
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ ಪ್ರಕರಣದಲ್ಲಿ ಪ್ರತಿದಿನ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿರುವ ನಡುವೆ, ಜಯಂತ್ ಟಿ ನೀಡಿದ ಹೇಳಿಕೆಗಳು ಈಗ ಹೊಸ ಚರ್ಚೆಗೆ ಕಾರಣವಾಗಿವೆ. ಜಯಂತ್ ಟಿ ಹೇಳುವಂತೆ, ಶವ ಹೂತಿರುವ ಸ್ಥಳಗಳ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಅವರಿಗೆ ಈಗಾಗಲೇ ಗೊತ್ತಿತ್ತು. ಎಸ್‌ಐಟಿ ರಚನೆಗಿಂತ ಮುಂಚೆಯೇ ಗಿರೀಶ್ ಮಟ್ಟಣ್ಣನವರ್ ಅವರು ಚಿನ್ನಯ್ಯನ ಜೊತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರೆಂದು ಆರೋಪಿಸಿದ್ದಾರೆ. ಆದರೆ ಚಿನ್ನಯ್ಯ ಸ್ಥಳಗಳನ್ನು ಬದಲಿಸಿದ ಕಾರಣ, ಹೂತಿರುವ ಶವಗಳ ಪತ್ತೆ ಇನ್ನೂ ಆಗಿಲ್ಲವೆಂದು ಜಯಂತ್ ಟಿ ಸ್ಪಷ್ಟಪಡಿಸಿದ್ದಾರೆ.
ಶವ ಹೂತಿರುವ ಸ್ಥಳ ಗಿರೀಶ್ ಮಟ್ಟಣ್ಣನವರ್ ಗೂ ಗೊತ್ತು. ಎಸ್ ಐಟಿ ರಚನೆಗೊ ಮುಂಚೆ ಗಿರೀಶ್ ಮಟ್ಟಣ್ಣನವರ್ ಚಿನ್ನಯ್ಯ ಜೊತೆ ಎಲ್ಲಾ ಸ್ಥಳಕ್ಕೂ ಭೇಟಿ ಕೊಟ್ಟಿದ್ದಾರೆ. ಚಿನ್ನಯ್ಯ ಈಗ ಜಾಗ ಬದಲಿಸಿದ್ದಾನೆ. ಹಾಗಾಗಿ ಕೂತಿರುವ ಶವಗಳ ಪತ್ತೆಯಾಗಿಲ್ಲ. ಚಿನ್ನಯ್ಯನನ್ನು ಕರೆದುಕೊಂಡು ಸ್ವಾಮೀಜಿ ಬಳಿ ಹೋಗಲಾಗಿತ್ತು. ಅವರೊಬ್ಬ ಪ್ರತಿಷ್ಠಿತ ಸ್ವಾಮೀಜಿ ಹೆಸರು ಈಗ ಬಹಿರಂಗಪಡಿಸಲ್ಲ. ಸ್ವಾಮೀಜಿಯ ಎದುರು ಸುಳ್ಳು ಹೇಳಲು ಆಗುತ್ತಾ? ಆ ಸ್ವಾಮೀಜಿಗೆ ಎಲ್ಲವೂ ಗೊತ್ತು ಕಾಲ ಬಂದಾಗ ಹೆಸರು ಬಹಿರಂಗವಾಗುತ್ತೆ. ನಾನು ಸ್ವಾಮೀಜಿಯ ಭೇಟಿ ವೇಳೆ ಹೋಗಿಲ್ಲ. ಚಿನ್ನಯ್ಯನನ್ನು ಸ್ವಾಮೀಜಿಯ ಬಳಿ ಕರೆದುಕೊಂಡು ಹೋಗಲಾಗಿತ್ತು! ಎಂದಿದ್ದಾರೆ.
ಜಯಂತ್ ಟಿ ಪ್ರಕಾರ ಚಿನ್ನಯ್ಯನನ್ನು ಒಮ್ಮೆ ಪ್ರತಿಷ್ಠಿತ ಸ್ವಾಮೀಜಿಯೊಬ್ಬರ ಬಳಿ ಕರೆದುಕೊಂಡು ಹೋಗಲಾಗಿತ್ತು. ಸ್ವಾಮೀಜಿಯ ಎದುರು ಸುಳ್ಳು ಹೇಳಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದ ಅವರು, ಆ ಸ್ವಾಮೀಜಿಗೆ ಎಲ್ಲವೂ ಗೊತ್ತಿದೆ ಆದರೆ ಕಾಲ ಬಂದಾಗಲೇ ಅವರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ. “ನಾನು ಸ್ವಾಮೀಜಿಯ ಭೇಟಿ ವೇಳೆ ಹಾಜರಿರಲಿಲ್ಲ. ಆದರೆ ಚಿನ್ನಯ್ಯ ಅವರನ್ನು ಸ್ವಾಮೀಜಿಯ ಬಳಿ ಕರೆದೊಯ್ಯಲಾಗಿತ್ತು,” ಎಂದು ಜಯಂತ್ ತಿಳಿಸಿದ್ದಾರೆ.
ಜಯಂತ್ ಟಿ ತಮ್ಮ ಮನೆಗೆ ನಡೆದ ದಾಳಿಗೆ ಪ್ರತಿಕ್ರಿಯಿಸಿ, ನಾನು ಕಳ್ಳತನ ಮಾಡಿಲ್ಲ, ಅತ್ಯಾ8ಚಾರ ಮಾಡಿಲ್ಲ, ಕೊ8ಲೆ ಮಾಡಿಲ್ಲ. ಹಾಗಾಗಿ ನನಗೆ ಭಯವಿಲ್ಲ. ನಾನು ಊರಲ್ಲೇ ಇದ್ದೆ. ಕರೆದಿದ್ದರೆ ನಾನು ಕೂಡ ಹೋಗಿರುತ್ತಿದ್ದೆ ಎಂದು ಹೇಳಿದರು. ಅವರ ಪ್ರಕಾರ, ದಾಳಿ ವೇಳೆ ಆರ್‌ಟಿಐ ಮೂಲಕ ಪಡೆದ ದಾಖಲೆಗಳನ್ನೂ ತೆಗೆದುಕೊಂಡು ಹೋಗಲಾಗಿದೆ. ಅದನ್ನು ಅವರು ದಾಳಿ ಅಲ್ಲ, ಮಮಹರ್ (ಹಿಂಸಾತ್ಮಕ ಒತ್ತಡ) ಎಂದು ಪರಿಗಣಿಸಿದ್ದಾರೆ.
ನಾನು ಚಿನ್ನಯ್ಯನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಊಟ ಮಾಡಿಸಿದ್ದೆ. ಅದಕ್ಕೇ ನನ್ನ ವಿರುದ್ಧ ಮಹಜರು ಮಾಡಲಾಗಿದೆ. ನಾನು ಚಿನ್ನಯ್ಯನಿಗೆ ಬುರುಡೆ ಕೊಟ್ಟಿಲ್ಲ. ಯಾವ ಲ್ಯಾಬ್‌ನಿಂದಲೂ ಅಥವಾ ಮಣ್ಣಿನಿಂದಲೂ ಬುರುಡೆ ತೆಗೆದುಕೊಂಡು ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ತನಿಖೆ ಆಗಬೇಕು ಎಂಬ ಕಾರಣಕ್ಕೆ ಮಾತ್ರ ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಅದಕ್ಕಾಗಿ ಅಲ್ಲಿ ಬುರುಡೆ ನೀಡಿದ್ದೆ ಎಂದು ಜಯಂತ್ ಸ್ಪಷ್ಟಪಡಿಸಿದ್ದಾರೆ.
ಚಿನ್ನಯ್ಯನಿಗೆ ‘ಮಾರಿಹಬ್ಬ’ ಇದೆ ಎಂಬುದು ಅವರಿಗೆ ಆಗಲೇ ಗೊತ್ತಿತ್ತು ಎಂದು ಜಯಂತ್ ಹೇಳಿದ್ದಾರೆ. ಸೌಜನ್ಯ ಪ್ರಕರಣದಲ್ಲೂ ಚಿನ್ನಯ್ಯ ಭಾಗಿಯಾಗಿದ್ದಾನೆ ಎಂಬ ಮಾಹಿತಿ ನನಗಿತ್ತು. ಆದರೆ ಇವತ್ತಿಗೆ ಬಂದಿರುವ ಬೆಳವಣಿಗೆಯಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಚಿನ್ನಯ್ಯ ನಮ್ಮನ್ನೇ ಹಳ್ಳಕ್ಕೆ ತಳ್ಳಿದ್ದಾನೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಜಯಂತ್ ಟಿ ಪ್ರಕಾರ, ಗಿರೀಶ್ ಮಟ್ಟಣ್ಣನವರ್ ಅವರಿಗೆ ಮೊದಲೇ ಹಲವು ಸ್ಥಳಗಳನ್ನು ತೋರಿಸಲಾಗಿತ್ತು, ಆದರೆ ಆ ಸ್ಥಳಗಳಿಂದ ಯಾವುದೇ ಪತ್ತೆಯಾಗಿಲ್ಲ. ಚಿನ್ನಯ್ಯ ಉದ್ದೇಶಪೂರ್ವಕವಾಗಿ ತಪ್ಪು ಸ್ಥಳಗಳನ್ನು ತೋರಿಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನಿಂದ ನಿಜವಾದ ಸ್ಥಳಗಳನ್ನು ಪತ್ತೆಹಚ್ಚುತ್ತಾರೆ. ದೊಡ್ಡ ಮಟ್ಟದಲ್ಲಿ ಹೆಣ್ಣುಮಕ್ಕಳನ್ನು ಹೂತಿರುವ ಸ್ಥಳವನ್ನು ಆತ ಇನ್ನೂ ತೋರಿಸಿಲ್ಲ. ಸ್ವಾಮೀಜಿಯ ಹೆಸರು ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದು ಜಯಂತ್ ಘೋಷಿಸಿದ್ದಾರೆ. ನಮ್ಮ ಹೋರಾಟದಲ್ಲಿ ಯಾವುದೇ ಬಿರುಕು ಇಲ್ಲ. ಕೆಲವರು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಹೋರಾಟ ನ್ಯಾಯಪರ, ಸತ್ಯಪರ ಹೋರಾಟವಾಗಿದ್ದು ಅದು ಮುಂದುವರಿಯುತ್ತದೆ ಎಂದು ಜಯಂತ್ ಸ್ಪಷ್ಟಪಡಿಸಿದ್ದಾರೆ.