ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ: ದಿಂಗಾಲೇಶ್ವರ ಶ್ರೀ

Kannadaprabha News   | Asianet News
Published : Dec 24, 2020, 08:33 AM IST
ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ: ದಿಂಗಾಲೇಶ್ವರ ಶ್ರೀ

ಸಾರಾಂಶ

ಶೀಘ್ರದಲ್ಲೇ ಭಕ್ತರ ಸಭೆ ನಡೆಸುತ್ತೇನೆ. ವಿವಾದ ಬಗೆಹರಿಸುತ್ತೇನೆ| ಇಷ್ಟೊತ್ತಾಗಲೇ ಉತ್ತರಾಧಿಕಾರಿ ನೇಮಕದ ವಿವಾದ ಬಗೆಹರಿಯುತ್ತಿತ್ತು, ಕೊರೋನಾದಿಂದಾಗಿ ಅದು ವಿಳಂಬ: ದಿಂಗಾಲೇಶ್ವರ ಶ್ರೀ| 

ಹುಬ್ಬಳ್ಳಿ(ಡಿ.24): ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ ಎಂದು ಮತ್ತೆ ಹೇಳಿಕೊಂಡಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ, ಈ ಸಂಬಂಧ ಶೀಘ್ರದಲ್ಲೇ ಭಕ್ತರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಳೆದ ಕೆಲದಿನಗಳಿಂದ ಶಾಂತವಾಗಿದ್ದ ಇಲ್ಲಿನ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರುವ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಧುತ್ತೆಂದು ಕೇಳಿ ಬಂದಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ. ಈ ಸಂಬಂಧ ಈಗಾಗಲೇ ತಮಗೆ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಬರೆದುಕೊಟ್ಟಿದ್ದುಂಟು. ಆದರೆ, ಕೆಲವರು ಬೇಕಂತಲೇ ನನಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಭಕ್ತರ ಸಭೆ ನಡೆಸುತ್ತೇನೆ. ವಿವಾದ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದಿನ ಕೆಟ್ಟ ಪರಿಸ್ಥಿತಿಗೆ ನಾವೇ ಕಾರಣ, ಕೊರೋನಾ ಹರಡದಂತೆ ತಡೆಯೋಣ: ದಿಂಗಾಲೇಶ್ವರ ಶ್ರೀ

ಇಷ್ಟೊತ್ತಾಗಲೇ ಉತ್ತರಾಧಿಕಾರಿ ನೇಮಕದ ವಿವಾದ ಬಗೆಹರಿಯುತ್ತಿತ್ತು. ಆದರೆ, ಕೊರೋನಾದಿಂದಾಗಿ ಅದು ವಿಳಂಬವಾಗಿದೆ. ಇದೀಗ ಕೊರೋನಾ ಕಡಿಮೆಯಾಗಿದೆ. ಹೀಗಾಗಿ ಮತ್ತೆ ಇದಕ್ಕಾಗಿ ಪ್ರಯತ್ನಿಸಲಾಗುವುದು. ಶೀಘ್ರದಲ್ಲಿ ಭಕ್ತರ ಸಭೆ ನಡೆಸಿ ಬಗೆಹರಿಸುತ್ತೇವೆ ಎಂದು ನುಡಿದರು.

ಮಠದ ಶ್ರೀಗಳು ಸೌಮ್ಯ ಸ್ವಭಾವದವರು. ಅವರ ಈ ಸೌಮ್ಯತೆಯನ್ನೇ ದುರುಪಯೋಗಪಡಿಸಿಕೊಂಡು ಕೆಲವರು ಅಲ್ಲಿ ಅಕ್ರಮ ನಡೆಸಿದ್ದಾರೆ. ಕೆಲವೊಂದಿಷ್ಟು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಮ್ಮ ಆಕ್ಷೇಪವಿದೆ ಎಂದರು.
 

PREV
click me!

Recommended Stories

ಕೋಲಾರದಲ್ಲಿ ಒಂದೇ ದಿನ ಬರೋಬ್ಬರಿ 21 ಮಂದಿಗೆ ಕಚ್ಚಿದ ಬೀದಿನಾಯಿ, ನಾಯಿಯನ್ನು ಹೊಡೆದು ಕೊಂದ ಗ್ರಾಮಸ್ಥರು!
ದರ್ಶನ್ ಹೇಗಿದ್ದಾರೆ? ಜೈಲಿಂದ ಹೊರಬಂದು ಅಭಿಮಾನಿಗಳ ಆತಂಕ ದೂರಮಾಡಿದ ಶಾಸಕ ವೀರೇಂದ್ರ ಪಪ್ಪಿ!