ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದಲ್ಲಿ ಸ್ಮಶಾನ ಭೂಮಿ ನೀಡುವಂತೆ ಶವವಿಟ್ಟು ಪ್ರತಿಭಟನೆ

By Suvarna NewsFirst Published Nov 10, 2022, 10:16 PM IST
Highlights

ಇಡೀ  ಗ್ರಾಮಕ್ಕೆ‌ ಇಲ್ಲ‌ ಸ್ಮಶಾನ ಭೂಮಿ, ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬ್ಯಾಲಾಳ ಗ್ರಾಮದಲ್ಲಿ ನಡೆದಿದೆ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ನ.10): ಇಡೀ  ಗ್ರಾಮಕ್ಕೆ‌ ಇಲ್ಲ‌ ಸ್ಮಶಾನ ಭೂಮಿ, ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬ್ಯಾಲಾಳ ಗ್ರಾಮದಲ್ಲಿ ನಡೆದಿದೆ. ಇನ್ನು ಈ ಕುರಿತು ತಹಶೀಲ್ದಾರ್, ಎಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕ್ಕೊಂಡರು ಅಧಿಕಾರಿಗಳು ತಲೆ ಕೆಡಸಿಕ್ಕೊಳ್ಳುತ್ತಿಲ್ಲ ಎಂದು ಸುವರ್ಣ ನ್ಯೂಸ್ ಮುಂದೆ ಅಳಲು ತೋಡಿಕೊಂಡರು. ಬ್ಯಾಲಾಳ ಗ್ರಾಮದಲ್ಲಿ 4000 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರಾದ್ರೂ ತಿರಿಕ್ಕೊಂಡರೆ ಶವ ಹೂಳಲು ಜಾಗವಿಲ್ಲ ಎಂದು ಗ್ರಾಮಸ್ಥರು ಸ್ವಂತ ಸ್ಮಶಾನ ಭೂಮಿಗಾಗಿ ಹೋರಾಟ ಮಾಡುತ್ತಿದ್ದರು. ಶವ ಸಂಸ್ಕಾರ ಮಾಡಲು ಜಾಗವಿಲ್ಲ. ಇದಕ್ಕಾಗಿ ಆ ಗ್ರಾಮದ ಗ್ರಾಮಸ್ಥರು ಪರದಾಡುವಂತಾಗಿದೆ, ಶವವನ್ನಿಟ್ಟುಕ್ಕೊಂಡು ಹೋರಾಟ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶವವನ್ನ ಇಟ್ಟುಕ್ಕೊಂಡು ಮಹಿಳೆಯರು, ಗ್ರಾಮಸ್ಥರು ಕನ್ನೀರು ಹಾಕುತ್ತಿದ್ದರು. ಅಧಿಕಾರಿಗಳ  ನಿರ್ಲಕ್ಷಕ್ಕೆ ಗ್ರಾಮಸ್ಥರು ಶವವನ್ನ ಹೂಳಲು ಜಾಗವಿಲ್ಲ ಎಂದು ಕೈ ಕೈ ಮಿಲಾಯಿಸಿ ಜಗಳವಾಡಿಕೊಂಡರು. ಆದರೆ  ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿನಿಧಿಸುವ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಬಾ ಕ್ಷೆತ್ರದ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ  ಬ್ಯಾಲಾಳ ಗ್ರಾಮದಲ್ಲಿಯ ಜನರ ಸಮಸ್ಯೆ ಕೇಳೋರಿಲ್ಲ. 

ಕಳೆದ 50 ವರ್ಷಗಳಿಂದ ಆ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸ್ವಂತ ಜಮೀನು ಇಲ್ಲದಕ್ಕೆ ಗ್ರಾಮಸ್ಥರ ಯಾರಾದ್ರೂ ಸಾವನ್ನಪ್ಪಿದ್ರೆ ಹಳ್ಳ, ಬೇರೆ ಬೇರೆಯವರ ಹೊಲದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆದರೆ ಸದ್ಯ ಆ ಗ್ರಾಮಕ್ಕೆ ಶ್ವಾಶ್ವತವಾಗಿ ಸ್ಮಶಾನ ಭೂಮಿ ಬೇಕು ಅಂತ ಈಗಾಗಲೇ ಹೋರಾಟ ಮಾಡಿದ ಬೆನ್ನಲ್ಲಿ ಸರಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ತಹಶಿಲ್ದಾರ ನಿರ್ಲಕ್ಷ್ಯದಿಂದ ಆ ಜನರಿಗೆ ಬಿಡುಗಡೆಯಾದ 18 ಲಕ್ಷ ಹಣದಲ್ಲಿ ಜಮೀನು ಖರೀದಿ ಮಾಡಿಸಿ ಜನರಿಗೆ ಅನೂಕೂಲ ಮಾಡಲು ಗ್ರಾಮದ ಕೆಲ ಪ್ರಭಾವಿ ಜನರು ಮಾತು ಕೇಳಿ ಖರೀದಿಗೆ ದಿನಾಂಕ 09 11 2022 ರಂದು ನವಲಗುಂದ ತಹಶಿಲ್ದಾರ ಕಚೇರಿಗೆ ಕರೆಯಿಸಿ ಖರೀದಿ ಮಾಡಿಸಿಕ್ಕೊಳ್ಳದೆ ಅವರನ್ನ ಹಾಗೆ ಕಳುಹಿಸಿ ಕೊಟ್ಟಿದ್ದಾರೆ.

ಇನ್ನು ನಿನ್ನೆ ಗ್ರಾಮದ ಕೆಲವನ್ನ ಕರೆಯಿಸಿ ಗ್ರಾಮದ ರುದ್ರಗೌಡರ್ ಎಂಬುವರು ಇಗಾಗಲೆ ಭೂಮಿ ಕೊಡಲು ಒಪ್ಪಿಕ್ಕೊಂಡಿದ್ದಾರೆ ಆದರೆ  ಅವರು ಒಪ್ಪಿ 8 ತಿಂಗಳು ಕಳೆದು ಹೋಗಿದೆ ಆದರೆ ತಹಶಿಲ್ದಾರ ಅವರ ನಿರ್ಲಕ್ಷ್ಯದಿಂದ ಖರೀದಿ ಕೆಲಸ ಪೆಂಡಿಂಗ್ ಇರೋದಕ್ಕೆ ಜನರು ಪರದಾಡುತ್ತಿದ್ದಾರೆ.

ಬೆಳಗಾವಿ: 1,146 ಗ್ರಾಪಂಗೆ ಸ್ಮಶಾನ ಭೂಮಿ ಮಂಜೂರು..!

ಇನ್ನು ಗ್ರಾಮದ ಪುಂಡಲಿಕ್ ಎಂಬುವರು ಸಾವನ್ನಪ್ಪಿದ್ರು ಆದರೆ ಸ್ಮಶಾನ ಭೂಮಿ ಖರೀದಿ ಮಾಡಿಸಿ ಕೊಡೋವರೆಗೂ ಶವವಿಟ್ಡು ತಹಶಿಲ್ದಾರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ್ರು ಬಳಿಕ ತಹಶಿಲ್ದಾರ ಗ್ರಾಮಕ್ಕೆ‌ ಬಂದಾಗ ನಮಗೆ ಜಾಗ ಇದೆ, ಸರಕಾರದಿಂದ ಎರಡು ತಿಂಗಳ ಹಿಂದೆ ಹಣ ಬಿಡುಗಡೆಯಾಗಿದೆ ಯಾಕೆ ನೀವು ಹಿಂದೇಟು ಹಾಕುತ್ತಿದ್ದಿರಿ ಎಂದು ತಹಶಿಲ್ದಾರ ಅವರನ್ನ ತರಾಟಗೆ ತೆಗೆದುಕ್ಕೊಂಡರು. ಆದರೆ ಈ ಗ್ರಾಮಸ್ಥರ ರಿಗೆ ದೇವರು ವರ ಕೊಟ್ರೆ ಪೂಜಾರಿ ವರ ಕೊಡ್ತಿಲ್ಲ ಅನ್ನೋ ಹಾಗೆ ಆಗಿದೆ ಗ್ರಾಮಸ್ಥರ ಸದ್ಯದ ಪತಿಸ್ತಿತಿ..ಇನ್ನು ಸ್ಥಳಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾ ಹೋಗುತ್ತಿದ್ದಂತೆ ತಹಶಿಲ್ದಾರ ಅನಿಲ ಬಡಿಗೆರ ಸ್ಥಳಕ್ಕೆ ಬಂದು ನಾಲ್ಕು ದಿನದಲ್ಲಿ ಖರೀದಿ ಮಾಡಿಸಿ ಕೊಡುತ್ತೆನೆ ಎಂದು ಭರವಸೆ ಕೊಟ್ಡಿದ್ದಾರೆ.

ಸ್ಮಶಾನ ಭೂಮಿ ಖರೀದಿ ತಡವಾದ್ರೆ ದೇಣಿಗೆ ಸಂಗ್ರಹಿಸಿ ನೀಡ್ತೇವೆ: ಈಶ್ವರ ಖಂಡ್ರೆ

ಒಟ್ಟಿನಲ್ಲಿ ಆ ಬ್ಯಾಲಾಳ ಗ್ರಾಮಕ್ಕೆ ಎರಡು ಎಕರೆ ಜಮೀನು ಖರೀದಿಗೆ ಸರಕಾರದಿಂದ ಹಣ ಬಿಡುಗಡೆಯಾದ್ರೆ ತಹಶಿಲ್ದಾರರ ನಿರ್ಲಕ್ಷ್ಯದಿಂದ ಖರೀದಿ‌ ಕೆಲಸ ವಿಳಂಬ ವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು..ತಹಶಿಲ್ದಾರ ಅನಿಲ ಬಡಿಗೇರ ಅವರು ಕೊಟ್ಟ ಮಾತಿನಂತೆ ನಡೆದುಕ್ಕೊಂಡು ಎರಡು ಎಕರೆ ಖರೀದಗೆ ಮುಂದಾಗ್ತಾರಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.

click me!