್ರೆಸ್‌ನಿಂದ ಶೋಷಿತರ ಮತಗಳ ಬಳಕೆ: ಸಂಸದ ಮುನಿಸ್ವಾಮಿ
ಶ್ರೀ ನಾದನಾಥನಂದ ಸ್ವಾಮೀಜಿ ಸಾನ್ನಧ್ಯ ವಹಿಸಿದ್ದರು. ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಹಾಗೂ ಟಿ. ನರಸೀಪುರ ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ ವಹಿಸಿದ್ದರು. ಫೌಂಡೇಷನ್ ಅಧ್ಯಕ್ಷೆ ಆಶ್ವಿನಿ ಕೆಂಪೇಗೌಡ, ಮೈಮುಲ್ ನಿರ್ದೇಶಕ ಆರ್. ಚಲುವರಾಜು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್. ರಾಮಸ್ವಾಮಿ, ಆರೋಹಣ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಎಚ್. ಹನುಮಂತೇಗೌಡ, ತಾಲೂಕು ಶಿಕ್ಷಣಾಧಿಕಾರಿ ಜೆ. ಶೋಭ, ಬನ್ನೂರಿನ ಮಲಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸೀಗನಾಯಕ, ಮುಖ್ಯಶಿಕ್ಷಕಿ ಕಮಲ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ವೈ.ಎಸ್. ಶಶಿಧರ್, ವೈ.ಎಸ್. ಯೋಗನಂದ್, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಇದ್ದರು.