ಮಂಗಳೂರು: 16ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

By Kannadaprabha NewsFirst Published Sep 26, 2019, 7:57 AM IST
Highlights

ಸರಣಿ ಹಂತಕ ಸೈನೈಡ್‌ ಮೋಹನ್‌ನಿಗೆ 16ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಯಾಗಿದೆ. ಕಾಸರಗೋಡಿನ ಬೇಕೂರಿನ 33 ವರ್ಷ ಪ್ರಾಯದ ಯುವತಿ ಕೊಲೆ ಮಾಡಿದ ಆರೋಪದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ 45 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು(ಸೆ.25): ಅತ್ಯಾಚಾರ, ಕೊಲೆ ಪ್ರಕರಣದ ಸರಣಿ ಹಂತಕ ಸೈನೈಡ್‌ ಮೋಹನ್‌ನಿಗೆ 16ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಯಾಗಿದೆ. ಕಾಸರಗೋಡಿನ ಬೇಕೂರಿನ 33 ವರ್ಷ ಪ್ರಾಯದ ಯುವತಿ ಕೊಲೆ ಮಾಡಿದ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದ್ದು, ಇದೀಗ ಜೀವಾವಧಿ ಶಿಕ್ಷೆಯೊಂದಿಗೆ 45 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಸೈನೈಡ್‌ ಮೋಹನ್‌ ಕುಮಾರ್‌ ಈ ಹಿಂದಿನ 15 ಪ್ರಕರಣಗಳಲ್ಲಿ ವಿಧಿಸಲಾಗಿರುವ ಶಿಕ್ಷೆಯನ್ನು ಅನುಭವಿಸಿದ ಬಳಿಕ ಪ್ರತ್ಯೇಕವಾಗಿ ಈ ಪ್ರಕರಣದ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಜಿಟಿ ದೇವೇಗೌಡರಿಗೆ ಜೆಡಿಎಸ್‌ನಿಂದಲೇ ಇದೆಂಥಾ ಶಾಕ್..!

2007ರ ಏಪ್ರಿಲ್‌ನಲ್ಲಿ ಮೋಹನ್‌ ಕುಮಾರ್‌ ಕಾಸರಗೋಡು ತಾಲೂಕಿನ ಉಪ್ಪಳ ಬಸ್‌ ನಿಲ್ದಾಣದಲ್ಲಿ ಅವಿವಾಹಿತ ಯುವತಿಯ ಪರಿಚಯ ಮಾಡಿಕೊಂಡಿದ್ದ. ತನ್ನನ್ನು ಸುಧಾಕರ ಆಚಾರ್ಯ, ಅರಣ್ಯ ಇಲಾಖೆಯ ಉದ್ಯೋಗಿ ಎಂದು ಹೇಳಿ ಆಕೆಯ ಜತೆ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿದ್ದ. ಆಕೆಯ ಪೋಷಕರ ವಿಶ್ವಾಸವನ್ನೂ ಗಳಿಸಿದ್ದ.

ಮೇ 28ರಂದು ಆಕೆಯನ್ನು ಬೆಂಗಳೂರಿನ ವಸತಿಗೃಹದಲ್ಲಿ ಅತ್ಯಾಚಾರ ಗೈದು ಮರುದಿನ ಅಲ್ಲಿನ ಬಸ್‌ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸಯನೈಡ್‌ ಗುಳಿಗೆ ನೀಡಿ ಕೊಲೆಗೈದಿದ್ದ. ಅಲ್ಲಿಂದ ಕಾಲ್ಕಿತ್ತ ಆತ ಮಂಗಳೂರಿಗೆ ಹಿಂತಿರುಗಿ ಆಕೆಯ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಸೆಕ್ಷನ್‌ 302 (ಕೊಲೆ) ಆರೋಪದ ಕೃತ್ಯಕ್ಕೆ ಜೀವಾವಧಿ ಹಾಗೂ 25 ಸಾವಿರ ರು. ದಂಡ, ಸೆಕ್ಷನ್‌ 328 (ವಿಷ ಉಣಿಸಿದ) ಕೃತ್ಯಕ್ಕೆ 10 ವರ್ಷ ಕಠಿನ ಶಿಕ್ಷೆ ಮತ್ತು 5 ಸಾವಿರ ರು. ದಂಡ, ಸೆಕ್ಷನ್‌ 392 (ಚಿನ್ನಾಭರಣ ಸುಲಿಗೆ) ಕೃತ್ಯಕ್ಕೆ 5 ವರ್ಷ ಕಠಿನ ಶಿಕ್ಷೆ ಮತ್ತು 5 ಸಾವಿರ ರು. ದಂಡ, ಸೆಕ್ಷನ್‌ 394 (ವಿಷ ಪ್ರಾಶನ) ಅನ್ವಯ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 5 ಸಾವಿರ ರು. ದಂಡ, ಸೆಕ್ಷನ್‌ 417 (ವಂಚನೆ) ಕೃತ್ಯಕ್ಕೆ 1 ವರ್ಷ ಕಠಿನ ಸಜೆ, ಸೆಕ್ಷನ್‌ 201 (ಸಾಕ್ಷ ್ಯ ನಾಶ) ಅನ್ವಯ 7 ವರ್ಷ ಕಠಿನ ಶಿಕ್ಷೆ ಮತ್ತು 5 ಸಾವಿರ ರು. ದಂಡ ವಿಧಿಸಿದೆ.

ಸಮಸ್ಯೆಗಳ ಆಗರವಾದ ಧಾರವಾಡ ಜಿಲ್ಲಾ ಕ್ರೀಡಾಂಗಣ

ಸಯನೈಡ್‌ ಮೋಹನನಿಂದ ಕೊಲೆಯಾದ ಯುವತಿಯ ತಾಯಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರಕಾರದಿಂದ ಪರಿಹಾರ ಪಡೆಯಲು ಅವಕಾಶ ಕಲ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಓ.ಎಂ. ಕ್ರಾಸ್ತಾ ಸರ್ಕಾರದ ಪರ ವಾದ ಮಂಡಿಸಿದ್ದರು.

click me!