ಆರೋಗ್ಯ ಇಲಾಖೆಯ ಅಧಿಕಾರಿಗಳ ಚಳಿ ಬಿಡಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಂತೋಷ್ ಲಾಡ್

By Suvarna News  |  First Published Jun 11, 2023, 8:17 PM IST

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ವಿಭಾಗದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ‌ ಸಭೆ ಮಾಡಿ  ಪುಲ್‌ ಕ್ಲಾಸ್ ತೆಗೆದುಕೊಂಡಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜೂ.11): ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ವಿಭಾಗದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ‌ ಸಭೆ ಮಾಡಿ ಅಧಿಕಾರಿಗಳಿಗೆ ಪುಲ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಜಿಲ್ಲಾ ಸರ್ಜನ್ ಯಶವಂತ ಮದಿನಕರ್ ಅವರು ಆಸ್ಪತ್ರೆಯ ಟಿ ಸಿ ಪ್ರಾಬ್ಲಂ ಇದೆ ಎಂದು ನೆಪ ಹೇಳಿದರು. ತಕ್ಷಣ ಅಲ್ಲೆ ಇದ್ದ ಹೆಸ್ಕಾಂ ಅಧಿಕಾರಿಗಳನ್ನ ಮಾತನಾಡಿಸಿದ ಸಂತೋಷ್ ಲಾಡ್  ಇವರಿಗೆ ಆದಷ್ಡು ಟಿಸಿಯನ್ನ ಸರಿ ಮಾಡಿಕೊಡಿ ಎಂದು ಸೂಚಿಸಿದರು. ಇನ್ನು ಡಿ ಎಚ್ ಓ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡರು.

Latest Videos

undefined

ಜಿಲ್ಲೆಯಲ್ಲಿ ಎಷ್ಟು, ಪಿ ಎಚ್ ಸಿ ಗಳು ಇವೆ, ಜಿಲ್ಲೆಯ ಪ್ರತಿ ದಿನದ ವರದಿಯನ್ನ ಯಾರಿಗೆ ಸಲ್ಲಿಸುತ್ತಿರಿ ಎಂದು ಕೇಳಿದಾಗ ಉತ್ತರ ಕೊಡಲು ಡಿ ಎಚ್ ಓ ಶಶಿ ಪಾಟೀಲ ಅವರು ಚಡಪಡಿಸಿದರು. ಇನ್ನು ನಾವು  ವರದಿಯನ್ನ ಸಿಇಓ ಅವರಿಗೆ ಸಲ್ಲಿಸುತ್ತೇವೆ ಎಂದು ತಪ್ಪು ಹೇಳಿದರು. ಅದಕ್ಕೆ‌ ಹಾಗಿದ್ರೆ  ನಿಮ್ಮ ಡೈರಿ ಮೆಂಟೈನ್ ಮಾಡಿದ್ದಿರಾ. ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದಾಗ ಉತ್ತರವಿಲ್ಲದೆ ಸುಮ್ಮನೆ ನಿಂತು ಬಿಟ್ಟರು. ಡಿಎಚ್ಓ ಸಭೆಯಲ್ಲಿ ಅಧಿಕಾರಿಗಳು ಪ್ರಗತಿ ವಿಚಾರವಾಗಿ ಅಧಿಕಾರಿಗಳನ್ನ‌ ಪ್ರಶ್ನೆ ಮಾಡಿದಾಗ ಕೂಡ ಡಿ ಎಚ್ ಓ ಶಶಿ ಪಾಟೀಲ ಉತ್ತರ ಕೊಡಲು ತಬ್ಬಿಬ್ಬಾದರು.

100 ಕ್ಕೂ ಹೆಚ್ಚು ಮಂದಿ ಪತ್ನಿಯನ್ನು ಅರೆ ಬೆತ್ತಲೆಗೊಳಿಸಿ ದಾಳಿ ನಡೆಸಿದ್ದಾರೆ: ಭಾರತೀಯ ಯೋಧನ ವಿಡಿಯೋ ವೈರಲ್!

ಇನ್ನು ಕೃಷಿ ಇಲಾಖೆಯ ಜೆಡಿ ಅವರನ್ನ ಸಚಿವ ಸಂತೋಷ್ ಲಾಡ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನ ಕೇಳಿದರೆ ಯಾವೊಬ್ಬ ಅಧಿಕಾರಿಯ ಹತ್ತಿರ ಸೂಕ್ತವಾದ ಮಾಹಿತಿಗಳನ್ನ‌ ನೀಡದಕ್ಕೆ‌ ಸಚಿವರು ಹೌ ಹಾರಿದರು. ಅಧಿಕಾರಿಗಳ‌ ಚಾಣಾಕ್ಷ ಉತ್ತರಕ್ಕೆ ಸಚಿವ ಸಂತೋಷ್ ಲಾಡ್ ಅವರು ಕೆಂಡಾಮಂಡಲವಾದರು.  ಇನ್ನು ಹೆಸ್ಕಾ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಎಷ್ಟು ಆರ್ ಆರ್ ನಂಬರ್ ವಳು ಇವೆ ಎಂದು ಮಾಹಿತಿಯನ್ನ ಕೇಳಿದರು.

ಅಧಿಕಾರಿಗಳು ಚಾಣಾಕ್ಷ ತನದಿಂದ ಮಾಹಿತಿಯನ್ನ ಕೊಟ್ಡು ಲಾಡ್ ಅವರ ಪ್ರಶ್ನೆಗೆ ತಪ್ಪಿಸಿಕ್ಕೊಳ್ಳಲು ಯತ್ನಿಸಿದರು. ಜಿಲ್ಲೆಯ ಎಲ್ಲ ಅಧಿಕಾರಿಗಳನ್ನ ಒಬ್ಬೊಬ್ಬರನ್ನಾಗಿ ಮಕ್ಕಳಿಗೆ‌ ಪಾಠ ವನ್ನ‌ಹೇಳಿದ ಹಾಗೆ‌ ಹೇಳಿದರು. ಇನ್ನು ಕೆಲ ಅಧಿಕಾರಿಗಳು ಸಭೆಯ ಹಿಂದುಗಡೆ ಪುಲ್‌ ಜೋರಾಗಿ ನಿದ್ದೆಗೆ ಜಾರಿದ್ರು. ಕೃಷಿ ಇಲಾಖೆಯ ಜೇಡಿ ಶಿವನಗೌಡ ಪಾಟೀಲ ಅವರನ್ನ‌ ಪುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ಕೇವಲ ಖಾಲಿ ಪೋಸ್ಟಗಳನ್ನ ಕೊಡಿ ಅಂತ ಕೇಳುತ್ತಿರಿ. ಯಾಕೆ‌ ಕೆಳಗಿನ ಅಧಿಕಾರಿಗಳಿಂದ ಕೆಲಸ ತೆಗೆದುಕ್ಕೊಳ್ಳಲ್ಲ‌ ಎಂದು ಕಿಡಿಕಾರಿದರು.

ಮದುವೆಯಾಗಿ ವಿದೇಶಕ್ಕೆ ಹನಿಮೂನ್‌ ಹೋದ ಚೆನ್ನೈ ವೈದ್ಯ ದಂಪತಿ ಫೋಟೋಶೂಟ್

ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಎಲ್ಲರೂ ಪೂರಕವಾದ ಮಾಹಿತಿಗಳು ಇರುವುದಿಲ್ಲ. ಯಾಕೆ ಅಧಿಕಾರಿಗಳು ಹೀಗೆ ಮಾಡ್ತಿರೋ ಗೊತ್ತಿಲ್ಲ. ಸೂಕ್ತವಾದ ಮಾಹಿತಿಯನ್ನ‌ ಪಡೆದುಕ್ಕೊಂಡು ಮುಂದಿನ ಸಭೆಗೆ ಎಲ್ಲರೂ ಹಾಜರಾಗಬೇಕು ಎಂದು ಖಡಕ್ ಎಚ್ಚರಿಕೆಯನ್ನ‌ ಸಚಿವ ಸಂತೋಷ್ ಲಾಡ್ ನೀಡಿದರು. ಅಧಿಕಾರಿಗಳು ಕೇವಲ ನೆಪ ಹೇಳಿ ತಪ್ಪಿಸುತ್ತಿದ್ದಿರಿ ಆದರೆ ನನಗೆ ಮುಂದಿನ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಡೈರಿಯನ್ನ‌ ಮೇಂಡೈನ್ ಮಾಡಬೇಕು ಯಾವ ಅಧಿಕಾರಿಗಳು ಡೈರಿಯಲ್ಲಿ ಎಲ್ಲ‌ ದಿನಚರಿಯನ್ನ‌ ಮೆಂಟೈನ್ ಮಾಡಬೇಕು ಎಂದು  ಜಿಲ್ಲಾ ಉಸ್ತುವಾರಿ ಸಚಿವ ಖಡಕ್ ವಾರ್ನಿಂಗ್ ಮಾಡಿದರು.

click me!