ದೋಷಯುಕ್ತ ವಿಸ್ಕಿ ಸರಬರಾಜು ಮಾಡಿದ ಹುಬ್ಬಳ್ಳಿಯ ಪಿಂಟೋ ವೈನ್ ಲ್ಯಾಂಡ್‌ಗೆ .1.10 ಲಕ್ಷ ದಂಡ ಮತ್ತು ಪರಿಹಾರ ನೀಡಲು ಇಲ್ಲಿಯ ಗ್ರಾಹಕರ ನ್ಯಾಯಾಲಯ ಆದೇಶ ಮಾಡಿದೆ.
ಧಾರವಾಡ (ಜೂ.23) ದೋಷಯುಕ್ತ ವಿಸ್ಕಿ ಸರಬರಾಜು ಮಾಡಿದ ಹುಬ್ಬಳ್ಳಿಯ ಪಿಂಟೋ ವೈನ್ ಲ್ಯಾಂಡ್‌ಗೆ .1.10 ಲಕ್ಷ ದಂಡ ಮತ್ತು ಪರಿಹಾರ ನೀಡಲು ಇಲ್ಲಿಯ ಗ್ರಾಹಕರ ನ್ಯಾಯಾಲಯ ಆದೇಶ ಮಾಡಿದೆ.
2018ರ ಜುಲೈ 9ರಂದು ಬೆಳಗಾವಿ ರಾಯಭಾಗ ತಾಲೂಕಿನ ಶಿವಪುತ್ರ ಕುಮಟಿ ಎಂಬವರು ಪಿಂಟೋ ವೈನ್ ಲ್ಯಾಂಡ್‌ನಿಂದ .650 ನೀಡಿ ಇಂಪೀರಿಯಲ್ ಬ್ಲೂ ವಿಸ್ಕಿ ಬಾಟಲ್ ಖರೀದಿಸಿದ್ದರು. ಆ ವಿಸ್ಕಿ ಬಾಟಲ್‌ನ್ನು ತೆಗೆಯುವ ಪೂರ್ವದಲ್ಲಿ ಗಮನಿಸಿದಾಗ ಆ ಬಾಟಲ್‌ನಲ್ಲಿ ಗಾಜಿನ ಚೂರುಗಳು ಕಾಣಿಸಿಕೊಂಡಿದ್ದವು. ಶಿವಪುತ್ರ ಅವರು ಬೇರೆ ಬಾಟಲ್ ನೀಡುವಂತೆ ಪಿಂಟೋ ವೈನ್ ಲ್ಯಾಂಡ್‌ಗೆ ವಿನಂತಿಸಿದ್ದರು. ಅದಕ್ಕೆ ಒಪ್ಪದ ಪಿಂಟೋ ವೈನ್ ಲ್ಯಾಂಡ್‌ನವರು ಬಾಟಲ್‌ನಲ್ಲಿ ಗಾಜಿನ ಚೂರು ಇರುವುದು ನನ್ನ ತಪ್ಪಿನಿಂದಲ್ಲ. ಅದು ಉತ್ಪಾದಕರ ತಪ್ಪು ಎನ್ನುವ ಕಾರಣ ನೀಡಿ ಬಾಟಲ್ ಹಿಂಪಡೆಯಲು ನಿರಾಕರಿಸಿದ್ದರು. ಒಂದು ವೇಳೆ ಬಾಟಲ್‌ನಲ್ಲಿ ಗಾಜಿನಚೂರು ಇರುವುದನ್ನು ಗಮನಿಸದೇ ಹಾಗೆಯೇ ಅದರಲ್ಲಿನ ಮಧ್ಯ ಸೇವಿಸಿದ್ದರೆ ಜೀವಕ್ಕೆ ಅಪಾಯ ಆಗುವ ಸಂಭವವಿತ್ತು ಎಂದು ಶಿವಪುತ್ರ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಂದು ವೈನ್‌ಲ್ಯಾಂಡ್ ವಿರುದ್ಧ ದೂರು ದಾಖಲು ಮಾಡಿದ್ದರು.
ಆಲ್ಕೋಹಾಲ್ ಜೊತೆ ಸೋಡಾ, ಕೋಲ್ಡ್ ಡ್ರಿಂಕ್ಸ್ ಮಿಕ್ಸ್ ಮಾಡ್ತೀರಾ? ತಪ್ಪು ತಪ್ಪು
ಈ ಕುರಿತು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ಪ್ರಕರಣದಲ್ಲಿ ನೋಟಿಸ್ ಜಾರಿಯಾದರೂ ಪಿಂಟೋ ವೈನ್ ಲ್ಯಾಂಡ್‌ರವರು ಗೈರು ಹಾಜರಾಗಿದ್ದರು. ಅಲ್ಲದೇ, ತಮ್ಮ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಉತ್ಪಾದಕರು ಅಂತಹ ಆಕ್ಷೇಪಾರ್ಹ ಪಾನೀಯಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ತಾವು ಹೊಣೆಗಾರರಾಗುವುದಿಲ್ಲ ಎಂದು ವೈನ್ ಲ್ಯಾಂಡ್ ಹಾಗೂ ಉತ್ಪಾದಕರು ಆಕ್ಷೇಪಿಸಿದ್ದರು. ತಾನು ಖರೀದಿಸಿದ ವಿಸ್ಕಿ ಬಾಟಲಿ 2 ಮತ್ತು 3ನೇ ಎದುರುದಾರರು ಉತ್ಪಾದಿಸಿದ ಪಾನೀಯ ಎಂದು ರುಜುವಾತು ಪಡಿಸುವಲ್ಲಿ ದೂರುದಾರ ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಲಾಗಿದೆ.
ಹಣ ಪಡೆದು ದೋಷಯುಕ್ತ ನಕಲಿ ವಿಸ್ಕಿ ಮಾರಾಟ ಮಾಡಿದ ಸಂಗತಿಯನ್ನು 1ನೇ ಎದುರುದಾರ ಅಲ್ಲಗಳೆದಿಲ್ಲವಾದ್ದರಿಂದ ದೂರುದಾರರಿಗೆ ಅವರು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಹಾಗೂ ಮೋಸದ ವ್ಯಾಪಾರಾಭ್ಯಾಸ ಎಸಗಿದ್ದಾರೆಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟು, ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ .1 ಲಕ್ಷ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವೆಂದು .10,000 ನೀಡುವಂತೆ 1ನೇ ಎದುರುದಾರ ಪಿಂಟೋ ವೈನ್ ಲ್ಯಾಂಡ್ ಮಾಲೀಕರಿಗೆ ನಿರ್ದೇಶಿಸಲಾಗಿದೆ.
Alcohol Addiction: ಆಲ್ಕೋಹಾಲ್ ಬೇಕೇಬೇಕಾ? ಹಾಗಾದ್ರೆ ಎಚ್ಚರ!