Mangaluru News: ರದ್ದಾದ Suratkal Tollgate; ಹೆಜಮಾಡಿಯಲ್ಲಿ ವಸೂಲಿ!

By Kannadaprabha News  |  First Published Nov 25, 2022, 2:04 PM IST

ಸುರತ್ಕಲ್‌ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸಿದ ಬಳಿಕ ಇದೀಗ ಹೆಜಮಾಡಿಯಲ್ಲಿ ಟೋಲ್‌ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದೇಶ ಹೊರಡಿಸಿದೆ. ಸುರತ್ಕಲ್‌ನಲ್ಲಿ ಈ ಹಿಂದೆ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್‌ನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶ ಮಾಡಲಾಗಿದೆ.


 ಮಂಗಳೂರು (ನ.25) : ಸುರತ್ಕಲ್‌ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸಿದ ಬಳಿಕ ಇದೀಗ ಹೆಜಮಾಡಿಯಲ್ಲಿ ಟೋಲ್‌ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದೇಶ ಹೊರಡಿಸಿದೆ. ಸುರತ್ಕಲ್‌ನಲ್ಲಿ ಈ ಹಿಂದೆ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್‌ನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶ ಮಾಡಲಾಗಿದೆ. ಹೀಗಾಗಿ ಸುರತ್ಕಲ್‌ ಟೋಲ್‌ ಗೇಟ್‌ ರದ್ದಾದರೂ ಪ್ರಯಾಣಿಕರಿಗೆ ಮಾತ್ರ ಒಂದು ರುಪಾಯಿ ಕೂಡ ಉಪಯೋಗ ಇಲ್ಲದಂತಾಗಿದೆ.

ಈ ಹೊಸ ಆದೇಶದಿಂದ ‘ಬೆಂಕಿಯಿಂದ ಬಾಣಲೆಗೆ’ ಬಿದ್ದವರು ದಕ್ಷಿಣ ಕನ್ನಡದ ಪ್ರಯಾಣಿಕರು. ಈ ಹಿಂದೆ ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಕೆಎ-19 ಖಾಸಗಿ ವಾಹನಗಳಿಗೆ ಟೋಲ್‌ ರಿಯಾಯ್ತಿ ಇತ್ತು. ಇನ್ನು ಮುಂದೆ ಈ ರಿಯಾಯ್ತಿ ಇರುವುದಿಲ್ಲ. ಸುರತ್ಕಲ್‌ ಟೋಲ್‌ನಲ್ಲಿ ಹಿಂದೆ ಬೇರೆ ವಾಹನಗಳು ಎಷ್ಟುಟೋಲ್‌ ಕಟ್ಟುತ್ತಿದ್ದವೋ ಅದನ್ನು ಸೇರಿಸಿ ಹೆಜಮಾಡಿಯಲ್ಲಿ ಕಟ್ಟಬೇಕಿದೆ.

Tap to resize

Latest Videos

Mangaluru: ಕೊನೆಗೂ suratkal tollgate ರದ್ದು; ನಿಲ್ಲಿಸಿಲ್ಲ ಇನ್ನು ಹೋರಾಟ!

ಕಾರು, ಜೀಪ್‌, ವ್ಯಾನ್‌ ಸೇರಿ ಲಘು ವಾಹನಗಳಿಗೆ ಸಿಂಗಲ್‌ ಟ್ರಿಪ್‌ಗೆ ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಪ್ರಸ್ತುತ 60 ರು. ಇದ್ದರೆ ಹೆಜಮಾಡಿಯಲ್ಲಿ 40 ರು. ಇದೆ. ಇನ್ನು ಮುಂದೆ ಹೆಜಮಾಡಿಯಲ್ಲಿ 100 ರು. ಕಟ್ಟಬೇಕು. ಲಘು ವಾಣಿಜ್ಯ ವಾಹನಗಳು, ಲಘು ಗೂಡ್‌್ಸ ವಾಹನಗಳು ಮತ್ತು ಮಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಈಗ 100 ರು. ಇದ್ದರೆ, ಹೆಜಮಾಡಿಯಲ್ಲಿ 70 ರು. ಇದೆ. ಇನ್ಮುಂದೆ ಇವರು 170 ರು. ಕಟ್ಟಬೇಕು. ಇದೇ ರೀತಿ ಎಲ್ಲ ರೀತಿಯ ವಾಹನಗಳಿಗೂ ಇದೇ ರೀತಿಯ ಟೋಲ್‌ ದರ ಅನ್ವಯವಾಗಲಿದೆ. ಸಿಂಗಲ್‌ ಟ್ರಿಪ್‌ ಮಾತ್ರವಲ್ಲ, ರಿಟರ್ನ್‌ ಟ್ರಿಪ್‌ನಲ್ಲೂ ಒಂದು ರುಪಾಯಿ ಕಡಿಮೆಯಾಗಿಲ್ಲ!

ಪರಿಷ್ಕೃತ ದರ: ಕಾರು ಜೀಪು ವ್ಯಾನ್‌ ಸೇರಿ ಲಘು ವಾಹನಗಳಿಗೆ ಸಿಂಗಲ್‌ ಟ್ರಿಪ್‌ 100 ರು., ರಿಟರ್ನ್‌ ಟ್ರಿಪ್‌ 155 ರು., ತಿಂಗಳ ಪಾಸ್‌ (50 ಸಿಂಗಲ್‌ ಟ್ರಿಪ್‌ಗಳಿಗೆ) 3460 ರು., ಲಘು ವಾಣಿಜ್ಯ ವಾಹನಗಳು, ಲಘು ಗೂಡ್‌್ಸ, ಮಿನ್‌ ಬಸ್‌ಗಳಿಗೆ ಸಿಂಗಲ್‌ ಟ್ರಿಪ್‌ 170 ರು., ರಿಟರ್ನ್‌ ಟ್ರಿಪ್‌ 250 ರು., ತಿಂಗಳ ಪಾಸ್‌ 5590 ರು., ಬಸ್‌, ಟ್ರಕ್‌ (2 ಆಕ್ಸೆಲ್‌)ಗಳಿಗೆ ಸಿಂಗಲ್‌ ಟ್ರಿಪ್‌ಗೆ 355 ರು., ರಿಟರ್ನ್‌ ಟ್ರಿಪ್‌ಗೆ 525 ರು., ತಿಂಗಳ ಪಾಸ್‌ಗೆ 11,705 ರು., ಭಾರಿ ನಿರ್ಮಾಣ ಯಂತ್ರಗಳು, ಜೆಸಿಬಿಗಳು, ಮಲ್ಟಿಆಕ್ಸೆಲ್‌ ವಾಹನಗಳಿಗೆ ಸಿಂಗಲ್‌ ಟ್ರಿಪ್‌ಗೆ 550 ರು., ರಿಟರ್ನ್‌ ಟ್ರಿಪ್‌ಗೆ 825 ರು., ತಿಂಗಳ ಪಾಸ್‌ಗೆ 18,360 ರು., ಏಳಕ್ಕಿಂತ ಹೆಚ್ಚು ಆಕ್ಸೆಲ್‌ ವಾಹನಗಳಿಗೆ ಸಿಂಗಲ್‌ ಟ್ರಿಪ್‌ಗೆ 675 ರು., ರಿಟರ್ನ್‌ ಟ್ರಿಪ್‌ಗೆ 1005 ರು., ತಿಂಗಳ ಪಾಸ್‌ಗೆ 22,350 ರು. ಸುಂಕ ನಿಗದಿ ಮಾಡಲಾಗಿದೆ.

ಉಡುಪಿ : ಈ ಟೋಲ್‌ನಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ

\ತುಳುನಾಡ ಜನತೆಗೆ ಎಸಗಿದ ಮಹಾಮೋಸ

ಸುರತ್ಕಲ್‌ ಟೋಲ್‌ಗೇಟ್‌ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಗುರುವಾರ 28ನೇ ದಿನಕ್ಕೆ ತಲುಪಿದೆ. ಸುರತ್ಕಲ್‌ನಲ್ಲಿದ್ದ ಟೋಲ್‌ ಸೇರಿಸಿ ಪರಿಷ್ಕೃತ ಆದೇಶ ಮಾಡಿರುವ ಕ್ರಮಕ್ಕೆ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅತ್ಯಂತ ಜನ ವಿರೋಧಿ ಸರ್ಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್‌ ಟೋಲ್‌ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸಂಗ್ರಹಿಸಲು (ಸುಲಿಗೆ ನಡೆಸಲು) ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ಅತ್ಯಂತ ಕೆಟ್ಟ, ಜನ ವಿರೋಧಿ ನಿರ್ಧಾರ. ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ. ಬಿಜೆಪಿ ಸಂಸದ, ಶಾಸಕರುಗಳಿಗೆ ಆಡಳಿತ ನಡೆಸುವ ಯಾವುದೇ ಅನುಭವ ಇಲ್ಲ ಎಂಬುದು ಈಗ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಯ್ತು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

click me!