ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮ ದಿನದ ಸಂಭ್ರಮ

By Kannadaprabha News  |  First Published Nov 25, 2019, 10:14 AM IST

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಸಂತಸ, ಸಂಭ್ರಮ ದ್ವಿಗುಣಗೊಂಡಿದೆ. ಒಂದೆಡೆ ಲಕ್ಷದೀಪೋತ್ಸವ ಸಂಭ್ರಮವಾದರೆ ಇನ್ನೊಂದೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಸಂಭ್ರಮ.


ಮಂಗಳೂರು(ನ.25): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಸಂತಸ, ಸಂಭ್ರಮ ದ್ವಿಗುಣಗೊಂಡಿದೆ. ಒಂದೆಡೆ ಲಕ್ಷದೀಪೋತ್ಸವ ಸಂಭ್ರಮವಾದರೆ ಇನ್ನೊಂದೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಸಂಭ್ರಮ.

ಬೆಳ್ತಂಗಡಿಯ ಧರ್ಮಸ್ಥಳವು ಎರಡು ಮುಖ್ಯ ಕಾರಣಗಳನ್ನು ಗುರುತಿಸಿಕೊಂಡಿದೆ. ಒಂದು ಮಾತನಾಡದ ಮಂಜುನಾಥ ಶಿವ ಹಾಗೂ ಮಾತನಾಡುವ ಮಂಜುನಾಥ ಧರ್ಮಾಧಿಕಾರಿಗಳು. ಇನ್ನೊಂದು ಮುಖ್ಯ ಅಂಶವೆಂದರೆ ಭಕ್ತಿಗೆ ಧರ್ಮಸ್ಥಳದ ಮಂಜುನಾಥ ಹಾಗೂ ಅನ್ನ ಪ್ರಸಾದಕ್ಕೆ ವಿಶ್ವದಲ್ಲಿಯೇ ಧರ್ಮಸ್ಥಳ ಹೆಸರುವಾಸಿಯಾಗಿದೆ. ಇಂದು ಮಾತನಾಡುವ ಮಂಜುನಾಥ ಧರ್ಮಾಧಿಕಾರಿಗಳ 71 ನೇ ಜನ್ಮ ದಿನ (1948 ನ. 25).

Tap to resize

Latest Videos

undefined

ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿವುಳ್ಳವರು. ಅವರ ಆಲೋಚನೆಗಳು ಜನಪರವಾಗಿರುತ್ತದೆ, ಜನಹಿತವಾಗಿರುತ್ತದೆ. ನಾಡಿನ ಹಿರಿಮೆ ಗರಿಮೆಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಧರ್ಮಸ್ಥಳ ತನ್ನದೇ ರೀತಿಯಲ್ಲಿ ಅವಿರತವಾಗಿ ಕಾಣಿಕೆ ನೀಡುತ್ತಲೇ ಬಂದಿದೆ.

ಧರ್ಮಸ್ಥಳದ ಸಾಮಾಜಿಕ ಕಲ್ಯಾಣ

ಗ್ರಾಮೀಣ ಅಭಿವೃದ್ಧಿ ಎಂಬ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಇಂದು ಅಸಂಖ್ಯ ಜನರು ಅದರ ನೆರಳಲ್ಲಿ ತಂಗಾಳಿಯನ್ನು ಪಡೆದುಕೊಂಡಿದ್ದಾರೆ. ಹತ್ತು ರೂಪಾಯಿ ಸಾಲ ಪಡೆಯಲು ಹಿಂಜರಿಯುತ್ತಿದ್ದ ಜನಗಳು ಇಂದು ಲಕ್ಷಾಂತರ ರೂಪಾಯಿಗಳ ಸಾಲ ಪಡೆದು ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಿದೆ. ಸ್ವಸ್ವಹಾಯ ಸಂಘಗಳು ಇಂದು ಹಲವರ ಹೊಸ ಮನೆ, ಶುಭಕಾರ್ಯಗಳಿಗೆ ಇಂಬನ್ನು ನೀಡಿದೆ. ಸಾಮೂಹಿಕ ವಿವಾಹ ವ್ಯವಸ್ಥೆಯಡಿ ಸರಳ ವಿವಾಹದ ಮೂಲಕ ಅದೆಷ್ಟೋ ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿವೆ. ಪ್ರಾಕೃತಿಕ ಅಸಮತೋಲನದಿಂದಾಗಿ ಮನುಷ್ಯನ ಆರೋಗ್ಯ ಹಾಳಾಗುತ್ತಿರುವುದನ್ನು ಮನಗಂಡ ಹೆಗ್ಗಡೆಯವರು ವಿಶ್ವದಲ್ಲಿಯೇ ಮೊದಲ ಬಾರಿಗೆ ಪ್ರಕೃತಿ ಆಸ್ಪತ್ರೆಯೊಂದನ್ನು ನಿರ್ಮಿಸಿದರು. ಅತೀ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಪ್ರಕೃತಿಯ ಮೂಲಕವಾಗಿಯೇ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರಾಚೀನ ಪರಂಪರೆಯಾದ ಆಯುರ್ವೇದ ಪದ್ಧತಿಗೂ ಧರ್ಮಸ್ಥಳದಿಂದ ಮಹತ್ತರ ಕೊಡುಗೆ ಸಂದಿದೆ. ಉಚಿತ / ಕಡಿಮೆ ವೆಚ್ಚದ ಚಿಕಿತ್ಸೆಯನ್ನು ಧರ್ಮಸ್ಥಳದಿಂದ ನಡೆಸಲ್ಪಡುವ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಉನ್ನತ ಗುಣಮಟ್ಟದ ಕಡಿಮೆ ವೆಚ್ಚದ ಶಿಕ್ಷಣ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳಿಂದ ದೊರಕುತ್ತಿದೆ.

ಅಭಯ ಪ್ರಸಾದ ಧರ್ಮಸ್ಥಳ

ಧರ್ಮಸ್ಥಳದ ಅನ್ನದಾನವು ಅತ್ಯಂತ ಶ್ರೇಷ್ಟವಾಗಿದೆ. ಹಸಿದು ಬಂದ ಭಕ್ತಾದಿಗಳ ಹೊಟ್ಟೆತಣಿಸುವ ಕೈಂಕರ್ಯ ನಾಡು ಕಂಡು ಕೇಳರಿಯದ ಸೋಜಿಗವಾಗಿದೆ. ಭಯಗೊಂಡವನಿಗೆ ಅಭಯವನ್ನು ಕರುಣಿಸುವ ದೇಗುಲವಾಗಿದೆ ಧರ್ಮಸ್ಥಳ. ಕೋರ್ಟು ಮೆಟ್ಟಿಲು ಏರಬೇಕಾಗಿದ್ದ ಅದೆಷ್ಟೋ ಸಂಗತಿಗಳು ಧರ್ಮಾಧಿಕಾರಿಯವರ ಸನ್ನಿಧಾನದಲ್ಲಿ ಮಂಗಳವನ್ನು ಹಾಡಿವೆ. ಲಕ್ಷಾಂತರ ಜನರಿಗೆ ಸ್ವ ಉದ್ಯೋಗದ ಪಾಠವನ್ನು ಬೋಧಿಸಿ ಯುವ ಜನತೆಯ ಬಾಳ ದೀವಿಗೆಯನ್ನು ಬೆಳಗಿಸಿದೆ.

ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!