ಅಪಘಾತಕ್ಕೆ ತಡೆಯಲು ರಸ್ತೆ ತಿರುವಿನಲ್ಲಿ ಹಾಕಿದ ಹಂಪ್ ಅಪಘಾತಗಳಿಗೆ ಕಾರಣವಾಗುತ್ತಿದೆ. ಮುಡಿಗೆರೆ ತಾಲ್ಲೂಕಿನ ಆಲ್ದೂರು ಪಟ್ಟಣದಲ್ಲಿ ರಸ್ತೆಯ ಹಂಪ್ ಜೀವವೊಂದನ್ನು ಬಲಿ ತೆಗೆದುಕೊಂಡಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.14) : ತಾಲ್ಲೂಕಿನ ಆಲ್ದೂರು ಪಟ್ಟಣದಲ್ಲಿ ರಸ್ತೆಯ ಹಂಪ್(Road hump) ಜೀವವೊಂದನ್ನು ಬಲಿ ತೆಗೆದುಕೊಂಡಿದೆ.
undefined
ಆಲ್ದೂರು ಮೂಡಿಗೆರೆ ರಸ್ತೆಯಲ್ಲಿ ಪೂರ್ಣಪ್ರಜ್ಞಾ ಶಾಲೆಯ ಸಮೀಪ ರಸ್ತೆಯ ಹಂಪ್ ದಾಟುವಾಗ ಸ್ಕೂಟಿಯಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಆಲ್ದೂರಿನ ಅಶ್ರಫ್ ಉನ್ನೀಸ್ ಎಂದು ಗುರುತಿಸಲಾಗಿದೆ.
Purvanchal Expressway ಅತೀವೇಗದಿಂದ ಚಲಿಸಿದ ಕಾರು ಅಪಘಾತ, ಟ್ರಕ್‌ಗೆ ಡಿಕ್ಕಿಯಾಗಿ ಐವರ ಸಾವು!
ಮೊಹಮ್ಮದ್ ಮುಸ್ತಾಫ ಅವರು ಅಶ್ರಫ್ ಉನ್ನೀಸ ಅವರನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಮೂಡಿಗೆರೆಯಿಂದ ಆಲ್ದೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಯ ಸಮೀಪ ರಸ್ತೆಯ ಹಂಪ್ ಮೂಲಕ ಸಾಗುವಾಗ ಸ್ಕೂಟಿಯ ಹಿಂಬದಿ ಕುಳಿತ್ತಿದ್ದ ಅಶ್ರಫ್ ಉನ್ನೀಸ ಅವರು ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಸ್ಕೂಟಿಯಿಂದ ಬಿದ್ದ ರಭಸಕ್ಕೆ ಅವರ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಸಾವನ್ನಪ್ಪಿದ್ದಾರೆ.
ಅವೈಜ್ಞಾನಿಕ ಹಂಪ್ :
ಆಲ್ದೂರು ಪೂರ್ಣಪ್ರಜ್ಞಾ ಶಾಲೆಯ ಸಮೀಪ ಅನೇಕ ವರ್ಷಗಳಿಂದ ಇರುವ ರಸ್ತೆಯ ಹಂಪ್ ಅವೈಜ್ಞಾನಿಕವಾಗಿದೆ. ನಿಗದಿಗಿಂತ ಅತಿಹೆಚ್ಚು ಎತ್ತರವಿರುವ ಹಂಪ್ ಪ್ರಯಾಣಿಕರಿಗೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ಹಂಪ್ ಬಗ್ಗೆ ಅರಿವಿಲ್ಲದೇ ವೇಗವಾಗಿ ಬರುವ ಪ್ರಯಾಣಿಕರು ಇದ್ದಕ್ಕಿದಂತೆ ಎದುರಾಗುವ ಎತ್ತರದ ಹಂಪ್ ಕಂಡು ನಿಯಂತ್ರಣ ಕಳೆದುಕೊಂಡು ಅಪಘಾತಗಳಿಗೆ ಬಲಿಯಾಗುತ್ತಾರೆ.
ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!
ರಸ್ತೆಯ ಬದಿ ಶಾಲೆ ಇದೆ ಮತ್ತು ರಸ್ತೆಯ ತಿರುವು ಇದೆ ಎಂದು ಬಹಳ ವರ್ಷಗಳ ಹಿಂದೆ ಹಂಪ್ ಹಾಕಲಾಗಿದೆ. ಅಪಘಾತ ತಡೆಯಲು ಹಾಕಿದ ಈ ಹಂಪ್ ಅಪಘಾತಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ ರಸ್ತೆಗೆ ಹಾಕಿರುವ ಹಂಪ್ ಅವೈಜ್ಞಾನಿಕವಾಗಿದೆ. ಮಿತಿಗಿಂತ ಎತ್ತರದಲ್ಲಿದೆ. ಈ ಕಾರಣಕ್ಕೆ ವೇಗವಾಗಿ ಬರುವ ವಾಹನಗಳು ಹಂಪ್ ದಾಟುವಾಗ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಾಗಿ ಇಂಥ ಅವೈಜ್ಞಾನಿಕ ಹಂಪ್ ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.