Cyclone Arnab: ಕರ್ನಾಟಕದಲ್ಲೂ ಭಾರೀ ಮಳೆ ಆಗುತ್ತಾ? ಹವಾಮಾನ ಇಲಾಖೆ ಎಚ್ಚರಿಕೆ ಏನು?

Published : Sep 24, 2026, 08:14 AM IST
arnab cyclone

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಬ್' ಚಂಡಮಾರುತವು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಭಾರೀ ಮಳೆಯಾಗುತ್ತಿದೆ. ಸೈಕ್ಲೋನ್ ಎಫೆಕ್ಟ್ ಕರ್ನಾಟಕ್ಕೆ ಆಪತ್ತು ತರುತ್ತಾ? ಹವಾಮಾನ ಇಲಾಖೆ ಎಚ್ಚರಿಕೆ ಏನು?

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತವು ದೊಡ್ಡ ಅನಾಹುತ ಸೃಷ್ಟಿಮಾಡಿದೆ. ಅರ್ನಬ್‌ ಚಂಡಮಾರುತ (arnab cyclone) ಸೃಷ್ಟಿಯಾಗಿದ್ದು, ಇದು ಹಲವು ರಾಜ್ಯಗಳಿಗೆ ಭಾರೀ ಪೆಟ್ಟು ಕೊಡುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜ್ಯಗಳಿಗೆ ಎಚ್ಚರಿಕೆಯನ್ನ ನೀಡಲಾಗಿದೆ.

ಚಂಡಮಾರುತವು ಈಗಾಗಲೇ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ಯಶಸ್ವಿಯಾಗಿ ಅಪ್ಪಳಿಸಿದೆ. ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವಿನ ಕರಾವಳಿ ತೀರವನ್ನು ಚಂಡಮಾರುತದ ಕೇಂದ್ರಭಾಗವು ದಾಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ಅರ್ನಬ್ ಅಬ್ಬರ ಜೋರಾಗಿದೆ. ಇದು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕದ ಮೇಲೂ ಪರಿಣಾಮ ಬೀರುತ್ತಾ?

ಆಂಧ್ರ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ ಜೋರಾಗಿದ್ದರೂ ಕರ್ನಾಟಕದ ಮೇಲೆ ನೇರ ಪರಿಣಾಮ ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಕರ್ನಾಟಕದ ಜನರು ನಿಟ್ಟುಸಿರು ಬಿಡಬಹುದು. ಚಂಡಮಾರುತವು ಉತ್ತರ ಆಂಧ್ರ ಮತ್ತು ಒಡಿಶಾ ಕಡೆಗೆ ಮುಖ ಮಾಡಿದೆ. ಹೀಗಾಗಿ ಕರಾವಳಿ ಕರ್ನಾಟಕ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಯಾವುದೇ ಭಾಗಗಳಿಗೂ ಎಫೆಕ್ಟ್ ಆಗಲ್ಲ. ಹೀಗಿದ್ದೂ, ತೆಲಂಗಾಣ ಹಾಗೂ ಆಂಧ್ರದಲ್ಲಿ ಭಾರಿ ಮಳೆಯಾಗಲಿದೆ. ಇದರಿಂದ ಕರ್ನಾಟಕದ ಗಡಿ ಭಾಗಗಳು ಹಾಗೂ ಬೆಂಗಳೂರು ಸೇರಿದಂತೆ ಕೆಲವೆಡೆ ಮೋಡಕವಿದ ವಾತಾವರಣ ಅಥವಾ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಯಾವುದೇ ಪ್ರವಾಹ, ಬಿರುಗಾಳಿ ಅಥವಾ ಹಾನಿಯಾಗುವಂತಹ ಮುನ್ಸೂಚನೆ ಕರ್ನಾಟಕಕ್ಕೆ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆ ಸುರಿದರೂ ಯಾವುದೇ ಅಚ್ಚರಿ ಇಲ್ಲ.

ಎಲ್ಲೆಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ?

ಗಂಟೆಗೆ ಸುಮಾರು 75 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಡಿಶಾದ ಗಂಜಾಂ, ಗಜಪತಿ, ಕೋರಾಪುಟ್, ಖುರ್ದಾ ಮತ್ತು ಮಲ್ಕಾನಗಿರಿ ಜಿಲ್ಲೆಗಳದಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ, ಕಾಕಿನಾಡ, ಶ್ರೀಕಾಕುಲಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇತರೆ ರಾಜ್ಯಗಳಾದ ತೆಲಂಗಾಣ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲೂ ಭಾರೀ ಮಳೆ ಸುರಿಯುವ ಸೂಚನೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ.. ಈ ಎಲ್ಲಾ ರಾಜ್ಯಗಳಲ್ಲೂ ಮುಂದಿನ 24 ರಿಂದ 48 ಗಂಟೆಗಳ ಕಾಲ ಭಾರೀ ಮಳೆ ಸುರಿಯಲಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಸನ್ನದ್ಧವಾಗಿಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗೆ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

PREV
Read more Articles on
click me!

Recommended Stories

ವಿಧಾನಸಭೆ: 'ಏನ್ ಮಾಡೋಕಾಗುತ್ತೆ ನಿಮ್ ಕೈಲಿ?..' ಒಂದೇ ಜಿಲ್ಲೆಯ ಇಬ್ಬರು 'ಕೈ' ಶಾಸಕರ ನಡುವೆ ಗಲಾಟೆ!
ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು: ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ