'ಕಾರ್ಯಕರ್ತರನ್ನೇ ನಾಯಕರಾಗಿಸಿದ್ದು ಬಿಜೆಪಿಯಲ್ಲಿ ಮಾತ್ರ'

By Kannadaprabha News  |  First Published Dec 2, 2020, 12:32 PM IST

ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವುದಿಲ್ಲ| ಮರಾಠ ನಿಗಮ ಆಗಬೇಕು ಅನ್ನೋದು ಬಹಳ ದಿನದ ಕನಸು. ಹೀಗಾಗಿ ಮುಖ್ಯಮಂತ್ರಿಯವರು ಮರಾಠರ ಜತೆಗೆ ಲಿಂಗಾಯತ ನಿಗಮ ಮಾಡಿದ್ದಾರೆ| ಶಾಸಕ ವಿಶ್ವನಾಥ ಮೇಲ್ಮನವಿ ಸಲ್ಲಿಸುತ್ತಾರೆ: ಡಿಸಿಎಂ ಲಕ್ಷ್ಮಣ ಸವದಿ| 


ಕೊಪ್ಪಳ/ಕಾರಟಗಿ(ಡಿ. 02): ಗ್ರಾಮೀಣ ಪ್ರದೇಶದ ಅದರಲ್ಲೂ ಕೆಳಹಂತದ ಕಾ¿åರ್‍ಕರ್ತರನ್ನು ನಾಯಕರನ್ನಾಗಿ ಮಾಡುವ ಏಕೈಕ ಪಕ್ಷ ಬಿಜೆಪಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕೊಪ್ಪಳ ನಗರದ ಎಂ.ಪಿ. ಪ್ಯಾಲೇಸ್‌ ಮತ್ತು ಕಾರಟಗಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಅಲ್ಲದೇ ದೇಶದಲ್ಲಿಯೇ ಹೆಚ್ಚಿನ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದ ಪಕ್ಷ. ಪ್ರಧಾನಿ ಮೋದಿ ಅವರ ಗ್ರಾಮ ಸ್ವರಾಜ್ಯ ಎನ್ನುವುದು ಮಹಾತ್ಮ ಗಾಂಧೀಜಿಯವರ ಕನಸು. ಅವರ ಕನಸಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಈಗ ಬಿಜೆಪಿ ಕಲ್ಪನೆ ವಿಚಾರ ಬೇರೆ ದಿಕ್ಕಿನತ್ತ ಸಾಗುತ್ತಿವೆ. ಈ ಹಿಂದೆ ನಾಯಕರಿಗೋಸ್ಕರ ಕಾರ್ಯಕರ್ತರಿದ್ದರು. ಅದು 74 ವರ್ಷದಿಂದ ಪರಿಪಾಠವಾಗಿದೆ ಎಂದು ಕಾಂಗ್ರೆಸ್‌ ಹೆಸರನ್ನು ಹೇಳದೆ ಟೀಕಿಸಿದರು. ಅಂದು ನಾಯಕರು ಒಂದು ಥರಾ ಇದ್ದರೆ ಕಾರ್ಯಕರ್ತರು ಒಂದು ಥರಾ ಇರುತ್ತಿದ್ದರು. ಈ ಪದ್ಧತಿ ಮುಂದುವರಿಯಬಾರದು ಎನ್ನುವ ಉದ್ದೇಶದಿಂದ ಬಿಜೆಪಿ ನಾಯಕರು ಮಾಡಿದ ಆಲೋಚನೆ ಗ್ರಾಮ ಸ್ವರಾಜ್ಯ ಕಾರ್ಯಕ್ಕೆ ಬಂದಿದೆ ಎಂದರು.

Latest Videos

undefined

ಪಕ್ಷ ಕೆಳ ಮಟ್ಟದ ಕಾರ್ಯಕರ್ತರನ್ನು ಗುರುತಿಸುತ್ತದೆ ಎನ್ನುವುದನ್ನು ಕಳೆದ ಬಾರಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾವು ಕಣ್ಣಾರೆ ಕಂಡಿದ್ದೇವೆ. ಸಾಮಾನ್ಯ ಕಾರ್ಯಕರ್ತನಾಗಿ 30 ವರ್ಷ ಪಕ್ಷಕ್ಕೆ ಸೇವೆ ಸಲ್ಲಿಸಿದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಕಳಿಸಿದ ಪಕ್ಷ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕರ್ತರ ಚುನಾವಣೆ. ಇದಕ್ಕೆ ರಾಜ್ಯದ ನಾಯಕರೆ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಮುಂದಿನ 50 ವರ್ಷಗಳ ಕಾಲ ನಮ್ಮ ಪಕ್ಷ ಕಾರ್ಯಕರ್ತರ ಪಕ್ಷವಾಗಿರಬೇಕು. ಹಳ್ಳಿಯಿಂದ ದಿಲ್ಲಿಯವರೆಗೂ ಕೇಸರಿ ಧ್ವಜ ಹಾರಬೇಕಾಗಿದೆ. ಇಲ್ಲಿ ನಿಮ್ಮನ್ನು ಗಟ್ಟಿಗೊಳಿಸಿದಾಗ ದಿಲ್ಲಿವರೆಗೂ ನಮ್ಮ ಬಾವುಟ ಹಾರಿಸಬಹುದು. ನಿಮ್ಮ ಕಾರ್ಯಕರ್ತರಾಗಿ ನಾವು ನಿಮ್ಮ ಗ್ರಾಮಕ್ಕೆ ಬಂದು ಜೈಕಾರ ಹಾಕುತ್ತವೆ. ನಿಮ್ಮ ಗೆಲುವಿಗೆ ನಾವೆಲ್ಲರೂ ಸಿದ್ಧರಾಗಿದ್ದೇವೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಅಧ್ಯಯನದ ಬಳಿಕ ಲಿಂಗಾಯತರಿಗೆ ಮೀಸಲು ತೀರ್ಮಾನ: ಸಚಿವ ಬೊಮ್ಮಾಯಿ

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಾರ್ಟಿ. ಗ್ರಾಪಂಗಳಲ್ಲಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಬೇಕಾಗಿದೆ. ಮೋದಿ ಅವರ ಆಶಯದಂತೆ ಕಾಂಗ್ರೆಸ್‌ ಮುಕ್ತ ಭಾರತವನ್ನಾಗಿ ಮಾಡಬೇಕಾಗಿದೆ. ಗ್ರಾಮಗಳಲ್ಲಿ ಮೊದಲು ಕಾರ್ಯಕರ್ತರಲ್ಲಿ ಶಕ್ತಿಯನ್ನು ತುಂಬಬೇಕು. ಗ್ರಾಪಂಗಳಲ್ಲಿ ಮೊದಲಿಗೆ ಕಾಂಗ್ರೆಸ್‌ ಮುಕ್ತ ಗ್ರಾಪಂಗಳನ್ನಾಗಿ ಮಾಡಿ. ಕಾರ್ಯಕರ್ತರು ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಬಂದಿದ್ದೀರಿ. ಅವರ ನಂಬಿಕೆ ಹುಸಿ ಮಾಡುವುದಿಲ್ಲ. ಕಾರ್ಯಕರ್ತರಿಗಾಗಿ ತನು, ಮನ, ಧನದಿಂದ ಸಹಕಾರ ಮಾಡುತ್ತೇವೆ ಎಂದರು.

ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕೆಲಸ ಮಾಡಲು ನಮ್ಮನ್ನೆಲ್ಲ ಕಳಿಸಿಕೊಟ್ಟಿದ್ದಾರೆ. ಕಾರ್ಯಕರ್ತರಿಗಾಗಿ ನಾಯಕರಾಗಬೇಕು ಎನ್ನುವುದೆ ಮೋದಿ ಅವರ ಆಶಯ ಎಂದರು.

ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ, ಶಾಸಕರಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಮಾಜಿ ಶಾಸಕ ಜಿ. ವೀರಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರುಗೌಡ, ಕಾರಟಗಿ ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಕೆ.ಎಸ್‌. ನವೀನ್‌, ತಿಪ್ಪೇರುದ್ರಸ್ವಾಮಿ, ಹೇಮಲತಾ ನಾಯಕ, ಸಿದ್ದೇಶ ಯಾದವ್‌, ನೇಮರಾಜ ನಾಯಕ್‌, ಅಮರೇಶ ಕರಡಿ, ಸಿ.ವಿ. ಚಂದ್ರಶೇಖರ, ಮಹಾಂತೇಶ ಪಾಟೀಲ, ನವೀನ್‌ ಗುಳಗಣ್ಣವರ್‌, ಈಶಪ್ಪ ಹಿರೇಮನಿ, ಉಮೇಶ ಸಜ್ಜನ್‌, ಅಮರೇಶ ಕುಳಗಿ, ಬಿ.ಜಿ. ಅರಳಿ, ವೀರೇಶಪ್ಪ ಸಾಲೂಣಿ, ಚನ್ನಬಸಪ್ಪ ಸುಂಕದ್‌, ನಾಗರಾಜ ಬಿಲ್ಗಾರ, ಸಿಂಗನಾಳ ವಿರೂಪಾಕ್ಷಪ್ಪ ಹಾಗೂ ಕನಕಗಿರಿ, ಕಾರಟಗಿ, ಗಂಗಾವತಿ ಮಂಡಲದ ಸದಸ್ಯರು, ಕಾರ್ಯಕರ್ತರು ಇದ್ದರು.

ಪ್ರಧಾನಿ ಮೋದಿ ಅವರ ಹೊಸ ನಾಯಕತ್ವದಲ್ಲಿ ರಾಷ್ಟ್ರವನ್ನು ಪ್ರಗತಿಯತ್ತ ಸಾಗಿಸಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಮೂಲಗಳು ಅನುಷ್ಠಾನವಾಗುವುದೆ ಗ್ರಾಪಂಗಳ ಮೂಲಕ. ಅದಕ್ಕೆ ಒಬ್ಬ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಉದ್ದೇಶ ಗ್ರಾಮ ಸ್ವರಾಜ್ಯದ ಹಿಂದಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. 

ಕುಷ್ಟಗಿ: ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣ, ತಹಶೀಲ್ದಾರ್‌ ಸಸ್ಪೆಂಡ್‌

ಗಂಗಾವತಿ ಮತ್ತು ಕಾರಟಗಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸಾಕಷ್ಟುಅಭಿವೃದ್ಧಿ ಮಾಡಲಾಗಿದೆ. ಮೋದಿ ಅವರ ಯೋಜನೆ ಹಾಗೂ ಶಾಸಕರು, ಸಂಸದರು ಮಾಡಿದ ಅಭಿವೃದ್ಧಿ ಬಗ್ಗೆ ಪ್ರತಿಯೊಂದು ಕುಟುಂಬಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಶಾಸಕರಾದ ಬಸವರಾಜ್‌ ದಢೇಸ್ಗೂರು, ಪರಣ್ಣ ಮುನವಳ್ಳಿ ಅವರು ತಿಳಿಸಿದ್ದಾರೆ. 

ಮಂತ್ರಿ ಮಾಡುವುದು ಸಿಎಂ ಪರಮಾಧಿಕಾರ

ರಾಜ್ಯದಲ್ಲಿ ಯಾರನ್ನು ಮಂತ್ರಿಯನ್ನಾಗಿ ಮಾಡಬೇಕು ಅಥವಾ ಬಿಡಬೇಕು ಎನ್ನುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರಮಾಧಿಕಾರವಾಗಿದ್ದು, ಅದನ್ನು ಉಪಯೋಗಿಸಿ ಅವರು ಕೆಲಸ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕಾರಟಗಿ ಪಟ್ಟಣದಲ್ಲಿ ಮತ್ತು ಕೊಪ್ಪಳದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎಚ್‌. ವಿಶ್ವನಾಥ ಅವರಿಗೆ ಸಚಿವ ಸ್ಥಾನಕ್ಕೆ ಅನರ್ಹ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ವಿಶ್ವನಾಥ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅವರು ಮೇಲ್ಮನವಿ ಸಲ್ಲಿಸುತ್ತಾರೆ. ಮೇಲ್ಮನವಿ ತೀರ್ಪು ಏನು ಬರುತ್ತದೆಯೋ ನೋಡಿಕೊಂಡು ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಕೊಟ್ಟಮಾತಿನಂತೆ ನಡೆದುಕೊಂಡಿದ್ದಾರೆ. ಅದೇ ರೀತಿ ಸಚಿವ ಸ್ಥಾನ ಯಾರಿಗೆ ಕೊಡಬೇಕೋ ಅವರಿಗೆ ಕೊಡುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಎಲ್ಲಿಯೂ ಚರ್ಚೆಗೆ ಬಂದಿಲ್ಲ. ನಿಮಗೆ ಯಾರು ಹೇಳಿದರು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಡಿಸಿಎಂ, ಒಬ್ಬ ಶಾಸಕ, ಮಂತ್ರಿ ಯಾರಾದರೂ ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತು ಹೇಳಿದ್ದಾರಾ ಎಂದು ಮರುಪ್ರಶ್ನಿಸಿದರು. ಶಾಸಕ ಬಸನಗೌಡ ಯತ್ನಾಳ ಹೇಳಿಕೆ ವೈಯಕ್ತಿಕವಾದದ್ದು. ಪಕ್ಷ ಅವರ ಹೇಳಿಕೆಯನ್ನು ಗಮನಿಸಿದೆ. ಅವರಿಗೆ ಈಗಾಗಲೇ ನೋಟಿಸ್‌ ನೀಡಿದೆ ಎಂದರು.

ಡಿ. 5ರಂದು ಕರ್ನಾಟಕ ಬಂದ್‌ ವಿಚಾರವಾಗಿ, ಅಂದು ರಾಜ್ಯದಲ್ಲಿನ ಎಲ್ಲ ನಾಲ್ಕು ನಿಗಮಗಳ ಬಸ್‌ ಸಂಚಾರ ಇರುತ್ತದೆ. ಬಸ್‌ಗೆ ಯಾರೂ ಹಾನಿ ಮಾಡಬಾರದೆಂದು ವಿನಂತಿ ಮಾಡುತ್ತೇನೆ. ಒಂದು ವೇಳೆ ಹಾನಿ ಮಾಡಿದರೆ ಅವರಿಂದಲೇ ಹಾನಿ ಭರಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಗಮನಕ್ಕಿಲ್ಲ:

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಪುರಸಭೆಯಲ್ಲಿ ನ. 9ರಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ವೇಳೆ ಎಳೆದಾಡಲ್ಪಟ್ಟಿದ್ದ ಸದಸ್ಯೆ ಚಾಂದಿನಿ ನಾಯಕ್‌ ಅವರಿಗೆ ಗರ್ಭಪಾತವಾಗಿರುವುದು ಗಮನಕ್ಕೆ ಬಂದಿಲ್ಲ. ಕಳೆದ 6 ವರ್ಷಗಳ ಹಿಂದೆ ಅವರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಅದೂ ಊಹಾಪೋಹವಿದೆ. ಇದನ್ನು ಪರಿಶೀಲಿಸಲಾಗುತ್ತಿದೆ. ಮುಂದೆ ನೋಡೋಣ ಎಂದಷ್ಟೇ ಹೇಳಿದರು.

ಓಲೈಕೆ ರಾಜಕಾರಣ:

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. ಲವ್‌ ಜಿಹಾದ್‌ ತಡೆ ಕಾಯ್ದೆಯನ್ನು ಜಾರಿಗೆ ತರುತ್ತಿರುವುದು ಮೂರ್ಖತನದ್ದು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ತುಷ್ಟಿಕರಣ ಮಾಡಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಡ ವಿದ್ಯಾರ್ಥಿ ವೈದ್ಯನಾಗುವ ಕನಸಿಗೆ ನೀರೆರದ ಸುವರ್ಣ ನ್ಯೂಸ್‌: ಹರಿದು ಬಂದ ನೆರವಿನ ಮಹಾಪೂರ

ಕೇಂದ್ರ ಸರ್ಕಾರ ಮಾಡಬೇಕು:

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ 371 ಜೆ ವ್ಯಾಪ್ತಿಯಲ್ಲಿ ಯಾವುದಾದರೂ ಕ್ಷೇತ್ರವನ್ನು ಸೇರ್ಪಡೆ ಮಾಡಬೇಕು ಎಂದರೆ ಮತ್ತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಹೀಗಾಗಿ ಅಂಥ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.  ಸಚಿವ ಶ್ರೀರಾಮುಲು ಅವರು ಮೊಳಕಾಲ್ಮುರು ಕ್ಷೇತ್ರವನ್ನು 371 ಜೆ ವ್ಯಾಪ್ತಿಗೆ ಸೇರಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅಂಥ ಯಾವುದೇ ಪ್ರಸ್ತಾವನೆ ಇಲ್ಲವಾದ್ದರಿಂದ ಅದರ ಪ್ರಶ್ನೆ ಬರುವುದಿಲ್ಲ. ಅದು ಅಷ್ಟುಸುಲಭವೂ ಅಲ್ಲ ಎಂದರು.

ಮೀಸಲಾತಿ: ನಮಗೆ ಕೊಡೋದು ಕೊಟ್ಟು ಉಳಿದವರಾರ‍ಯರನ್ನಾದರೂ ಸೇರಿಸಲಿ​- ಶ್ರೀರಾಮುಲು

ಮೀಸಲಾತಿ ವಿಷಯದಲ್ಲಿ ನಮಗೆ ಕೊಡಬೇಕಾಗಿದ್ದು ಕೊಟ್ಟು ಉಳಿದವರಾರ‍ಯರನ್ನಾದರೂ ಸೇರಿಸಿಕೊಳ್ಳಲಿ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ವಿಚಾರ ಬಹಳ ವರ್ಷದಿಂದ ಇದೆ. ಎಸ್ಟಿಗೆ ಸೇರ್ಪಡೆ ಮಾಡಲು ಹೋರಾಟ ನಡೆಸಿದ್ದಾರೆ. ಆದರೆ, ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು. ಎಸ್‌ಟಿಗೆ ಶೇ. 15ರಿಂದ 17ಕ್ಕೆ ಏರಿಕೆ ಆಗಬೇಕು. ಅದೇ ರೀತಿ ಎಸ್ಸಿಗೆ ಶೇ. 3ರಿಂದ 7ರಷ್ಟು ಏರಿಸಬೇಕು. ಈ ಮೀಸಲಾತಿ ನೀಡಿದ ಬಳಿಕ ಉಳಿದ ಜಾತಿಯವರನ್ನು ಸೇರಿಸಿಕೊಳ್ಳಲಿ ಎಂದು ಶ್ರೀರಾಮುಲು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ಮರಾಠ ನಿಗಮ ಆಗಬೇಕು ಅನ್ನೋದು ಬಹಳ ದಿನದ ಕನಸು. ಹೀಗಾಗಿ ಮುಖ್ಯಮಂತ್ರಿಯವರು ಮರಾಠರ ಜತೆಗೆ ಲಿಂಗಾಯತ ನಿಗಮ ಮಾಡಿದ್ದಾರೆ ಎಂದರು. ಎಚ್‌. ವಿಶ್ವನಾಥ್‌ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆ ವಿಚಾರ ಈ ಕುರಿತು ನಾಳೆ ಸಿಎಂ, ಕಾನೂನು ಸಚಿವರೊಂದಿಗೆ ಮಾತನಾಡುತ್ತೇನೆ. ಈ ವಿಷಯ ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ ಎಂದರು.
ಸಚಿವ ಸ್ಥಾನ ದೊರೆಯಲು ಕಾನೂನು ತೊಡಕಿದೆ ಎಂದು ತಿಳಿದುಕೊಂಡಿದ್ದೇನೆ. ಬಿಜೆಪಿ ಮತ್ತು ಸಿಎಂ ಯಡಿಯೂರಪ್ಪ ಕೊಟ್ಟಮಾತು ತಪ್ಪುವುದಿಲ್ಲ. ರಾಜಕಾರಣಕ್ಕಾಗಿ, ಬಾಯಿ ಚಪಲಕ್ಕಾಗಿ ಮಾತನಾಡುವ ಸಾ.ರಾ. ಮಹೇಶ್‌ಗೆ ನಾನು ಉತ್ತರ ಕೊಡುವುದಿಲ್ಲ ಎಂದರು. 
 

click me!