
ದಾವಣಗೆರೆ: ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಆ. 26 ರಂದು ಬಿಡುಗಡೆ ಪ್ರಯುಕ್ತ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳದಿಂದ ಟಾಕ್ಸಿಕ್ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.
ತ್ರಿನೇತ್ರ, ತ್ರಿಶೂಲ್, ಗೀತಾಂಜಲಿ ಹಾಗೂ ಎಸ್‌ಎಸ್ ಮಾಲ್‌ನಲ್ಲಿ ಟಾಕ್ಸಿಕ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತೋಷ ಉಂಟು ಮಾಡಿದೆ ಎಂದರು.
ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರದಲ್ಲಿ ಬೆಳಗಿನ ಜಾವ 6ಕ್ಕೆ ಫ್ಯಾನ್ ಶೋ ನಡೆಯುತ್ತಿದೆ. 5.30ಕ್ಕೆ ಎರಡೂ ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮೋತ್ಸವ ನಡೆಸಲಾಗುವುದು. ಫ್ಯಾನ್ ಷೋಗಾಗಿ ಎರಡೂ ಚಿತ್ರಮಂದಿರಗಳ ಟಿಕೆಟ್‌ಗಳನ್ನು ಅಭಿಮಾನಿಗಳೇ ಖರೀದಿ ಮಾಡಿದ್ದೇವೆ. ಒಟ್ಟು ₹4.74 ಲಕ್ಷ ಮೊತ್ತದ ಟಿಕೆಟ್ ಖರೀದಿಸಲಾಗಿದೆ ಎಂದು ತಿಳಿಸಿದರು.
ಯಶ್ ಅಭಿನಯದ ಚಿತ್ರ ಬಿಡುಗಡೆಗೆ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಾ ಇದ್ದೇವೆ. ಅತಿ ಹೆಚ್ಚಿನ ಬಜೆಟ್‌ನ ಚಿತ್ರ ಖಂಡಿತವಾಗಿಯೂ ಯಶಸ್ವಿ ಆಗುತ್ತದೆ ಎಂಬ ವಿಶ್ವಾಸ ಇದೆ. ಮುಂದಿನ ದಿನಗಳಲ್ಲಿ ಯಶ್ ಅವರ ಅಪೇಕ್ಷೆಯಂತೆ ಸಾಮಾಜಿಕ ಸೇವಾ ಕಾರ್ಯಗಳ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್; ಧುರಂದರ್ ದಾಖಲೆ ಉಡೀಸ್
ಸುದ್ದಿಗೋಷ್ಠಿಯಲ್ಲಿ ಅಭಿಮಾನಿಗಳ ಸಂಘದ ನರೇಶ್, ವಿನಯ್ ಕುಮಾರ್, ಸಂದೀಪ್, ರಾಕೇಶ್ ಕುಮಾರ್, ಸಚಿನ್, ಶಿವು, ವಿಜಯ್, ನರೇಂದ್ರ, ವೀರೇಂದ್ರ, ಮೋಹನ್ ಇತರರು ಇದ್ದರು.
ಇದನ್ನೂ ಓದಿ: ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!