ಮಾರ್ಗ ಮಧ್ಯೆ ಪ್ರತಿಭಟನಾಕಾರರನ್ನು ತಡೆದ ಪೊಲೀಸರು| ಬಳ್ಳಾರಿ ತಾಲೂಕಿನ ಕುಡುತಿನಿ ಪಟ್ಟಣದಲ್ಲಿರುವ ಸ್ಪಾಂಜ್ ಐರನ್ ಕಂಪನಿ| ಪರಿಸರ ಮಾಲಿನ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ|
ಬಳ್ಳಾರಿ(ಡಿ. 02): ಸ್ಪಾಂಜ್ ಐರನ್ ಕಂಪನಿಯ ಧೂಳಿನಿಂದ ಬೇಸತ್ತ ಜನರು ಕಂಪನಿಗೆ ಮುತ್ತಿಗೆ ಹಾಲು ಯತ್ನಿಸಿದ ಘಟನೆ ಇಂದು(ಬುಧವಾರ) ತಾಲೂಕಿನ ಕುಡುತಿನಿ ಪಟ್ಟಣದಲ್ಲಿ ನಡೆದಿದೆ. ಕಂಪನಿಗಳಿಗೆ ಹೋಗುವ ಮಾರ್ಗ ಮಧ್ಯೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
ಈ ಬಗ್ಗೆ ದೂರು ಹಲವಾರಿ ಬಾದರಿ ದೂರು ನೀಡಿದ್ದರೂ ಕ್ರಮತೆಗೆದುಕೊಳ್ಳದ ಪರಿಸರ ಮಾಲಿನ್ಯ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಮುಂದಾಗದ ಅಧಿಕಾರಿಗಳಿಂದ ಸ್ಥಳೀಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದೂರಿದ್ದಾರೆ.
ನಾವೇನು ಇಂಡಿಯಾ - ಪಾಕಿಸ್ತಾನಾನ..? ಸವದಿ ಹೀಗೆ ಹೇಳಿದ್ಯಾಕೆ..?
ಕಂಪನಿ ಮುಂದೆ ಹೋಗಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ. ನಾಲ್ಕಕ್ಕೂ ಹೆಚ್ಚು ಕಂಪನಿಗಳು, ಮತ್ತು ಎರಡು ಕ್ರಷರ್ ಮಿಷನ್‌ಗಳು ಕುಡುತಿನಿ ಪಟ್ಟಣದ ಸುತ್ತಮುತ್ತಲು ಇದೆ. ಇವುಗಳಿಂದ ಭಾರೀ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಕಂಪನಿಗಳಿಗೆ ತರಳುವ ಮಾರ್ಗದಲ್ಲಿ ಕುಳಿತು ಕಂಪನಿ ಮಾಲೀಕರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ.