ಜೂನ್ ತಿಂಗಳ ಆರಂಭದಲ್ಲಿ ಸ್ಥಗಿತಗೊಂಡಿದ್ದ ಡೀಪ್ ಸೀ ಫಿಶ್ಶಿಂಗ್ ಗೆ ಎರಡು ತಿಂಗಳ ರಜೆಯಿತ್ತು. ಈ ದಿನಗಳಲ್ಲಿ ಮಾನ್ಸೂನ್ ಅಬ್ಬರ ಜಾಸ್ತಿಯಾಗಿರೋದ್ರಿಂದ ಮೀನುಗಾರರು ಸಮುದ್ರಕ್ಕಿಳಿಯೋದಿಲ್ಲ. ಈಗ ಆಳಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಮುಗಿದಿದೆ. ಆಗಸ್ಟ್ ಮೊದಲ ವಾರದಿಂದಲೇ ಒಬ್ಬೊಬ್ಬರಾಗಿ ಸಮುದ್ರಕ್ಕೆ ತೆರಳುತ್ತಾರೆ.
ಉಡುಪಿ (ಆ.13) : ಸುಮಾರು ಎರಡು ತಿಂಗಳಗಳ ಕಾಲ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಅಧಿಕೃತವಾಗಿ ಆರಂಭವಾಗಿದೆ. ಮುಂಗಾರಿನ ಆರ್ಭಟ ಕೊಂಚ ಕಡಿಮೆಯಾಗಿದ್ದು, ಕಡಲ ಮಕ್ಕಳು ತಮ್ಮ ಜೀವನದ ದೋಣಿಯನ್ನು ಸಮುದ್ರಕ್ಕಿಳಿಯುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಕಳೆದ ಸೀಸನ್ ನಲ್ಲಿ ಮತ್ಸ್ಯಸಂಪತ್ತು ನಷ್ಟ ಸಂಭವಿಸಿ ಮೀನುಗಾರು ಸಂಕಷ್ಟ ಎದುರಿಸಿದ್ರು. ಈ ಋತುವಿನಲ್ಲಾದ್ರೂ ಉತ್ತಮ ಮೀನುಗಾರಿಕೆಯಾಗಲಿ ಎಂಬ ನೀರೀಕ್ಷೆಯೊಂದಿಗೆ ಮೀನುಬೇಟೆಗೆ ತಯಾರಿ ನಡೆಸಿದ್ದಾರೆ.
ಉಡುಪಿಯ ಮಲ್ಪೆ ಬಂದರು. ಏಷ್ಯಾ ಖಂಡದ ಏಕೈಕ ಅತಿದೊಡ್ಡ ಸರ್ವಋತು ಮೀನುಗಾರಿಕಾ ಬಂದರು. ಎಲ್ಲಾ ಕಾಲದಲ್ಲಿ ಈ ಬಂದರಿನಲ್ಲಿ ಮೀನುಗಾರಿಕೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಪರ್ಸಿನ್ ಮತ್ತು ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುತ್ತೆ. ಈ ಸಮಯದಲ್ಲಿ ನಡೆಯೋದು ನಾಡದೋಣಿ ಮೀನುಗಾರಿಕೆ ಮಾತ್ರ.ಹೀಗಾಗಿ ಮಳೆಗಾಲದ ಎರಡು ತಿಂಗಳು ಆಳಸಮುದ್ರ ಮೀನುಗಾರರು ತಮ್ಮ ಬೋಟ್ಗಳನ್ನು ಮೇಲಕ್ಕೆತ್ತಿ, ದುರಸ್ಥಿ ಮಾಡಿ ಮತ್ತೆ ಅದನ್ನು ಸಮುದ್ರಕ್ಕಿಳಿಸುತ್ತಾರೆ.
undefined
ಮಡಿಕೇರಿಯಿಂದ ನಾಪತ್ರೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಸಮುದ್ರ ಪಾಲು!
ಈ ಎಲ್ಲಾ ಕೆಲಸಗಳು ಮುಗಿದಿದ್ದು ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸಲಾಗುತ್ತಿದೆ.ಮಂಜುಗಡ್ಡೆಗಳನ್ನು ತುಂಬಿಕೊಂಡು ಸಮುದ್ರಕ್ಕಿಳಿಯಲು ಮೀನುಗಾರರು ತಯಾರಿ ಮಾಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಮೀನುಗಾರರು ನಷ್ಟವನ್ನು ಅನುಭವಿಸಿದ್ದಾರೆ. ಸರ್ಕಾರ ಮೀನುಗಾರರ ನೆರವಿಗೆ ಧಾವಿಸಬೇಕು ಎನ್ನುವುದು ಮೀನುಗಾರರ ಒತ್ತಾಯ
ಜೂನ್ ತಿಂಗಳ ಆರಂಭದಲ್ಲಿ ಸ್ಥಗಿತಗೊಂಡಿದ್ದ ಡೀಪ್ ಸೀ ಫಿಶ್ಶಿಂಗ್ ಗೆ ಎರಡು ತಿಂಗಳ ರಜೆಯಿತ್ತು. ಈ ದಿನಗಳಲ್ಲಿ ಮಾನ್ಸೂನ್ ಅಬ್ಬರ ಜಾಸ್ತಿಯಾಗಿರೋದ್ರಿಂದ ಮೀನುಗಾರರು ಸಮುದ್ರಕ್ಕಿಳಿಯೋದಿಲ್ಲ. ಈಗ ಆಳಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಮುಗಿದಿದೆ. ಆಗಸ್ಟ್ ಮೊದಲ ವಾರದಿಂದಲೇ ಒಬ್ಬೊಬ್ಬರಾಗಿ ಸಮುದ್ರಕ್ಕೆ ತೆರಳುತ್ತಾರೆ. ಪ್ರಾರಂಭದ 10 ದಿನಗಳ ಕಾಲ ನಡೆಯುವ ಈ ಮೀನುಗಾರಿಕೆ ತುಂಬಾ ಅಪಾಯಕಾರಿ ಕೂಡಾ ಹೌದು. ಸಮುದ್ರದ ಮಧ್ಯದಲ್ಲಿ ಭೀಕರ ಚಂಡಮಾರುತಗಳು, ಬಿರುಗಾಳಿಗಳು ಕೂಡಾ ಏಳುವ ಸಾಧ್ಯತೆಗಳಿವೆ. ಆದರೂ ಹೊಟ್ಟೆಪಾಡಿಗಾಗಿ ಅದನ್ನೇ ಉದ್ಯೋಗ ಮಾಡಿಕೊಂಡವರು ಕಡಲಿಗಿಳಿಯದೆ ಬೇರೆ ದಾರಿಯಿಲ್ಲ.
ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಅಲೆಗೆ ಸಿಲುಕಿ ಪಲ್ಟಿ, 9 ಮೀನುಗಾರರ ರಕ್ಷಣೆ
ಆಗಸ್ಟ್ 10 ರಿಂದ ಸಂಪ್ರದಾಯದಂತೆ ಮೀನುಗಾರಿಕೆ ಶುರುವಾಗಿದೆ.ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುವ ಲಕ್ಷಾಂತರ ಜನ ಕರಾವಳಿಯಲ್ಲಿದ್ದಾರೆ. ಕಡಲು ಮತ್ತು ಪ್ರಕೃತಿ ಒಲಿದರೆ ಇವರಿಗೆಲ್ಲ ಹೊಟ್ಟೆತುಂಬ ಊಟ. ಬರಲಿರುವ ಮೀನುಗಾರಿಕಾ ಋತು ಚೆನ್ನಾಗಿರಲಿ. ಪ್ರಕೃತಿ ಮೀನುಗಾರರ ಪರ ಇರಲಿ ಎಂದು ಹಾರೈಸೋಣ.