ಕನಕಪುರ: ಕಾಡಾನೆ ಕಾಟ ತಪ್ಪಿಸದಿದ್ದರೆ ಅರಣ್ಯ ಇಲಾಖೆಗೆ ಬೀಗ, ರೈತರ ಆಕ್ರೋಶ

Published : Aug 13, 2023, 03:00 AM IST
ಕನಕಪುರ: ಕಾಡಾನೆ ಕಾಟ ತಪ್ಪಿಸದಿದ್ದರೆ ಅರಣ್ಯ ಇಲಾಖೆಗೆ ಬೀಗ, ರೈತರ ಆಕ್ರೋಶ

ಸಾರಾಂಶ

ಉಯ್ಯಂಬಳ್ಳಿ ಹೋಬಳಿಯ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೈತರಾದ ಎಸ್‌.ಎಂ.ಶಿವಕುಮಾರ್‌, ಮುನೇಶ್‌, ದೇವರಾಜ್‌ ಜಮೀನಿಗೆ ನುಗ್ಗಿದ ಕಾಡಾನೆಗಳು ಸುಮಾರು 4 ಎಕರೆಯಲ್ಲಿ ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ತುಳಿದು ನಾಶ ಮಾಡಿವೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬೆಳೆ ಹಾನಿಯಾಗಿದ್ದು ಕೂಡಲೇ ಅರಣ್ಯ ಇಲಾಖೆ ನಮಗಾಗಿರುವ ನಷ್ಟದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಎಸ್‌.ಎಂ.ಶಿವಕುಮಾರ್‌ 

ಕನಕಪುರ(ಆ.13): ತಾಲೂಕಿನ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸದಿದ್ದರೆ ಅರಣ್ಯ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೈತರಾದ ಎಸ್‌.ಎಂ.ಶಿವಕುಮಾರ್‌, ಮುನೇಶ್‌, ದೇವರಾಜ್‌ ಜಮೀನಿಗೆ ನುಗ್ಗಿದ ಕಾಡಾನೆಗಳು ಸುಮಾರು 4 ಎಕರೆಯಲ್ಲಿ ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ತುಳಿದು ನಾಶ ಮಾಡಿವೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬೆಳೆ ಹಾನಿಯಾಗಿದ್ದು ಕೂಡಲೇ ಅರಣ್ಯ ಇಲಾಖೆ ನಮಗಾಗಿರುವ ನಷ್ಟದ ಪರಿಹಾರ ನೀಡಬೇಕು ಎಂದು ಎಸ್‌.ಎಂ.ಶಿವಕುಮಾರ್‌ ಆಗ್ರಹಿಸಿದ್ದಾರೆ.

ರೈತ​ರು ಸಾಲಮನ್ನಾ ಮನೋ​ಭಾ​ವನೆ ಬಿಡ​ಬೇಕು: ಶಾಸಕ ಇಕ್ಬಾಲ್‌ ಹುಸೇನ್‌

ಶುಕ್ರವಾರ ರಾತ್ರಿ ತೋಟಕ್ಕೆ ನುಗ್ಗಿದ ಆನೆಗಳು ಇಲ್ಲೇ ಬೀಡು ಬಿಟ್ಟಿವೆ. ಕಾಡಾನೆಗಳನ್ನು ಓಡಿಸುವಲ್ಲಿ ಅರಣ್ಯ ಇಲಾಖೆಯವರು ವಿಫಲರಾಗಿದ್ದಾರೆ. ಕೂಗಳತೆ ದೂರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರೂ ಸ್ಥಳಕ್ಕೆ ಬಂದು ಆನೆಗಳನ್ನು ಓಡಿಸಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅರಣ್ಯ ರಕ್ಷಕರ ನಿರ್ಲಕ್ಷದಿಂದ ಬಾಳೆ ತೋಟ ಮತ್ತು ಅಡಿಕೆ ತೋಟಕ್ಕೆ ಆನೆಗಳ ಗುಂಪು ನುಗ್ಗಿ ನಾಶ ಮಾಡಿವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಪದೇಪದೆ ಗ್ರಾಮಕ್ಕೆ ಆನೆಗಳು ಬರುತ್ತಿದ್ದು ಅರಣ್ಯ ಅ​ಧಿಕಾರಿಗಳು ಹಾಗೂ ರಕ್ಷಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

Ramanagar: ಜಾಮೂನಿಗೆ ವಿಷ ಬೆರೆಸಿ ಮಕ್ಕಳಿಗೆ ತನ್ನಿಸಿದ ಕ್ರೂರಿ ಅಪ್ಪ, ಮೂವರ ಸ್ಥಿತಿ ಚಿಂತಾಜನಕ

ಇದುವರೆಗೂ ಸೋಲಾರ್‌ ಅಥವಾ ರೈಲ್ವೆ ಕಂಬಿಗಳನ್ನು ಕಾಡಂಚಿನಲ್ಲಿ ಹಾಕದೇ ಮೀನಮೇಷ ಎಣಿಸುತ್ತಾ ರೈತರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಕಾಡಂಚಿನ ಗ್ರಾಮದವರು ಹಳ್ಳಿಯನ್ನು ಬಿಟ್ಟು ಬೆಂಗಳೂರು ನಗರ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟಮೂಗೂರು ಅರಣ್ಯ ಅ​ಧಿಕಾರಿಗಳು ರೈತರಿಗೆ ಹಾಗೂ ಜಮೀನಿಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಆಲಕುಳಿಯಿಂದ ಅರೆಕೊಪ್ಪ ಶಿವನೇಗೌಡನದೊಡ್ಡಿ ಉಯ್ಯಂಬಳ್ಳಿದೊಡ್ಡಿ, ಚುಂಚಿ ಫಾರೆಸ್ಟ್‌ ಗಡಿವರೆಗೆ ರೈಲ್ವೆ ಕಂಬಿಗಳನ್ನು ಹಾಕಿದರೆ ರೈತರಿಗೆ ಯಾವುದೇ ತೊಂದರೆ ಇಲ್ಲ. ಕೂಡಲೇ ರಾಜ್ಯ ಸರ್ಕಾರ ಇದರ ಕಡೆಗೆ ಗಮನ ಹರಿಸಿ ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಕಂಬಿ ಅಥವಾ ಸೋಲಾರ್‌ ವಿದ್ಯುತ್‌ ತಂತಿಯನ್ನು ಅಳವಡಿಸಬೇಕೆಂದು ಗ್ರಾಮದ ಸುರೇಶ್‌, ಜಯರಾಮ್‌, ಶಿವಣ್ಣ, ರಾಜೇಶ್‌, ಮೂಗಾನಾಯ್‌್ಕ, ಕರಿಯಪ್ಪ, ಕುಮಾರ್‌, ಪುಟ್ಟಸ್ವಾಮಿಗೌಡ ಶಿವಮರಿಗೌಡ ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ