ಗಗನಕ್ಕೇರಿದ ತರಕಾರಿ ಬೆಲೆ: ಕಂಗಾಲಾದ ಜನ ಸಾಮಾನ್ಯ

By Kannadaprabha News  |  First Published Jun 4, 2022, 10:16 AM IST

*   ಸಂಡೂರಿನ ಮಾರುಕಟ್ಟೆಯಲ್ಲಿ ಕೈಗೆಟುಕದ ಕಾಯಿಪಲ್ಲೆ
*  ಕೆಜಿ ಟೋಮೆಟೋಗೆ 80, ಬೀನ್ಸ್‌ ಕೆಜಿಗೆ 120
*  ತರಕಾರಿ ಕೃಷಿ ಕಡಿಮೆ 
 


ರಾಮು ಅರಕೇರಿ

ಸಂಡೂರು(ಜೂ.04): ತರಕಾರಿ ಬೆಲೆ ಒಂದು ತಿಂಗಳಿಂದ ದುಬಾರಿಯಾಗಿದ್ದು, ಹೆಚ್ಚಾದ ಬೆಲೆಗೆ ಜನ ಸಾಮಾನ್ಯರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಸಂಡೂರಿನ ದಿನದ ಮಾರುಕಟ್ಟೆಯಲ್ಲಂತೂ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

Latest Videos

undefined

ವಾರದ ಸಂತೆಗೆ ತಾಲೂಕಿನ ಯಶ್ವಂತನಗರ, ಕೃಷ್ಣಾನಗರ, ಸುಶೀಲಾನಗರ, ಭುಜಂಗನಗರ, ಮುರಾರಿಪುರ, ನಂದಿಹಳ್ಳಿ, ದೇವಗಿರಿ ಸೇರಿದಂತೆ ಸುತ್ತಮುತ್ತ ಇರುವ ಅನೇಕ ಗ್ರಾಮಸ್ಥರು ಬರುತ್ತಾರೆ. ಆದರೆ, ತರಕಾರಿ ರೇಟು ಹೆಚ್ಚಾದ ಹಿನ್ನೆಲೆಯಲ್ಲಿ ಜನ ಬಂದರೂ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಟೊಮೆಟೋ ಕೆಜಿಗೆ 125 ರೂ.: ಬೆಲೆ ಕೇಳಿ ದಂಗಾದ ಗ್ರಾಹಕರು..!

ಟೊಮ್ಯಾಟೋ ಹಣ್ಣಿನ ಬೆಲೆ ತುಂಬಾ ಏರುತ್ತಿದೆ. ಈ ವಾರದಲ್ಲಿ ಕೇಜಿಯೊಂದಕ್ಕೆ .150 ತನಕ ಏರಿದ್ದು, ಸದ್ಯ .80ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್‌ ಕೆಜಿಗೆ .120, ಕ್ಯಾಪ್ಸಿಕಂ .120, ಹಸಿ ಮೆಣಸಿನಕಾಯಿ .80, ಹಿರೇಕಾಯಿ .60, ಬೆಂಡೆಕಾಯಿ .60, ತುಪ್ಪದ ಹಿರೇಕಾಯಿ (ತುಪ್ಪರೆಕಾಯಿ) .60, ಹಾಗಲಕಾಯಿ .60, ಸೌತೆಕಾಯಿ .60, ಬೀಟ್‌ ರೂಟ್‌ .60, ಬದನೆಕಾಯಿ .40, ಚವಳೆಕಾಯಿ .40, ಆಲೂಗಡ್ಡೆ .30, ಹೂಕೋಸೊಂದಕ್ಕೆ .3, ಲಿಂಬೆಹಣ್ಣು .20ಗೆ ಮೂರು ಅದೇರೀತಿ ಸೊಪ್ಪಿನ ಬೆಲೆಯೂ ಹೆಚ್ಚಳವಾಗಿದ್ದು ಹತ್ತು ರೂಪಾಯಿಗೆ ಮೂರರಂತೆ ಸಿಗುತ್ತಿದ್ದ ಸೊಪ್ಪು ಒಂದೊಂದು ಕಟ್ಟು ಸಿಗುತ್ತಿದೆ. ತಾಲೂಕಿನ ಭುಜಂಗನಗರ, ಸುಶೀಲಾನಗರಗಳಲ್ಲಿ ಬೆಳೆದರೂ ಸೊಪ್ಪು ದುಬಾರಿಯಾಗಿದೆ. ಕೊತ್ತಂಬರಿ ಕೂಡಾ ಹತ್ತು ರೂಪಾಯಿಗೆ ಒಂದುಕಟ್ಟು ಸಿಗುತ್ತಿದೆ. ಒಂದು ಕಡೆ ದಿನಸಿ ಗ್ಯಾಸ್‌ ಬೆಲೆ ಹೆಚ್ಚಳ ಮತ್ತೊಂದೆಡೆ ತರಕಾರಿ ಬೆಲೆಯೂ ಹೆಚ್ಚಿದೆ. ಇದರಿಂದ ಜನ ಸಾಮಾನ್ಯರಿಗೆ ಜೀವನಕ್ಕೆ ಮತ್ತಷ್ಟುಕಷ್ಟವಾಗುತ್ತಲಿದೆ.

ತರಕಾರಿ ಕೃಷಿ ಕಡಿಮೆ:

ಸಂಡೂರು ತಾಲೂಕು ಹೇಳಿಕೇಳಿ ಗಣಿ ಅಬ್ಬರದಿಂದ ಕೂಡಿದೆ. ಇಲ್ಲಿನ ಜನ ಧೂಳಲ್ಲಿ ಹಣ ಕಂಡವರು. ಸಮೃದ್ಧ ಕೃಷಿಯಿಂದ ವಿಮುಖರಾಗಿ ಒಂದೂವರೆ ದಶಕವೇ ಕಳೆದಿದೆ. ಎಲ್ಲರೂ ಇಲ್ಲಿನ ಕಾರ್ಖಾನೆ ಮತ್ತು ಗಣಿಗಳಲ್ಲಿ ಕೆಲಸ ಮಾಡುವಾಗ ಬೇಸಾಯ ಮಾಡಿ ಅದರಲ್ಲೂ ತರಕಾರಿ ಬೆಳೆದು ಲಾಭ ಗಳಿಸಲು ಶ್ರಮಿಸುವವರು ಯಾರು? ಮತ್ತೊಂದೆಡೆ ಬೇಸಿಗೆಯೂ ಇರುವುದರಿಂದ ಇದು ಭೂಮಿಯನ್ನು ಮುಂದಿನ ವರ್ಷದ ಬೇಸಾಯಕ್ಕೆ ಪೂರಕವಾಗಿ ಹದಗೊಳಿಸಿಕೊಳ್ಳುವ ಸಮಯವಾದ್ದರಿಂದ ಬಹುತೇಕ ತಾಲೂಕಿನಲ್ಲಿ ತರಕಾರಿ ಬೆಳೆಗೆ ಅವಕಾಶವಿಲ್ಲ. ಈ ಕಾರಣಕ್ಕೆ ಪಕ್ಕದ ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ತಂದು ಮಾರುವುದರಿಂದ ಗ್ರಾಹಕರ ಜೇಬಿಗೆ ಹೊಡೆತ ಬೀಳುತ್ತದೆ.

ಸಂಡೂರಿನ ದಿನದ ಮಾರುಕಟ್ಟೆಮತ್ತು ವಾರದ ಮಾರುಕಟ್ಟೆಎರಡೂ ಇದ್ದು ಪ್ರತಿ ಭಾನುವಾರ ಇಲ್ಲಿ ಸಂತೆ ನಡೆಯುತ್ತದೆ. ಉಳಿದಂತೆ ಇಲ್ಲಿನ ಪುರಸಭೆ ಬಸ್‌ ನಿಲ್ದಾಣ ಹಾಗೂ ಇನ್ನೂ ಕೆಲವೆಡೆ ತರಕಾರಿಯನ್ನು ಇಟ್ಟು ಮಾರಾಟ ಮಾಡಲಾಗುತ್ತದೆ. ಆದರೆ, ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ತರಕಾರಿ ಖರೀದಿ ಕಡಿಮೆ ಆಗಿದೆ ಎನ್ನುತ್ತಾರೆ ವ್ಯಾಪಾರಿ ಶಿವಕುಮಾರ್‌.

Vegetable Price Hike:ಕೈ ಸುಡುತ್ತಿದೆ ತರಕಾರಿ ಬೆಲೆ; ಈ ದುಬಾರಿ ದರಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ

ಪ್ರತಿ ಭಾನುವಾರ ವಾರದ ಸಂತೆಗೆ ಹೋಗುತ್ತೇವೆ. ದಿನದಿನಕ್ಕೂ ತರಕಾರಿ ಬೆಲೆ ಹೆಚ್ಚುತ್ತಿದೆ. ಸಂಡೂರು ಮಾರುಕಟ್ಟೆಯಲ್ಲಿ ಈರುಳ್ಳಿಯೊಂದನ್ನು ಹೊರತುಪಡಿಸಿ ಯಾವ ತರಕಾರಿಯನ್ನೂ ಕೊಳ್ಳುವಂತಿಲ್ಲ. ಅಷ್ಟೊಂದು ಬೆಲೆ ಹೆಚ್ಚಳವಾಗಿದೆ. ಬಡವರು ದುಡಿಮೆಯ ಅರ್ಧ ಭಾಗ ದಿನಸಿ, ತರಕಾರಿಗಳಿಗೆ ವ್ಯಯವಾಗುತ್ತಿದೆ ಅಂತ ಗ್ರಾಹಕರಾದ ವಿಜಯಲಕ್ಷ್ಮಿ ಎ. ತಿಳಿಸಿದ್ದಾರೆ.  

ಈಗ ಸಂಡೂರು ತಾಲೂಕಿನಲ್ಲಿ ತರಕಾರಿ ಬೆಳೆ ಕಡಿಮೆ ಇದೆ. ಅಲ್ಲದೆ, ತರಕಾರಿಯನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವುದು ಕಡಿಮೆ. ಹಾಗಾಗಿ, ಹೊಸಪೇಟೆ ಮಾರುಕಟ್ಟೆಯಿಂದ ತರಕಾರಿ ತರುತ್ತೇವೆ. ತಂದು ಮಾರುವುದರೊಳಗೆ ಖರ್ಚು-ವೆಚ್ಚ ತೆಗೆದು ಬೆಲೆ ಹೆಚ್ಚಳ ಸಹಜವಾಗಿ ಹೆಚ್ಚಾಗುತ್ತದೆ ಅಂತ ತರಕಾರಿ ವ್ಯಾಪಾರಿ ಶಿವಕುಮಾರ ಹೇಳಿದ್ದಾರೆ 

ತರಕಾರಿ (ಕೆಜಿ) ಬೆಲೆ (ರೂ.ಗಳಲ್ಲಿ)

ಕ್ಯಾಪ್ಸಿಕಂ 120
ಬೀನ್ಸ್‌ 120
ಟೋಮಟೋ 80
ಹಸಿ ಮೆಣಸಿನಕಾಯಿ 80
ಹಿರೇಕಾಯಿ 60
ಬೆಂಡೆಕಾಯಿ 60
ತುಪ್ಪರೆಕಾಯಿ 60
ಹಾಗಲಕಾಯಿ 60
ಸೌತೆಕಾಯಿ 60
ಬೀಟ್‌ರೂಟ್‌ 60
ಬದನೆಕಾಯಿ 40
ಚವಳೆಕಾಯಿ 40
ಆಲೂಗಡ್ಡೆ 30
ಹೂಕೋಸು (1ಕ್ಕೆ) 30
 

click me!