ಮರಾಠಿ ಮಾತನಾಡಿದ್ದನ್ನು ಕೇಳಿದ್ದಕ್ಕೆ ಹೆಬ್ಬಾಳ್ಕರ್ ಪುತ್ರನಿಂದ ಯುವಕನಿಗೆ ಧಮ್ಕಿ!

By Web Desk  |  First Published Sep 25, 2019, 7:10 PM IST

ಬೆದರಿಕೆ ಹಾಕಿದ್ರಾ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂದೇಶ ಹೇಳುತ್ತಿರುವುದೇನು? ಮರಾಠಿಯಲ್ಲಿ ಮಾತನಾಡಿದ್ದನ್ನು ವಿರೋಧಿಸಿದ್ದೆ ತಪ್ಪಾಯ್ತಾ?


ಬೆಳಗಾವಿ (ಸೆ. 25)  ರಾಣಿ ಚೆನ್ನಮ್ಮನ ಪುತ್ಥಳಿ ಮುಂದೆ ನಿಂತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದನ್ನ ವಿರೋಧಿಸಿ ಪೋಸ್ಟ್ ಹಾಕಿದ್ದ ಯುವಕನಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ  ಬೆದರಿಕೆ ಹಾಕಿದ್ದಾರೆ ಎಂಬ ವರದಿಗಳು ಓಡಾಡುತ್ತಿವೆ.

ಪವನ ಮಹಾಲಿಂಗಪುರ ಎಂಬ ಯುವಕನಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಫೇಸ್ ಬುಕ್ ನಲ್ಲಿ  ಬೆದರಿಕೆ ಮೆಸೇಜ್ ಕಳುಹಿಸಿದ್ದು, ಮೇಡಂ ವಿರುದ್ದ ಇನ್ನೊಮ್ಮೆ ಪೋಸ್ಟ್ ಮಾಡಿದ್ರೆ ನಿನ್ನನ್ನ ಸುಮ್ಮನೆ ಬಿಡುವುದಿಲ್ಲ, ನಿಮ್ಮ ಮನೆಗೆ ನೇರವಾಗಿ ಬರ್ತಿನಿ, ಬಿಸಿ ಮಾಡೋದಿದೆ ಎಂಬ ಸಂದೇಶಗಳುಳ್ಳ ಮೆಸೇಜ್ ಹರಿದಾಡುತ್ತಿದೆ. ಅಂದರೆ ಪವನ್ ಅವರಿಗೆ ಮೃಣಾಲ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.

Tap to resize

Latest Videos

ಡಿಕೆಶಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೋದ ಕೋಟಿ-ಕೋಟಿ ಹಣದ ರಹಸ್ಯ ಬಯಲು

ಮಂಗಳವಾರ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕನ್ನಡ ಮಾತನಾಡುವಂತೆ ಒತ್ತಾಯಿಸಿದಾಗ ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡ ಮಾತನಾಡಿದ್ದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೋಳಿ ಸಂಭ್ರಮದ ಪೋಟೋಸ್

ರಾಣಿ ಚೆನ್ನಮ್ಮನ ಪುತ್ಥಳಿ ಮುಂದೆ ನಿಂತು ಲಕ್ಷ್ಮೀ ಹೆಬ್ಬಾಳ್ಕರ್  ಮರಾಠಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಿಂದೆ ಕನ್ನಡದ ಬಾವುಟ ಸಹ ಇದ್ದು ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಗರ ಓಲೈಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

 

click me!