ಚರ್ಚ್ ಸ್ಟ್ರೀಟ್, ಎಂಜಿ, ಬ್ರಿಗೇಡ್ ರಸ್ತೆಗಳಲ್ಲಿ ಗುಂಪು ಸೇರೋದು ನಿಷಿದ್ಧ| ಅಧಿಕಾರಿಗಳಿಂದ ನಿಯಮ ಪಾಲನೆ ಪರಿಶೀಲನೆ| ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಹೆಚ್ಚು ಜನ ಸೇರದಂತೆ ಆಯೋಜಕರು ಕ್ರಮ| ಪಬ್, ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಡಿಜೆ, ನೃತ್ಯ, ವಿಶೇಷ ಕಾರ್ಯಕ್ರಮ ನಿಷೇಧ|
ಬೆಂಗಳೂರು(ಡಿ.24): ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್ ಆಚರಿಸುವ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
undefined
ಕೊರೋನಾ ಸೋಂಕು ಎರಡನೇ ಅಲೆ ಹಾಗೂ ರೂಪಾಂತರ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶದ ಅನ್ವಯ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಅನ್ವಯ ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಈ ಪ್ರಮುಖ ರಸ್ತೆಗಳನ್ನು ಸಂರ್ಪಕಿಸುವ ಎಲ್ಲ ರಸ್ತೆಗಳು, ಕೋರಮಂಗಲ, ಇಂದಿರಾನಗರ ಹಾಗೂ ವೈಟ್ಫೀಲ್ಡ್ ರಸ್ತೆಗಳಲ್ಲಿ ಗುಂಪು ಸೇರುವಂತಿಲ್ಲ.
ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗುವುದು. ಸೋಂಕಿನ ಲಕ್ಷಣಗಳಾದ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನ ಲಕ್ಷಣ ಇರುವವರು ಹಾಗೂ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ವೇಳೆ ದೇಹದ ತಾಪಮಾನ 37.5 ಡಿಗ್ರಿ ಸೆಲ್ಷಿಯಸ್‌ಗಿಂತ ಜಾಸ್ತಿ ಇದ್ದರೆ ಕೂಡಲೇ ಪ್ರತ್ಯೇಕಿಸಿ ವೈದ್ಯರಿಗೆ ಮತ್ತು ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ: ಏನಿರುತ್ತೆ? ಏನಿರಲ್ಲ? ಮಾರ್ಗಸೂಚಿ ಪ್ರಕಟ
ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಹೆಚ್ಚು ಜನ ಸೇರದಂತೆ ಆಯೋಜಕರು ಕ್ರಮ ಕೈಗೊಳ್ಳಬೇಕು. ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಿದೆ. ಪಬ್, ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಡಿಜೆ, ನೃತ್ಯ, ವಿಶೇಷ ಕಾರ್ಯಕ್ರಮ ನಿಷೇಧಿಸಿದೆ. ಪ್ರತಿನಿತ್ಯದ ಕಾರ್ಯಕ್ರಮ ನಡೆಸುವುದಕ್ಕೆ ನಿರ್ಬಂಧವಿಲ್ಲ ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಬಿಬಿಎಂಪಿ ಹೇಳಿದ್ದು
*65 ವರ್ಷಕ್ಕಿಂತ ಮೇಲ್ಪಟ್ಟ,10 ವರ್ಷದ ಒಳಗಿನ ಮಕ್ಕಳು ಮನೆಯಲ್ಲೇ ಇರಬೇಕು
*ಕ್ಲಬ್, ಬಾರ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಕಡ್ಡಾಯ
*ಕಾಂಟ್ಯಾಕ್ಟ್ ಲೆಸ್ ಸೇವೆ ಹಾಗೂ ಆನ್ಲೈನ್ ಸೇವೆಗೆ ಒತ್ತು, ಇ-ಟೋಕನ್ ನೀಡಬೇಕು.
*ಡಿ.30ರಿಂದ ಜ.2ರವರೆಗೆ ಎಲ್ಲ ರೀತಿಯ ವಿಶೇಷ ಸಣ್ಣ, ದೊಡ್ಡ ಔತಣ ಕೂಟ, ಕಾರ್ಯಕ್ರಮ,ಸಭೆ, ಸಮಾರಂಭ ನಿಷೇಧ.
*ವಿಶೇಷ ಸಂಘಟಿತ ಸಭೆ ಅಥವಾ ಟಿಕೆಟ್ ಪಡೆದ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ.
*ಉಗುಳುವುದು ನಿಷೇಧ, ಆರೋಗ್ಯ ಸೇತು ಕಡ್ಡಾಯ.
*ಮುಚ್ಚಿದ ಸ್ಥಳಗಳಲ್ಲಿ ಕೇವಲ 200 ಜನಕ್ಕೆ ಮಾತ್ರ ಅವಕಾಶ.
*ಹೆಚ್ಚು ಜನ ಸೇರದಿರಲು ಆನ್ಲೈನ್ ಸೇವೆ, ಟೋಕನ್ ಅಥವಾ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಬೇಕು.
*ವಸತಿ ಸಮುಚ್ಛಯ ಹಾಗೂ ಉಪಹಾರ ಸಭಾಂಗಣದಲ್ಲೂ ನಿಯಮ ಪಾಲನೆ ಮಾಡಬೇಕು.
*ಕಡ್ಡಾಯವಾಗಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು
*ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಸ್ಥಳ, ಮುಖ್ಯರಸ್ತೆಗಳಲ್ಲಿ ಹೆಚ್ಚು ಜನ ಸೇರುವುದು ನಿಷೇಧ.
*ಉಲ್ಲಂಘನೆ ಮಾಡಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ.