ಶಾಸಕರ ಮಾತಲ್ಲಿ ಅಭಿವೃದ್ಧಿ: ಹೊನ್ನಗಿರಿಗೌಡ

By Kannadaprabha News  |  First Published Mar 15, 2023, 4:51 AM IST

ತಾಲೂಕಿನ ರಸ್ತೆಗಳನ್ನು ನೋಡಿದರೆ ಅಭಿವೃದ್ಧಿ ಎಷ್ಟರಮಟ್ಟಿಗೆ ಆಗಿವೆ ಎಂಬುದು ತಿಳಿಯುತ್ತದೆ ಎಂದು ಮುಖಂಡ ಹೊನ್ನಗಿರಿಗೌಡ ಹೇಳಿದರು.


 ಗುಬ್ಬಿ   ತಾಲೂಕಿನ ರಸ್ತೆಗಳನ್ನು ನೋಡಿದರೆ ಅಭಿವೃದ್ಧಿ ಎಷ್ಟರಮಟ್ಟಿಗೆ ಆಗಿವೆ ಎಂಬುದು ತಿಳಿಯುತ್ತದೆ ಎಂದು ಮುಖಂಡ ಹೊನ್ನಗಿರಿಗೌಡ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್‌ ಗ್ಯಾರಂಟಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಶಾಸಕರು ಕೇವಲ ಮಾತಿನಲ್ಲಿಯೇ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವೇ ಬೇರೆಯಾಗಿದೆ ಎಂದು ಕಿಡಿಕಾರಿದರು.

Tap to resize

Latest Videos

ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ನನಗಾಗಲಿ ಅಥವಾ ಜಿ.ಎಸ್‌.ಪ್ರಸನ್ನ ಕುಮಾರ್‌ರವರಿಗಾಗಲಿ ಟಿಕೆಟ್‌ ನೀಡಿದರೆ ಗೆಲ್ಲುತ್ತೇವೆ. ಕಾರ್ಯಕರ್ತರು ಸ್ವಾಭಿಮಾನಿಗಳಾಗಿರುವಂತೆ ಕರೆ ನೀಡಿದರು.

ಮುಖಂಡ ಜಿ.ಎಸ್‌. ಪ್ರಸನ್ನಕುಮಾರ್‌ ಮಾತನಾಡಿ, ಶಾಸಕ ಎಸ್‌. ಆರ್‌. ಶ್ರೀನಿವಾಸ್‌ರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವ ಮೂಲಕ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗುತ್ತಿದೆ. ಪಕ್ಷದ ಸಿದ್ಧಾಂತಗಳಿಗೆ ಅನುಗುಣವಾಗಿ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದರೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ನನ್ನನ್ನು ಪಕ್ಷದಿಂದ ಕಿತ್ತು ಹಾಕುತ್ತೇನೆ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ನಂಬಿಕೆ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಶ್ರೀನಿವಾಸ್‌ ಅವರಂತಹವರನ್ನು ಕರೆತಂದಲ್ಲಿ ಜನರಿಗೆ ಉತ್ತರಿಸಲು ಕಷ್ಟವಾಗುವುದು ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಬಿಜೆಪಿ ಸರ್ಕಾರ ಕೇವಲ ಆಶ್ವಾಸನೆಗಳಿಗೆ ಸೀಮಿತವಾಗಿದ್ದು, ಉದ್ಯಮಿಗಳ ಪರವಾಗಿ ನಿಂತಿದೆ. ಒಳ್ಳೆಯ ದಿನ ಬರುತ್ತದೆ ಎಂದು ಹೇಳುತ್ತಾ ಬೆಲೆಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಟ್ಟೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಣ್ಣ, ಗುಬ್ಬಿ ಉಸ್ತುವಾರಿ ರಿಜ್ವಾನ್‌, ಮುಖಂಡರಾದ ಕೆ.ಆರ್‌.ತಾತಯ್ಯ, ಶಾರದಮ್ಮ ಮೊಹಮ್ಮದ್‌ ಸಾದಿಕ್‌, ಮಂಜುನಾಥ್‌, ಶಂಕರೇಗೌಡ, ರೂಪ, ಹೇಮಂತ್‌, ಸಿದ್ದೇಶ್‌, ರಂಗನಾಥ್‌, ಕೃಷ್ಣಮೂರ್ತಿ ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು. 

ಶೀಘ್ರ ಕಾಂಗ್ರೆಸ್ ಮೊದಲ ಪಟ್ಟಿ

ದಾವಣಗೆರೆ (ಮಾ.14) : ಮಾ.17ರಂದು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹೊನ್ನಾಳಿಯಲ್ಲಿ ಸೋಮವಾರ ಪ್ರಜಾಧ್ವನಿ ಸಮಾವೇಶ(Prajadhwani convention)ಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಸೋಮಣ್ಣ, ನಾರಾಯಣಗೌಡ(V Somanna and Narayanagowda) ಅವರು ಕಾಂಗ್ರೆಸ್ಸಿಗೆ ಬರುವ ವಿಚಾರವೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರಕ್ಕೆ ನಾನು ಹೇಗೆ ಉತ್ತರಿಸಲು ಸಾಧ್ಯ? ಎಂದರು. ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಯಣ ಪುತ್ರನಿಗೆ ಟಿಕೆಟ್‌ ನೀಡುವಂತೆ ಸ್ಥಳೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಕೇಳಿದ್ದಾರೆ. ಈ ಬಗ್ಗೆ ನೋಡೋಣ ಎಂದು ತಿಳಿಸಿದರು.

ನಾನು ಬದುಕಿರೋವರೆಗೂ ಬಿಜೆಪಿ ವಿರೋಧಿಸುವೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಪರ ಇಲೆ ಇದೆ. ಪ್ರಧಾನಿ ಮೋದಿ ಪದೇ ಪದೆ ಬಂದರೂ ಇಲ್ಲಿ ಏನೂ ಆಗುವುದಿಲ್ಲ. ಕಳೆದ ಸಲವೂ ಮೋದಿ ಇಲ್ಲಿಗೆ ಬಂದಿದ್ದರು. ಮೈಸೂರು ಬೆಂಗಳೂರು ಹೈವೇ(Bengaluru-Mysuru Expressway) ಮಾಡಿದ್ದು ಯಾರು? ಆಸ್ಕರ್‌ ಫರ್ನಾಂಡೀಸ್‌ ಸಚಿವರಿದ್ದಾಗ ನಾನೇ ಅದನ್ನು ಮಂಜೂರು ಮಾಡಿಸಿದ್ದೆ. ಈಗ ಬಿಜೆಪಿಯವರು ಹೆದ್ದಾರಿ ಶ್ರೇಯ ತೆಗೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರಗತಿಯಲ್ಲಿದ್ದರೂ ತರಾತುರಿಯಲ್ಲಿ ನರೇಂದ್ರ ಮೋದಿ ಕರೆಸಿ, ಉದ್ಘಾಟನೆ ಮಾಡಿಸಿದ್ದಾರೆ ಎಂದು ಟೀಕಿಸಿದರು.

ಮಾಡಾಳು ಬಂಧಿಸಬೇಕಿತ್ತಲ್ಲವæೕ?: ಸಿದ್ದು

ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(Madalu Virupakshappa) ಪುತ್ರ .40 ಲಕ್ಷ ಲಂಚದ ಹಣದ ಸಮೇತ ಸಿಕ್ಕಿ ಬಿದ್ದಿದ್ದು, ತಕ್ಷಣವೇ ಮಾಡಾಳು ಅವರನ್ನು ಪೊಲೀಸರು ಬಂಧಿಸಬೇಕಿತ್ತು. ಅಲ್ಲದೆ, ಬಿಜೆಪಿಗೆ ನೈತಿಕತೆ ಇದ್ದಿದ್ದರೆ ಮಾಡಾಳು ವಿರುಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದ ಬಿಜೆಪಿಯವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪರವಾಗಿದ್ದಾರೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.

click me!