ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ, ಕಂಡೀಷನ್ ಅಪ್ಲೈ

Published : Nov 13, 2025, 03:10 PM IST
rss

ಸಾರಾಂಶ

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ, ಕಂಡೀಷನ್ ಅಪ್ಲೈ,  ಆದರೆ ಕೆಲ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಬ್ಯಾಂಡ್ ಸಿಬ್ಬಂದಿ, ಸ್ವಯಂ ಸೇವಕರ ಒಟ್ಟು ಸಂಖ್ಯೆ ಸೇರಿದಂತೆ ಕೆಲ ವಿಚಾರದಲ್ಲಿ ಷರತ್ತು ವಿಧಿಸಲಾಗಿದೆ. 

ಕಲಬುರಗಿ (ನ.13) ಕರ್ನಾಟಕದಲ್ಲಿ ಭಾರಿ ಕೋಲಾಹಲ, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಆರ್‌ಎಸ್ಎಸ್ 100ನೇ ವರ್ಷಾಚರಣೆ ಪ್ರಯುಕ್ತ ಚಿತ್ತಾಪುರದಲ್ಲಿ ಆಯೋಜಿಸಿದ್ದ ಆರ್‌ಎಸ್ಎಸ್ ಪಥಸಂಚಲನ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಆಯೋಜಿಸಿದ್ದ ಆರ್‌ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಲಾಗಿತ್ತು. ಇತ್ತ ಒಂದೆಡೆ ದಲಿತ ಸಂಘಟನೆಗಳು ಅದೇ ಸಮಯದಲ್ಲಿ ಮೆರವಣಿಗೆ ನಡೆಸಲು ನಿರ್ಧಸಿತ್ತು. ಹೀಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಮಹತ್ವದ ಆದೇಶ ನೀಡಿದೆ. ಕೆಲ ಷರತ್ತುಗಳ ಮೂಲಕ ನವೆಂಬರ್ 16ರಂದ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದೆ.

ನ.16ರಂದು ಯಾವ ಸಮಯದಲ್ಲಿ ಪಥಸಂಚಲನ

ನವೆಂಬರ್ 16ರಂದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ ಕೋರ್ಟ್ ಸಮಯವನ್ನು ಕಡಿತಗೊಳಿಸಿದೆ. ಅರ್ಜಿಯಲ್ಲಿ ಮಧ್ಯಾಹ್ನ 3.30ರಿಂದ ಸಂಜೆ 6.30 ಗಂಟೆ ವರೆಗೆ ಅವಕಾಶ ಕೋರಲಾಗಿತ್ತು. ಆದರೆ ಕೋರ್ಟ್ ಮಧ್ಯಾಹ್ನ 3.30 ರಿಂದ ಸಂಜೆ 5.45ರ ವರೆಗೆ ಅವಕಾಶ ನೀಡಿದೆ.

300 ಗಣವೇಷಧಾರಿಗಳಿಗೆ ಮಾತ್ರ ಅವಕಾಶ

ಆರ್‌ಎಸ್ಎಸ್ ಪಥಸಂಚಲನದ ವೇಳೆ 850 ಗಣವೇಷಧಾರಿಗಳಿಗೆ ಅವಕಾಶ ನೀಡಬೇಕು ಎಂದು ಕೋರ್ಟ್‌ಗೆ ಆರ್‌ಎಸ್ಎಸ್ ಸಲ್ಲಿಸಿಸಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಆದರೆ ಅರ್ಜಿ ವಿಚಾರಣೆ ವೇಳೆ ಜಡ್ಜ್ ಗಣವೇಷಧಾರಿಗಳ ಸಂಖ್ಯೆ ಇಳಿಕೆ ಮಾಡಲು ಸೂಚಿಸಿದ್ದಾರೆ. ಈ ವೇಳೆ ಕನಿಷ್ಠ 600 ಜನ ಭಾಗವಹಿಸಲು ಅವಕಾಶ ನೀಡುವಂತೆ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದ್ದರು. ಆದರೆ ಜಡ್ಜ್‌ ಕೇವಲ 300 ಗಣವೇಶಧಾರಿಗಳು ಮಾತ್ರ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಬ್ಯಾಂಡ್ ಸಿಬ್ಬಂದಿ ಸಂಖ್ಯೆ 50

ಆರ್‌ಎಸ್ಎಸ್ ಪಥಸಂಚಲನದ ವೇಳೆ ಬ್ಯಾಂಡ್ ಸಿಬ್ಬಂದಿಯನ್ನು ಕೋರ್ಟ್ 25ಕ್ಕೆ ಸೀಮಿತಗೊಳಿಸಿತ್ತು. ಆದರೆ ವಕೀಲ ಅರುಣ್ ಶ್ಯಾಮ್ ಬ್ಯಾಂಡ್ ಸಿಬ್ಬಂದಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್ ಬ್ಯಾಂಡ್ ಸಿಬ್ಬಂದಿ ಸಂಖ್ಯೆ 50ಕ್ಕೆ ಏರಿಸಿದೆ. ಹೀಗಾಗಿ ಬ್ಯಾಂಡ್ ಸಿಬ್ಬಂದಿ ಸೇರಿದಂತೆ ಒಟ್ಟು 350 ಜನ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಸರ್ಕಾರಕ್ಕೆ ಮುಖಭಂಗ

ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಸರ್ಕಾರ ಅವಕಾಶ ನಿರಾಕರಿಸಿತ್ತು. ಆದರೆ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಆರ್‌ಎಸ್ಎಸ್ ಸಲ್ಲಿಸಿದ್ದ ಮನವಿಯಲ್ಲಿ ಗಣವೇಷಧಾರಿಗಳ ಸಂಖ್ಯೆ, ಬ್ಯಾಂಡ್ ಸಿಬ್ಬಂದಿ ಸಂಖ್ಯೆ ಹಾಗೂ ಸಮಯವನ್ನು ಕಡಿತಗೊಳಿಸಿ ಅವಕಾಶ ನೀಡಿದೆ.

 

PREV
Read more Articles on
click me!

Recommended Stories

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!