ಆರೋಗ್ಯದಲ್ಲಿ ಏರುಪೇರು: ಸಿ.ಟಿ.ರವಿ ಆಸ್ಪತ್ರೆಗೆ ದಾಖಲು

By Girish Goudar  |  First Published Apr 16, 2023, 10:09 AM IST

ನಿನ್ನೆ ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿ.ಟಿ.ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬಿಜೆಪಿ ಕಚೇರಿಯಿಂದ ಆಶ್ರಯ ಆಸ್ಪತ್ರೆಗೆ ತೆರಳಿ ಅಡ್ಮೀಟ್ ಆಗಿದ್ದಾರೆ. 


ಚಿಕ್ಕಮಗಳೂರು(ಏ.16):  ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಖಾಸಗಿ (ಆಶ್ರಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಅಂತ ತಿಳಿದು ಬಂದಿದೆ. 

ಸಿ.ಟಿ.ರವಿ ಅವರಿಗೆ ಕಿಡ್ನಿ ಸ್ಟೋನ್‌ನಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿ.ಟಿ.ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬಿಜೆಪಿ ಕಚೇರಿಯಿಂದ ಆಶ್ರಯ ಆಸ್ಪತ್ರೆಗೆ ತೆರಳಿ ಅಡ್ಮೀಟ್ ಆಗಿದ್ದಾರೆ. 

Tap to resize

Latest Videos

undefined

ಸಿ.ಟಿ.ರವಿ ವಿರುದ್ಧ ನಕಲಿ ಪೋಸ್ಟ್: ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪೊಲೀಸರ ಮಧ್ಯೆ ವಾಕ್ಸಮರ!

ಕಿಡ್ನಿಯಲ್ಲಿ 12 ಎಂ.ಎಂ. ಕಲ್ಲು ಇದೆ ಅಂತ ವೈದ್ಯರು ತಿಳಿಸಿದ್ದಾರೆ. ಸದ್ಯ ಸ್ಟಂಟ್ ಮೂಲಕ ಕಲ್ಲುಗಳ ರವಾನೆ ಮಾಡಲಾಗುತ್ತಿದ್ದು, ಇಂದು ಒಂದು ದಿನ ವಿಶ್ರಾಂತಿಯಲ್ಲಿರಲು ವೈದ್ಯರು ಸೂಚನೆ ನೀಡಿದ್ದಾರೆ. 
ಇಂದು(ಭಾನುವಾರ) ರಾತ್ರಿ 10 ಗಂಟೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ವೈದ್ಯರು. ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರು ಆಶ್ರಯ ಆಸ್ಪತ್ರೆಗೆ ಭೇಟಿ ಸಿ.ಟಿ.ರವಿ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ. 

click me!