
ಧರ್ಮಸ್ಥಳ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಯಲ್ಲಿ ಇರುವ ಪ್ರದೇಶ. ಒಂದಷ್ಟು ಮಂದಿ ಹಿಂದೂಗಳ ಧರ್ಮ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಏನೆಲ್ಲಾ ಮಾಡಿದರು ಎನ್ನುವುದು ಇಡೀ ರಾಜ್ಯವೇ ನೋಡಿದೆ. ಬರ್ಬರವಾಗಿ ಸಾವಿಗೀಡಾದ ಮುಗ್ಧೆ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಒಂದಷ್ಟು ವರ್ಗ ಹೋರಾಟ ಮಾಡುತ್ತಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡು ಆಕೆಗೆ ನ್ಯಾಯ ಕೊಡಿಸುವುದನ್ನು ಬಿಟ್ಟು, ರಾಜಕೀಯ ಲಾಭಕ್ಕಾಗಿ ಬಳಿಸಿಕೊಂಡರು. ಎಐ ಮೂಲಕ ನಕಲಿ ವಿಡಿಯೋ ಸೃಷ್ಟಿಸಿ ಈ ಧರ್ಮದ ಸ್ಥಳವನ್ನು ಅಪವಿತ್ರ ಮಾಡುವ ದೊಡ್ಡ ಜಾಲವೇ ಹುಟ್ಟುಹಾಕಿಕೊಂಡಿತು. ಒಂದೊಂದೇ ಪಾತ್ರಗಳು ಸೃಷ್ಟಿಯಾಗತೊಡಗಿದವು. ಸದ್ಯ ಅವರ ಮುಖವಾಡವೆಲ್ಲಾ ಕಳಚಿ ಬಿದ್ದಿದೆ. ನಿಜವಾಗಿಯೂ ಸೌಜನ್ಯಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವವರ ದಾರಿಯನ್ನೇ ತಪ್ಪಿಸಿದ್ದು ಮಾತ್ರ ಶೋಚನೀಯ.
ಇಷ್ಟೆಲ್ಲವುಗಳ ನಡುವೆಯೂ, ಧರ್ಮಸ್ಥಳದ ಮಾನವನ್ನು ಹರಾಜು ಹಾಕಬೇಕು ಎನ್ನುವ ಈ ವಿಕೃತ ಬುದ್ಧಿಗೆ ಸವಾಲು ಎನ್ನುವಂತೆ ಭಕ್ತಾದಿಗಳು ಧರ್ಮಸ್ಥಳಕ್ಕೆ ಬರುವುದಂತೂ ನಿಂತಿಲ್ಲ. ಧರ್ಮಭೇದವಿಲ್ಲವೇ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಇದೀಗ ಮುಸ್ಲಿಮರ ತಂಡವೊಂದು ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಭೇಟಿ ಕೊಟ್ಟಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ತನ್ವೀರ್ ಅಹಮ್ಮದ್ ಎನ್ನುವವರು ಪಾದಯಾತ್ರೆ ಹೊರಟಿದ್ದಾರೆ. ಕಂಟೆಂಟ್ ಕ್ರಿಯೇಟರ್ ಅಚ್ಚರಿ ವ್ಯಕ್ತಪಡಿಸಿ, ನಿಮ್ಮ ಧರ್ಮದವರು ಹೀಗೆ ಹೋಗಬಹುದಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕುಸ್ತಿಪಟುವೂ ಆಗಿರುವ ತನ್ವೀರ್ ಅಹಮ್ಮದ್ ಅವರು, ಅದರ ಹೆಸರೇ ಧರ್ಮಸ್ಥಳ. ಯಾವತ್ತೂ ಯಾರಿಗೂ ಭೇದಭಾವ ಮಾಡದ ಸ್ಥಳವದು. ಅದೆಷ್ಟೋ ಮಂದಿಯ ಕಣ್ಣೀರನ್ನು ಒರೆಸಿರುವ ಧರ್ಮಕ್ಷೇತ್ರವದು ಎಂದಿದ್ದಾರೆ. ಒಂದಷ್ಟು ಮಂದಿ ಧರ್ಮಸ್ಥಳದ ಅಪಪ್ರಚಾರ ಮಾಡಲು ಮುಂದಾಗಿರುವುದು ತುಂಬಾ ನೋವಿನ ಸಂಗತಿ ಎಂದಿರುವ ತನ್ವೀರ್ ಅಹಮ್ಮದ್ ಅವರು, ಅಂಥವರು ಯಾರೇ ಆದರೂ ಗುರುತಿಸಿ, ಅವರ ಧರ್ಮ ಯಾವುದೇ ಇದ್ದರೂ ಅವರಿಗೆ ಪಾಠ ಹೇಳಬೇಕಾಗಿದೆ ಎಂದಿದ್ದಾರೆ.
ಅಷ್ಟಕ್ಕೂ ಧರ್ಮಸ್ಥಳಕ್ಕೆ ಅದರದ್ದೇ ಆದ ಇತಿಹಾಸವಿದೆ. ಇಲ್ಲಿ ಧರ್ಮಭೇದ ಮರೆತು ಜನರು ಬರುತ್ತಾರೆ. ಅದೆಷ್ಟೋ ಮಂದಿಗೆ ಇದು ಆಶ್ರಯ ನೀಡಿದೆ. ಹಲವರಿಗೆ ಸಹಾಯ ಮಾಡಿದೆ ಎಂದಿರುವ ತನ್ವೀರ್ ಅಹಮ್ಮದ್ ಅವರು, ನಾನು ನೀರು ಕೇಳಿದ್ರೆ, ನೀನು ಮುಸ್ಲಿಂ ನಾನು ನೀರು ಕೊಡಲ್ಲ ಎಂದು ಹಿಂದೂಗಳು ಹೇಳ್ತಾರಾ ಇಲ್ವಲ್ಲಾ. ಹೀಗೆಯೇ ಇರೋದು ನಮ್ಮ ಸಮಾಜ. ಆದರೆ ಒಂದು ಪರ್ಸೆಂಟ್ ಜನ ಏನೋ ಮಾಡುತ್ತಾರೆ, ಅವರಿಗೆ ತಿಳಿವಳಿಕೆ ನೀಡಬೇಕಿದೆ ಎಂದಿದ್ದಾರೆ.
ತನ್ವೀರ್ ಅವರ ಮಾತು ಕೇಳಲು ಇದರ ಮೇಲೆ ಕ್ಲಿಕ್ ಮಾಡಿ