ಕೋರ್ಟ್ ತೀರ್ಪಿಗೂ ಮುನ್ನ RSS ಪಥಸಂಚಲನಕ್ಕೆ ಅವಕಾಶ ಕೊಟ್ಟಿದ್ದ ಚಿತ್ತಾಪುರ ತಹಶಿಲ್ದಾರ್

Published : Nov 13, 2025, 04:16 PM IST
RSS 100 Years

ಸಾರಾಂಶ

ನಿರ್ಧಾರ ಬದಲು, ಕೋರ್ಟ್ ತೀರ್ಪಿಗೂ ಮುನ್ನ RSS ಪಥಸಂಚಲನಕ್ಕೆ ಅವಕಾಶ ಕೊಟ್ಟಿದ್ದ ಚಿತ್ತಾಪುರ ತಹಶಿಲ್ದಾರ್ ಪತ್ರ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಕಳೆದ ಒಂದು ತಿಂಗಳಿನಿಂದ ಅವಕಾಶ ನಿರಾಕರಿಸಿದ್ದ ತಹಶಿಲ್ದಾರ್ ಕೋರ್ಟ್ ತೀರ್ಪಿಗೂ ಮೊದಲೇ ಗ್ರೀನ್ ಸಿಗ್ನಲ್.

ಚಿತ್ತಾಪುರ (ನ.13) ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್ ) 100ನೇ ವರ್ಷಾಚರಣೆಯನ್ನು ದೇಶಾದ್ಯಂತ ಆಚರಿಸುತ್ತಿದೆ. ಬಹುತೇಕ ಕಡೆ ಗಣವೇಷಧಾರಿಗಳು ಪಥಸಂಚಲನ ಯಶಸ್ವಿಯಾಗಿ ನಡೆಸಿದ್ದಾರೆ. ಯಾವುದೇ ಗದ್ದಲವಿಲ್ಲದೆ ಪಥಸಂಚಲನ ನಡೆದಿದೆ. ಆದರೆ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಭಾರಿ ವಿರೋಧ, ವಿವಾದ, ಅನುಮತಿ ನಿರಾಕರಣೆಗಳಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಂದು (ನ.13) ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ, ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಷರತ್ತುಬದ್ದ ಅವಕಾಶ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಆರ್‌ಎಸ್ಎಸ್ ಚಟುವಟಿಕೆ ನಿಷಧಿಸಲು ಮನವಿ ಮಾಡಿದ ಬಳಿಕ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ಅನುಮತಿ ನಿರಾಕರಣೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕಳೆದ ಒಂದು ತಿಂಗಳಿನಿಂದ ತಹಶಿಲ್ದಾರ್ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಿಸಿದ್ದರು. ಆದರೆ ಇಂದು ಕೋರ್ಟ್ ತೀರ್ಪಿಗೂ ಮೊದಲೇ ನಿರ್ಧಾರ ಬದಲಿಸಿ, ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದರು. ಈ ಪತ್ರ ಸುವರ್ಣನ್ಯೂಸ್‌ಗೆ ಲಭ್ವವಾಗಿದೆ.

ಅನುಮತಿ ಆದೇಶ ನ್ಯಾಯಾಲಕ್ಕೆ ಸಲ್ಲಿಸಿದ್ದ ಅಡ್ವೋಕೇಟ್

ಕೋರ್ಟ್ ತೀರ್ಪಿಗೂ ಮುನ್ನವೇ ಪಥ ಸಂಚಲನಕ್ಕೆ ಚಿತ್ತಾಪುರ ತಹಶಿಲ್ದಾರ್ ನಾಗಯ್ಯ ಸ್ವಾಮಿ ಅವಕಾಶ ಕೊಟ್ಟಿದ್ದರು. ನವೆಂಬರ್ 12ರಂದು ತಹಸೀಲ್ದಾರ ಆದೇಶ ಪತ್ರ ಹೊರಡಿಸಿದ್ದಾರೆ. ತಹಶಿಲ್ದಾರ್ ಕೂಡ ಷರತ್ತುಬದ್ದ ಅನುಮತಿ ನೀಡಿದ್ದರು. ತಹಶಿಲ್ದಾರ್ ನೀಡಿದ್ದ ಶರತ್ತುಬದ್ದ ಅನುಮತಿ ನೀಡಿದ ಪ್ರತಿಯನ್ನು ಇಂದು ನ್ಯಾಯಾಲಯಕ್ಕೆ ಅಡ್ವೋಕೇಟ್ ಜನರಲ್ ಸಲ್ಲಿಸಿದ್ದರು. ಅಕ್ಟೋಬರ್ ತಿಂಗಳ 13ರಂದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ಕೋರಿ ಆರ್‌ಎಸ್ಎಸ್ ಅರ್ಜಿ ಸಲ್ಲಿಸಿತ್ತು. ಈ ವೇಳೆ ಹೆಚ್ಚಿನ ತಹಶಿಲ್ದಾರ್ ಹೆಚ್ಚಿನ ವಿವರಣೆ ಕೇಳಿದ್ದರು. ಇದರಂತೆ ಮತ್ತೆ 19ರಂದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿತ್ತು. ಸುದೀರ್ಘ ಒಂದು ತಿಂಗಳ ಬಳಿಕ ತಹಶಿಲ್ದಾರ್ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದಾರೆ.

ತಹಶಿಲ್ದಾರ್ ಅನಮತಿ ಆದೇಶದಲ್ಲಿ 300 ಗಣವೇಷಧಾರಿಗಳು ಹಾಗೂ 25 ಬ್ಯಾಂಡ್ ಸಿಬ್ಬಂದಿ ಮಾತ್ರ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಬೇಕು ಎಂದು ಆದೇಶ ನೀಡಿದ್ದರು. ಇದೇ ವಿಚಾರವನ್ನು ಇಂದು ಕಲಬುರಗಿ ಹೈಕೋರ್ಟ್ ಪೀಠ ಹೇಳಿತ್ತು. ಆದರೆ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಮನವಿ ಹಿನ್ನಲೆಯಲ್ಲಿ ಬ್ಯಾಂಡ್ ಸಿಬ್ಬಂದಿ ಸಂಖ್ಯೆಯನ್ನು 50ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಒಟ್ಟು 350 ಮಂದಿ ಚಿತ್ತಾಪುರದ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೆಸರು, ವಿಳಾಸ, ಮಾರ್ಗ ವಿವರಣೆ

ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಗಣವೇಶಧಾರಿಗಳ ಹೆಸರು, ವಿಳಾಸ ನೀಡಬೇಕು. ಮೊದಲ ಸೂಚಿಸಿದ ಮಾರ್ಗದಲ್ಲೇ ಮಾತ್ರ ಆರ್‌ಎಸ್ಎಸ್ ಪಥಸಂಚಲನ ಸಾಗಬೇಕು. ನೀಲ ನಕ್ಷ ನೀಡಿದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಹೋಗುವಂತಿಲ್ಲ.ವಥಸಂಚಲನ ಹಾಗೂ ಕಾರ್ಯಕ್ರಮವನ್ನು 2025 ನೇ ನವೆಂಬರ್ 16 ನೇ ದಿನಾಂಕದೆಂದು ಮಧ್ಯಾಹ್ನ 3-00 ಗಂಟೆಯಿಂದ ಸಂಜೆ 5-30 ರ ನಡುವೆ ನಡೆಸಿ ಪೂರ್ಣಗೊಳಿಸಬೇಕು ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಹಶಿಲ್ದಾರ್ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಗಳಾದ ಬಜಾಜ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕ ಪಂಚಾಯತ ಕಾರ್ಯಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ಸರ್ಕಲದಿಂದ ಮರಳಿ ಬಜಾಜ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥ ಸಂಚಲನ ಕೈಗೊಳ್ಳುವುದು. ಬೇರೆ ಯಾವುದೇ ಮಾರ್ಗಗಳನ್ನು ಬಳಸುವಂತಿಲ್ಲ ಎಂದು ಆದೇಶ ಪತ್ರದಲ್ಲಿ ಹೇಳಿದ್ದಾರೆ.

ಧ್ವಜಗಳು, ಬ್ಯಾನರ್ಗಗಳು, ಬಂಟಿಂಗ್‌ಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಹಾಗೂ ಬ್ಯಾನರ ಮತ್ತು ಬಂಟಿಂಗ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು.ಸಮಾರಂಭದ ಆಯೋಜಕರು ಹಾಗೂ ಭಾಗವಹಿಸವವರು ಕಾರ್ಯಕ್ರಮಕ್ಕೆ ಸಂಭಂದಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಸ್ಪಷ್ಟವಾಗಿ ತಹಶಿಲ್ದಾರ್ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

PREV
Read more Articles on
click me!

Recommended Stories

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!