Dakshina Kannada: ಗೋಡ್ಸೆ ವಂಶಸ್ಥರಿಂದ ಕರಾವಳಿಯ ಸಾಮರಸ್ಯ ಹಾಳು: ಸಿದ್ದರಾಮಯ್ಯ

Published : Mar 20, 2022, 05:52 AM IST
Dakshina Kannada: ಗೋಡ್ಸೆ ವಂಶಸ್ಥರಿಂದ ಕರಾವಳಿಯ ಸಾಮರಸ್ಯ ಹಾಳು: ಸಿದ್ದರಾಮಯ್ಯ

ಸಾರಾಂಶ

*  ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋ ಅಭಿಯಾನ ಸಮಾರೋಪ *  ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗದ ಬಿಜೆಪಿ ಇರಬೇಕಾ?  *  ಸಮಾಜ ಸಾಮರಸ್ಯದಿಂದ ಬದುಕಬೇಕಾದರೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು 

ಬಂಟ್ವಾಳ(ಮಾ.20):  ಕರಾವಳಿಯ ಸಾಮರಸ್ಯವನ್ನು ಗೋಡ್ಸೆ ವಂಶಸ್ಥರು ಹಾಳುಮಾಡುತ್ತಿದ್ದಾರೆ. ಗೋಡ್ಸೆ(Nathuram Godse) ಒಬ್ಬ ಮತಾಂಧನಾಗಿದ್ದು, ಆರ್‌ಎಸ್‌ಎಸ್‌(RSS), ಬಜರಂಗದಳ, ಶ್ರೀರಾಮ ಸೇನೆ ಮತ್ತು ಸಂಘ ಪರಿವಾರದವರೆಲ್ಲ ಗೋಡ್ಸೆ ಮತ್ತು ಸಾವರ್ಕರ್‌ ಅನುಯಾಯಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದರು.

ಪಾಣೆಮಂಗಳೂರು ಬ್ಲಾಕ್‌ನ ಯುವಕಾಂಗ್ರೆಸ್‌ ವತಿಯಿಂದ ನಡೆದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಸ್ವಾತಂತ್ರ್ಯಕ್ಕಾಗಿ(Freedom) ಆರೆಸ್ಸೆಸ್‌ ನಾಯಕರು ಹೋರಾಡಿದ ಸಾಕ್ಷಿಗಳು ಇವೆಯಾ? ಎಂದ ಅವರು, ಇವರಿಂದ ದೇಶ ಭಕ್ತಿ ಪಾಠ ಕಲಿಯಬೇಕಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಸಾಫ್ಟ್, ಹಾರ್ಡ್‌ ಹಿಂದುತ್ವ ಎಂದಿಲ್ಲ, ಹಿಂದೂ ಧರ್ಮದಲ್ಲಿ ನಂಬಿಕೆ ಇದೆ: ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ(Shivamogga) ತ್ತೀಚೆಗೆ ನಡೆದ ಹಿಂದೂ(Hindu0  ಸಂಘಟನೆಯ ಯುವಕನ ಕೊಲೆಗೆ(Murder) ರಾಜಕೀಯ ಬಣ್ಣ ಕಟ್ಟಿ ಅದರಿಂದ ಲಾಭ ಪಡೆಯಲು ಮುಂದಾಗುತ್ತಾರೆ. ಈಶ್ವರಪ್ಪ(KS Eshwarappa) ಎಂಬ ಪೆದ್ದ, ಮತಾಂಧ, 144 ಸೆಕ್ಷನ್‌ ಇದ್ದರೂ ಶವ ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಸರ್ಕಾರದಿಂದ ಲಕ್ಷಾಂತರ ರು. ಪರಿಹಾರ ನೀಡುವಂತೆ ಮಾಡಿದ ಅವರು ಬೆಳ್ತಂಗಡಿಯಲ್ಲಿ ನಡೆದ ದಿನೇಶ್‌ ಕೊಲೆಗೆ ಯಾಕೆ ಪರಿಹಾರ ನೀಡಲು ಒತ್ತಾಯಿಸಿಲ್ಲ. ಅದೂ ನಾನು ಮಾಡಿದ ಒತ್ತಾಯದಿಂದ ಸರ್ಕಾರ ಅಲ್ಪಸ್ವಲ್ಪ ಪರಿಹಾರ ನೀಡಿದೆ ಎಂದು ಅವರು ಹೇಳಿದರು.

ಯುವ ಸಮುದಾಯ ಬಿಜೆಪಿಯನ್ನು(BJP) ಕಿತ್ತು ಎಸೆಯುತ್ತೇವೆ ಎಂಬ ಸಂಕಲ್ಪವನ್ನು ಮಾಡಿದರೆ ಮಾತ್ರ ದೇಶ, ರಾಜ್ಯ ಉಳಿಯುತ್ತೆ. ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗದ ಬಿಜೆಪಿ ಇರಬೇಕಾ? ಸಮಾಜ ಸಾಮರಸ್ಯದಿಂದ ಬದುಕಬೇಕಾದರೆ ರಾಜ್ಯದಲ್ಲಿ(Karnataka) ಕಾಂಗ್ರೆಸ್‌(Congress) ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್‌ ಸಮಾಜದ ಎಲ್ಲ ವರ್ಗದವರನ್ನು ಪ್ರೀತಿ ಮಾಡಿದ ಏಕೈಕ ಪಕ್ಷವಾಗಿದ್ದು, ದೇಶದ ಜಾತ್ಯತೀತ ಚಳುವಳಿಯನ್ನು ಬಲಿಷ್ಠ ಗೊಳಿಸಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಿ.ಎ.ರಹೀಂ, ಮಹಮ್ಮದ್‌ ಶಫಿ, ಬಿ.ಮೋಹನ್‌ ಅವರು ಕಾಂಗ್ರೇಸ್‌ ಸೇರ್ಪಡೆಯಾದರು. ಸುಧೀರ್‌ ಮರೋಳಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಮಂಜುನಾಥ ಭಂಡಾರಿ, ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಎಚ್‌. ಖಾದರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕ್ಮಾನ್‌, ಯುವಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮಿಥುನ್‌ ರೈ ಮತ್ತಿತರರು ಉಪಸ್ಥಿತರಿದ್ದರು.

ನಾವು ಹಿಂದೂ ಧರ್ಮದ ಮೇಲೆ ‌ನಂಬಿಕೆ ಇಟ್ಟವರು: ಸಿದ್ದರಾಮಯ್ಯ

ಪಾಣೆಮಂಗಳೂರು ಯುವ ಕಾಂಗ್ರೆಸ್‌ ಅಧ್ಯಕ್ಷ ನವಾಝ್‌ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ, ನೌಫಲ್‌ ಕುಡ್ತಮುಗೇರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಬಿ.ಸಿ.ರೋಡಿನ ಮುಖ್ಯ ವೃತ್ತದಿಂದ ಕೈಕಂಬದವರೆಗೆ ಸಾಮರಸ್ಯ ನಡಿಗೆ ಪಾದಯಾತ್ರೆ ನಡೆಯಿತು.

ಬಜರಂಗದಳ ಮುಖಂಡನಿಂದ ಕೊಲೆ: ಮೃತನ ಕುಟುಂಬಕ್ಕೆ 1 ಲಕ್ಷ ಪರಿಹಾರ ಕೊಟ್ಟ ಸಿದ್ದರಾಮಯ್ಯ

ಮಂಗಳೂರು: ಬಜರಂಗದಳದ (Bajrangdal) ಮುಖಂಡನಿಂದ ಗಂಭೀರ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ನಿವಾಸಕ್ಕೆ  ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.‌ ದಿನೇಶ್ ಮನೆಗೆ ಭೇಟಿ ನೀಡಿ ದಿನೇಶ್ ‌ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಆ ಬಳಿಕ ಮೃತ ದಿನೇಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ, ದಿನೇಶ್ ತಾಯಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ನಗದು ರೂಪದಲ್ಲಿ ಧನ ಸಹಾಯ ಮಾಡಿದರು. ಅಲ್ಲದೇ ಮಗನ ಸಾವಿನ ನ್ಯಾಯಕ್ಕಾಗಿ ಧ್ವನಿ ಎತ್ತುವ ಭರವಸೆ ನೀಡಿದರು. 
 

PREV
Read more Articles on
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ