ದಸರಾ ರಜೆ ನೀಡದ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ; ಶಿಕ್ಷಣ ಇಲಾಖೆಗೆ ಮನವಿ

Published : Oct 01, 2026, 08:21 AM IST
Students

ಸಾರಾಂಶ

ದಸರಾ ರಜೆ ನೀಡದೆ ತರಗತಿ ನಡೆಸುತ್ತಿರುವ ಕೆಲವು ಖಾಸಗಿ ಶಾಲೆಗಳ ವಿರುದ್ಧ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಧಾರವಾಡ: ನಾಡಹಬ್ಬ ದಸರಾ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ರಜೆಯನ್ನು ಪಾಲಿಸದೇ ಕೆಲವು ಕ್ರಿಶ್ಚಿಯನ್ ಆಡಳಿತದ ಖಾಸಗಿ ಶಾಲೆಗಳು ತರಗತಿ ಹಾಗೂ ಪರೀಕ್ಷೆ ನಡೆಸುತ್ತಿವೆ ಎಂದು ಆರೋಪಿಸಿ ಶ್ರೀರಾಮಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕಠಿಣ ಕ್ರಮಕ್ಕೆ ಆಗ್ರಹ

ಸರ್ಕಾರದ ರಜೆ ನಿಯಮಗಳನ್ನು ಪಾಲಿಸದೆ ವಿದ್ಯಾರ್ಥಿಗಳಿಗೆ ರಜೆ ನೀಡದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗಳು ದಸರಾ ರಜೆ ನಿರಾಕರಿಸುತ್ತಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ ಎಂದು ಆರೋಪಿಸಿದರು.

ಶ್ರೀರಾಮ ಸೇನೆ ಮುಖಂಡರಿಂದ ಹೋರಾಟದ ಎಚ್ಚರಿಕೆ

ಕ್ರಿಸ್‌ಮಸ್‌ ಸಂದರ್ಭದಲ್ಲಿ ಸರ್ಕಾರ ಅಧಿಕೃತವಾಗಿ ಒಂದು ದಿನ ರಜೆ ಘೋಷಿಸಿದ್ದರೂ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹತ್ತು ದಿನಗಳ ವರೆಗೆ ರಜೆ ನೀಡುತ್ತಿವೆ. ಆದರೆ, ನಾಡಹಬ್ಬ ದಸರಾಕ್ಕೆ ರಜೆ ನೀಡದಿರುವುದು ಸರ್ಕಾರದ ಆದೇಶದ ಉಲ್ಲಂಘನೆ. ರಜೆ ನಿಯಮಗಳನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಇಲಾಖೆ ತಕ್ಷಣ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖಂಡರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬೆಳಗಾವಿ ಮತ್ತು ಹುಬ್ಬಳ್ಳಿ ಮಂದಿಗೆ ಸಿಹಿಸುದ್ದಿ, ಕರ್ನಾಟಕ ಸರ್ಕಾರದಿಂದ ಮಹತ್ವದ ಕೆಲಸ

ಈ ವೇಳೆ ಶ್ರೀರಾಮ ಸೇನೆಯ ಉತ್ತರ ಪ್ರಾಂತ ರಾಜ್ಯ ಗೌರವ ಅಧ್ಯಕ್ಷ ಸತ್ಯ ಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಮತ್ತಿತರರು ಇದ್ದರು.

ಇದನ್ನೂ ಓದಿ: Dharwad: ಮಳೆನೀರು ಹಿಡಿದು ಅಂತರ್ಜಲ ಹೆಚ್ಚಿಸಿದ ವಾಲ್ಮಿ; 1,000 ಲಕ್ಷ ಲೀ. ನೀರು ಸಂಗ್ರಹ

PREV
Read more Articles on
click me!

Recommended Stories

ಬಾಲಕಿಯ ‘ಗಾಂಧಾರಿ ಕಲೆ’ಗೆ ಬೆರಗಾದ ರೆಡ್ಡಿ; ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆ ಬರೆಯುವ ಕರ್ನಾಟಕದ ಈ ಅಚ್ಚರಿಯ ಹುಡುಗಿ ಯಾರು?
ಯಲಹಂಕ ಬಳಿಯಲ್ಲಿರೋ 3 ಎಕರೆ 12 ಗುಂಟೆ ಭೂಮಿ ಮಾಲೀಕತ್ವ ಯಾರದ್ದು? ಹೈಕೋರ್ಟ್ ತೀರ್ಪು