ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠ ಮತ್ತು ಉತ್ತಮವಾಗಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶಿಗ್ಗಾವಿ (ಆ.21) : ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠ ಮತ್ತು ಉತ್ತಮವಾಗಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai)ಅಭಿಪ್ರಾಯಪಟ್ಟರು. ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರು ವಕೀಲರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್(Dr.B.R.Ambedkar) ಅವರು ನ್ಯಾಯಾಂಗಕ್ಕೆ ವಿಶೇಷ ಸ್ಥಾನ, ಜವಾಬ್ದಾರಿ ಮತ್ತು ಅಧಿಕಾರ ನೀಡಿದ್ದಾರೆ. ನಾವು ಈಚೆಗೆ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಆಚರಿಸಿದ್ದೇವೆ. ಅದು 75ನೇ ಲೋಕತಂತ್ರ/ ಜನತಂತ್ರದ ಆಚರಣೆಯೂ ಆಗಿದೆ ಎಂದರು.
undefined
ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ
ಬೇರೆ ಬೇರೆ ದೇಶಗಳಲ್ಲಿ ವ್ಯವಸ್ಥೆ ಬುಡಮೇಲಾಗಿರುವುದನ್ನು ಕಾಣುತ್ತೇವೆ. ಆದರೆ, ಭಾರತದಲ್ಲಿ ತತ್ವ, ಆದರ್ಶಗಳ ಬುನಾದಿ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವ ಜೀವಂತವಾಗಿದೆ. ಇಲ್ಲದಿದ್ದರೆ ಜನರಿಗೆ ನ್ಯಾಯ ಸಿಗುವುದಿರಲಿ, ಬದುಕಿಗೆ ಸಮಭಾವ ಸಿಗುವುದು ಕೂಡ ಕಷ್ಟವಾಗುತ್ತಿತ್ತು ಎಂದು ಹೇಳಿದರು. ದೇಶದಲ್ಲೇ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮವಾಗಿದೆ. ನಮ್ಮ ಸರ್ಕಾರ ₹800 ಕೋಟಿ ಅನುದಾನವನ್ನು ನ್ಯಾಯಾಲಯಗಳ ಮೂಲಸೌಕರ್ಯಕ್ಕೆ ಮೀಸಲಿಟ್ಟಿದೆ. ಬಹು ದಿನಗಳ ಬೇಡಿಕೆಯಾಗಿದ್ದ, ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕಿನ ವಕೀಲರ ಸಂಘದ ಕಟ್ಟಡಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಖರತೆ ಇದ್ದಾಗ ಪ್ರಕರಣಗಳು ತ್ವರಿತ ಗತಿಯಲ್ಲಿ ವಿಲೇವಾರಿ ಆಗುತ್ತವೆ. ನನಗೂ ವಕೀಲ ವೃತ್ತಿಗೂ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಎಸ್.ಆರ್. ಬೊಮ್ಮಾಯಿ ವಕೀಲರಾಗಿದ್ದರು. ತಾಯಿ ತಂದೆ ಕೂಡ ವಕೀಲ ವೃತ್ತಿಯಲ್ಲಿದ್ದರು ಎಂದರು. ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿರುವ ಕಾರಣ ಬಂಡವಾಳ ಹೂಡಿಕೆಗೆ ಬಹುರಾಷ್ಟ್ರೀಯ ಕಂಪನಿಗಳು ಆಸಕ್ತಿ ತೋರುತ್ತಿವೆ. ನ್ಯಾಯಾಂಗ ಮತ್ತು ವಕೀಲರ ನಡುವಿನ ವೃತ್ತಿ ಸಂಬಂಧ ಉತ್ತಮವಾಗಿದ್ದರೆ ಕಕ್ಷಿದಾರರಿಗೆ ಬೇಗ ನ್ಯಾಯ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.
.2ರಂದು ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ
ಹೈಕೋರ್ಟ್ ನ್ಯಾಯಾಧೀಶ(High Court Judge) ಸಚಿನ ಎಸ್.ಮಗದುಮ್(Minister S.Magdum) ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಬಿ.ಸಿ.ಪಾಟೀಲ(B.C.Patil), ಶಾಸಕ ವಿರೂಪಾಕ್ಷಪ್ಪ(Virupakshappa MLA) ಬಳ್ಳಾರಿ, ಶಿಗ್ಗಾವಿ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಬೆಂಡಿಗೇರಿ, ಜಿಲ್ಲಾ ನ್ಯಾಯಾಧೀಶರಾದ ಯಾದವ ವನಮಾಲ ಆನಂದರಾವ್ ಹಾಗೂ ವಕೀಲರು ಇದ್ದರು.