ಬೆಂಗಳೂರಲ್ಲಿ ಕನ್ನಡ ಹುಡುಕುವ ಪರಿಸ್ಥಿತಿ ಇದೆ: ಗೋವಿಂದ ಕಾರಜೋಳ

By Suvarna NewsFirst Published Feb 5, 2020, 11:24 AM IST
Highlights

ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನ ಹುಡುಕುವ ಪರಿಸ್ಥಿತಿ ಇದೆ| ಕನ್ನಡ ಉಳಿಸುವ ಬೆಳೆಸುವುದಕ್ಕೆ ನಾಡಿನ ಜನತೆ ಸಜ್ಜಾಗಬೇಕು| ಯಾರೇ ನಮ್ಮ ಜೊತೆ ಬೇರೆ ಭಾಷೆಯಲ್ಲಿ ಮಾತಾಡಿದ್ರು ನಾವು ಕನ್ನಡದಲ್ಲಿ ಮಾತಾಡಬೇಕು ಎಂದ ಕಾರಜೋಳ| 

ಕಲಬುರಗಿ(ಫೆ.05): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಹುಡುಕುವ ಪರಿಸ್ಥಿತಿ ಇದೆ. ಕನ್ನಡ ನಾಡು ನುಡಿಗಾಗಿ ಜನ ಸಜ್ಜಾಗಿದ್ದಾರೆ. ಕನ್ನಡ ಭಾಷೆ ತಾಯಿಗೆ ಸಮಾನವಾದದ್ದು, ಈ ಭಾಷೆಯನ್ನ ಉಳಿಸಿ ಬೆಳೆಸುವುದು ಜನರಲ್ಲಿ ಕಾಣುತ್ತಿದೆ. ಹಳ್ಳಿ ಪ್ರದೇಶದಲ್ಲಿ ಕನ್ನಡ ಹೆಚ್ಚಾಗಿ ಕಾಣಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. 

ಕಲಬುರಗಿ ಅಕ್ಷರ ಜಾತ್ರೆ: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕಾರಜೋಳ ಚಾಲನೆ

ಬುಧವಾರ ನಗರದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮವರ ಜೊತೆ ಮಾತನಾಡಿದ ಅವರು, ಇಂದು ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನ ಹುಡುಕುವ ಪರಿಸ್ಥಿತಿ ಇದೆ. ಈ ಸಮ್ಮೇಳನದ ಮೂಲಕ ವಿನಂತಿ ಮಾಡುತ್ತೇನೆ. ಕನ್ನಡ ಉಳಿಸುವ ಬೆಳೆಸುವುದಕ್ಕೆ ನಾಡಿನ ಜನತೆ ಸಜ್ಜಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಯಾರೇ ನಮ್ಮ ಜೊತೆ ಬೇರೆ ಭಾಷೆಯಲ್ಲಿ ಮಾತಾಡಿದ್ರು ನಾವು ಕನ್ನಡದಲ್ಲಿ ಮಾತಾಡಬೇಕು ಎಂದು ಹೇಳಿದ್ದಾರೆ.

ಸೂಫಿಸಂತರ ನಾಡಲ್ಲಿ ಕನ್ನಡ ಡಿಂಡಿಮ; ಎಚ್‌ಎಸ್‌ವಿ ಮಾತುಗಳಿವು!

"

ಈ ಸಮ್ಮೇಳನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಈ ಹಿಂದೆ ನಡೆದಂತಹ ಸಮ್ಮೇನಕ್ಕಿಂತ ಈ ಸಮ್ಮೇಳನಕ್ಕೆ ಹೆಚ್ಚಿನ ನೋಂದಣಿ ಆಗಿದೆ ಎಂದು ಹೇಳಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ವಿಚಾರದ ಬಗ್ಗೆ ಮಾತನಾಡಿದ ಅವರು, ಸ್ವಾತಂತ್ರ ಪೂರ್ವದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ಕನ್ನಡ ನಾಡು ಒಂದುಗೂಡಿಸಲು ಪೂರ್ವಜರೂ ಹೋರಾಟ, ತ್ಯಾಗ ಮಾಡಿದ್ದಾರೆ. ಪೂರ್ವಜರ ಹೋರಾಟದಿಂದ ಕನ್ನಡ ನಾಡು ಒಂದಾಗಿದೆ. ಕರ್ನಾಟಕ ಪ್ರತ್ಯೇಕ ಮಾಡುವಂತದ್ದು, ಅಲ್ಪ ಮನಸ್ಸಿನವರು ಹೇಳುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಅಖಂಡ ಕರ್ನಾಟಕ ಒಂದಾಗಿರುತ್ತದೆ ಎಂದು ಹೇಳಿದ್ದಾರೆ. 
 

click me!