Chikkamagaluru: ಇಂದಿನಿಂದ ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ

By Govindaraj S  |  First Published Nov 25, 2022, 7:22 PM IST

ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ  ಇಂದಿನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಿದೆ‌.ಇಂದು ಬೆಳಗ್ಗೆ 10 ಗಂಟೆಯಿಂದ  ಶೃಂಗೇರಿ ಸಂತೆ ಮಾರುಕಟ್ಟೆ ಬಸ್ ನಿಲ್ದಾಣದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಿದ್ದು, ಸರ್ಕಾರದ ವಿರುದ್ದ  ಆಕ್ರೋಶ ಹೊರಹಾಕಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.25): ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ  ಇಂದಿನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಿದೆ‌.ಇಂದು ಬೆಳಗ್ಗೆ 10 ಗಂಟೆಯಿಂದ  ಶೃಂಗೇರಿ ಸಂತೆ ಮಾರುಕಟ್ಟೆ ಬಸ್ ನಿಲ್ದಾಣದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಿದ್ದು, ಸರ್ಕಾರದ ವಿರುದ್ದ  ಆಕ್ರೋಶ ಹೊರಹಾಕಿದ್ದಾರೆ. 

Latest Videos

undefined

ಆಸ್ಪತ್ರೆ ಮೊದಲು ರಾಜಕೀಯ ನಂತರ: ಇದು ನೂರಕ್ಕೆ ನೂರು ನಿಷ್ಪಕ್ಷಪಾತ ಹೋರಾಟವಾಗಿದ್ದು, ಆಸ್ಪತ್ರೆ ಮೊದಲು ರಾಜಕೀಯ ನಂತರ, ಆದಕಾರಣ ರಾಜಕಾರಣಕ್ಕಿಂತ ನಿಮ್ಮ ಕುಟುಂಬ ಮುಖ್ಯವಾಗಿದ್ದರೆ ಭಾಗವಹಿಸಿ ಎಂದು ಹೋರಾಟ ಸಮಿತಿ ಕರೆ ನೀಡಿದೆ. ತಾಲೂಕು ಮಟ್ಟದ ರಾಜಕೀಯ ನಾಯಕರು ಹಾಗೂ ಪಕ್ಷದ ಚಿಹ್ನೆ ಅಡಿಯಲ್ಲಿ ಚುನಾಯಿತರಾದವರು ಭಾಗವಹಿಸಲು ಇರುವ ಸೂಚನೆಯನ್ನು ಈಗಾಗಲೇ ತಿಳಿಸಲಾಗಿದೆ. 

Congress Ticket: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ

ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಸುಳ್ಳು ಮಾಹಿತಿಗಳಿಗಳನ್ನು ನಂಬದೇ ಈ ನಿರ್ಣಾಯಕ  ಹೋರಾಟದಲ್ಲಿ ಭಾಗಿಯಾಗಿ ಎಂದು ಸಮಿತಿ ತಿಳಿಸಿದ್ದು ರಾಜಕಾರಣ ಮಾಡಲು ಸಾವಿರ ದಾರಿಗಳಿವೆ, ಆದರೆ ಆಸ್ಪತ್ರೆ ವಿಷಯದಲ್ಲಿ ಬೇಡ. ಇಂದು ಯಾರದೋ ಕುಟುಂಬಕ್ಕಾದ ಆರೋಗ್ಯ ಸಮಸ್ಯೆಗಳು ನಾಳೆ ನಮ್ಮ ನಿಮ್ಮ ಕುಟುಂಬಕ್ಕೂ ಆಗಬಹುದು. 

ಆಗ ನಮ್ಮನ್ನು ಹಾಗೂ ಕುಟುಂಬಸ್ಥರನ್ನು ರಾಜಕಾರಣ ಬದುಕಿಸುವುದಿಲ್ಲ ಜನರಿಗೆ ತಿಳಿ ಹೇಳಿದ್ದಾರೆ.ಆಸ್ಪತ್ರೆ ಮೊದಲು ರಾಜಕೀಯ ನಂತರ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಕರೆ ನೀಡಿದೆ.ಹಾಗೆಯೇ 48 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಇದ್ದು ಬೇಡಿಕೆ ಈಡೇರಿದಲ್ಲಿ ತಕ್ಷಣವೇ ಹೋರಾಟ ಕೈಬಿಡುವುದಾಗಿ ತಿಳಿಸಿದ್ದು. ಬೇಡಿಕೆ ಈಡೇರಿದೆ ಇದ್ದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಅಂದಿನ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದೆ.

100 ಹಾಸಿಗೆ ಆಸ್ಪತ್ರೆಗೆ ಆಗ್ರಹಿಸಿ ಶೃಂಗೇರಿ ಯುವಕರ ತಮಟೆ ಚಳವಳಿ

ಜನಪ್ರತಿನಿಧಿಗಳು ವಿರುದ್ದ ಆಕ್ರೋಶ: ಸಂತೆ ಮಾರುಕಟ್ಟೆಯ ಬಳಿ ಪ್ರತಿಭಟನೆ ನಡೆಸುತ್ತಿರುವ ಸಮಿತಿಯ ಸದಸ್ಯರು ಸರ್ಕಾರ , ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಭಟನೆಯನ್ನು ದಮನ ಮಾಡುವ ಕೆಲಸವನ್ನು ಕೆಲ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದಂತೆ ಸಂಘಟನೆ ಮುಖಂಡರಿಗೆ ಕೆಲ ಜನ ಪ್ರತಿನಿಧಿಗಳು ಒತ್ತಡ ಹಾಕುವ ಕೆಲಸವನ್ನು ಮಾಡಿದ್ರು ಇದೇ ಕೆಲಸವನ್ನು ಆಸ್ಪತ್ರೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರೆ ಶೃಂಗೇರಿಗೆ 100 ಬೆಡ್ ಆಸ್ಪತ್ರೆ ಬರುತ್ತಿತ್ತು ಎಂದು ಪ್ರತಿಭಟನೆ ಕಿಡಿಕಾರಿದ್ದಾರೆ.

click me!