ಇನ್ಮುಂದೆ ಖದೀರಾರರೇ ರೈತರ ಮನೆಗೆ: ಡಿಸಿಎಂ ಅಶ್ವತ್ಥ ನಾರಾಯಣ

Kannadaprabha News   | Asianet News
Published : Dec 24, 2020, 11:16 AM ISTUpdated : Dec 24, 2020, 11:18 AM IST
ಇನ್ಮುಂದೆ ಖದೀರಾರರೇ ರೈತರ ಮನೆಗೆ: ಡಿಸಿಎಂ ಅಶ್ವತ್ಥ ನಾರಾಯಣ

ಸಾರಾಂಶ

ರಾಮನಗರ ಜಿಲ್ಲೆಯ ಉಕ್ಕಡ-ಗುಡ್ಡಹಳ್ಳಿ ಗ್ರಾಮಕ್ಕೆ ಅಶ್ವತ್ಥ ನಾರಾಯಣ ಭೇಟಿ| ದಾರಿ ಮಧ್ಯೆ ಕಾರು ನಿಲ್ಲಿಸಿ ತೋಟದ ಕೆಲಸದಲ್ಲಿ ನಿರತ ರೈತರನ್ನು ಭೇಟಿಯಾದ ಡಿಸಿಎಂ| ಉಪಮುಖ್ಯಮಂತ್ರಿಗಳ ಈ ನಡೆ ರೈತರ ಮೆಚ್ಚುಗೆ| 

ಮಾಗಡಿ(ಡಿ.24): ಅನ್ನದಾತ ಇದ್ದಲ್ಲಿಗೇ ತೆರಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ರೈತ ದಿನದ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ವೇಳೆ ರೈತರ ಜತೆಗೆ ಸಂವಾದವನ್ನೂ ನಡೆಸಿದ ಅವರು ಕೇಂದ್ರ, ರಾಜ್ಯ ಸರ್ಕಾ​ರ​ಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿರುವ ಅನುಮಾನಗಳನ್ನು ನಿವಾರಿಸಿದರು. ಬೆಳಗ್ಗೆ ಮಾಗಡಿ ತಾಲೂಕಿನ ಉಕ್ಕಡ-ಗುಡ್ಡಹಳ್ಳಿ ಗ್ರಾಮಕ್ಕೆ ಆಗ​ಮಿ​ಸಿದ ಅಶ್ವತ್ಥ ನಾರಾ​ಯಣ, ಅಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರಲ್ಲಿಗೆ ತೆರಳಿ ಶುಭಾಶಯ ಕೋರಿ ಶಿರಬಾಗಿ ನಮಿಸಿ ಅಭಿವಂದನೆ ಸಲ್ಲಿಸಿದರು. ರೈತರಾದ ನಾರಾಯಣಪ್ಪ, ನಾಗರಾಜ ಮತ್ತು ನರಸಿಂಹಯ್ಯರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

2 ತಿಂಗ್ಳಿಂದ ನಡೆಯುತ್ತಿರೋ ಕಾರ್ಮಿಕರ ಮುಷ್ಕರಕ್ಕೆ ಕಾರಣ ಬಹಿರಂಗಪಡಿಸಿದ ಎಚ್‌ಡಿಕೆ

ಇಷ್ಟು ದಿನ ನೀವು ಬೆಳೆದ ಬೆಳೆಯನ್ನು ನೀವೇ ಕಟಾವು ಮಾಡಿಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಬೇಕಾಗಿತ್ತು. ಅಲ್ಲಿ ದಳ್ಳಾಳಿಗಳದ್ದೇ ದರ್ಬಾರ್‌ ಆಗಿತ್ತು. ಆದರೆ ಇನ್ನು ಮುಂದೆ ಖರೀದಿದಾರನೇ ನಿಮ್ಮಲ್ಲಿಗೆ ಬಂದು ಬೆಳೆ ಖರೀದಿಸಬಹುದು ಎಂದರು. ಉಪಮುಖ್ಯಮಂತ್ರಿಗಳ ಈ ನಡೆ ರೈತರ ಮೆಚ್ಚುಗೆಗೆ ಪಾತ್ರವಾಯಿತು.
 

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ