ಅಗಲಿದ ಚೇತನ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರನ್ನು ನೆನೆಯುತ್ತಲೆ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಡುತ್ತಲೆ ಮಾಜಿ ಶಾಸಕ ಹಾಗೂ ಕಾಂಗ್ರಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಮತ ಭಿಕ್ಷೆ ಬೇಡಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕೊಳ್ಳೇಗಾಲ : ಅಗಲಿದ ಚೇತನ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರನ್ನು ನೆನೆಯುತ್ತಲೆ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಡುತ್ತಲೆ ಮಾಜಿ ಶಾಸಕ ಹಾಗೂ ಕಾಂಗ್ರಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಮತ ಭಿಕ್ಷೆ ಬೇಡಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಾರಂಭದಲ್ಲಿ ಧ್ರುವನಾರಾಯಣ ಅವರನ್ನು ನೆನೆದು ಕಣ್ಣೀರಿಡುತ್ತಲೇ ಅವರೊಬ್ಬ ಉತ್ತಮ ಸ್ನೇಹಿತರಾಗಿದ್ದರು. ನಾವಿಬ್ಬರು ಹಲವು ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಯಾಗಿದ್ದರೂ ರಾಜಕೀಯ ವೈಷಮ್ಯ ಬೆಳೆಸಿಕೊಂಡಿರಲಿಲ್ಲ, ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಅವರ ಮೀರಿ ನಾನು ರಾಜಕೀಯ ಮಾಡಿಲ್ಲ, ಅವರ ಸಾವಿನ ವಿಚಾರ ತಿಳಿಯುತ್ತಲೆ ನನಗೆ ಶಾಕ್ ಆಯಿತು ಎನ್ನತ್ತಲೆ ಗದ್ಗದಿತರಾಗಿ ಕಣ್ಣೀರಿಟ್ಟರು.
undefined
ಮುಂದುವರೆದು ಮಾತನಾಡಿದ ಅವರು ಒಂದು ಮತದ ಸೋಲು ಇನ್ನು ಅರಗಿಸಿಕೊಳ್ಳಲಾಗಿಲ್ಲ, ನಮ್ಮ ತಂದೆ ರಾಚಯ್ಯ ಅವರು ಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿ ಕಪುತ್ರ್ಪ ಚುಕ್ಕೆ ಇಲ್ಲದೆ ಕಳಂಕರಹಿತ ಮಾಡಿದವರು. ಅವರ ಮಗನಾದ ನಾನು 1ಮತದಿಂದ ಸೋತ ಬಳಿಕ ಹಲವು ಸೋಲುಗಳನ್ನು ಕಂಡಿದ್ದೇನೆ , ನನಗೊಂದು ಅವಕಾಶ ನೀಡುವ ಮೂಲಕ ಮತದಾರರು ನನಗೆ ಮತ ಭಿಕ್ಷೆಯ ಮೂಲಕ ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿದರು.
ಜೀತಗಾರನ ಮಗನ ಆಸ್ತಿ 79ಕೋಟಿ: ಎಆರ್‌ಕೆ ವ್ಯಂಗ್ಯ
2018ರ ಚುನಾವಣೆಯಲ್ಲಿ ಸರಣಿ ಸೋಲುಕಂಡ ಮಹೇಶ್ ಅವರು ನನಗೊಂದು ಅವಕಾಶ ನೀಡಿ, ನಾನು ಜೀತಗಾರನ ಮಗ ಎಂಬಿತ್ಯಾದಿ ಮಾತಿನಿಂದ ಮರಳು ಮಾಡಿ ಶಾಸಕರಾದರು.
ಅಂದು ಜೀತಗಾರನ ಮಗನಾಗಿದ್ದ ಎನ್. ಮಹೇಶ್ ಅವರ ಆಸ್ತಿ 79ಕೋಟಿ, ಇಂದು ಅದು ಎರಡು ಇಲ್ಲವೇ ಮೂರು ಪಟ್ಟಾಗಿದ್ದರೂ ಅಚ್ಚರಿ ಇಲ್ಲ, ಹಣಕ್ಕಾಗಿ ಮತದಾರರು ಮರುಳಾಗದೆ, ಬಿಜೆಪಿ ಅಭ್ಯರ್ಥಿ ಬಳಿ ಹಣ ಪಡೆದು ನನಗೆ ಮತ ನೀಡಿ, ಇಲ್ಲಿರುವವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಮುಂದೆ ಯಾವುದೆ ಬಣವಿಲ್ಲ, ನಾವೆಲ್ಲರೂ ಒಂದೇ ಎಂದರಲ್ಲದೆ ಮಾಜಿ ಶಾಸಕ ಎಸ್. ಬಾಲರಾಜು ಅವರು ನಾಳೆ ಅಭಿಮಾನಿಗಳ ಸಭೆ ಕರೆದಿದ್ದು ನನಗೆ ಬೆಂಬಲ ಸೂಚಿಸುವ ವಿಶ್ವಾಸವಿದೆ ಎಂದರಲ್ಲದೆ ಸೋಮವಾರ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು, ಭಾನುವಾರ ಬೆಳಗ್ಗೆ ಹರಳೆ ಗದ್ದುಗೆಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಪ್ರಾರಂಭಿಸಲಾಗುವುದು ಎಂದರು.
ಮಹೇಶ್ ರಾಜಕಾರಣಿಯಲ್ಲ, ಎಲ್ಲರನ್ನು ಮರಳು ಮಾಡಿ, ಕೈ ಕೊಡುವಾತ, ಮೋಡಿಗಾರ.
- ಎಸ್ ಜಯಣ್ಣ .
ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ
ಶಾಸಕ ಮಹೇಶ್ ರಾಜಕಾರಣಿಯಲ್ಲ, ಆದರೆ, ಆತನೊಬ್ಬ ತಂತ್ರಗಾರ, ಮೋಡಿಗಾರ, ಯಾರನ್ನಾದರೂ ಮರಳುಮಾಡುವ ಶಕ್ತಿ ಆತನಿಗಿದೆ. ಜೊತೆಗೆ ದೊಡ್ಡ ದೊಡ್ಡ ವಿದ್ಯಾವಂತರನ್ನೆ ನಂಬಿ ಮೋಸ ಮಾಡಿರುವವರಿಗೆ ನಾವೆಲ್ಲ ಯಾವ ಲೆಕ್ಕ, ಹಾಗಾಗಿ, ಆತನನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಹೆಚ್ಚು ಮತದಿಂದ ಗೆಲ್ಲಿಸಿ ಎಂದು ಮಾಜಿ ಶಾಸಕ ಎಸ್.ಜಯಣ್ಣ ಹೇಳಿದರು.
ಅವರು ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಶಾಸಕ ಮಹೇಶ್ ಅವರನ್ನು ಕೊಳ್ಳೇಗಾಲದ ಮತದಾರರು ನಂಬಿ ಅತ್ಯಧಿಕ ಮತನೀಡಿ ಗೆಲ್ಲಿಸಿದ್ದರು, ಆದರೆ, ಜನರ ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲತೆ ಸಾಧಿಸಿದರು. ಹಾಗಾಗಿ, ಈ ಚುನಾವಣೆಯಲ್ಲಿ ಅವರನ್ನು ಮತದಾರರು ತಲೆ ಎತ್ತದಂತೆ ಸೋಲಿಸಿ, ಅವರ ರಾಜಕೀಯ ಜೀವನದಿಂದ ಮೇಲೆಳೆದಂತೆ ಕಾರ್ಯಕರ್ತರು ಪಣತೊಡಿ, ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಮಹೇಶ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಹಾಗಾಗಿ, ಈ ಕ್ಷೇತ್ರಕ್ಕೆ ಮತ್ತೊಮ್ಮೆ ಮಹೇಶ್ ಅಗತ್ಯವಿಲ್ಲ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿಯನ್ನು ಬೆಂಬಲಿಸಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿ, ಪ್ರತಿಯೊಬ್ಬರು ಕಾಂಗ್ರೆಸ್ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ಕೆಲಸ ಮಾಡಿ ಎಂದರು.
ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಶಾಸಕ ಮಹೇಶ್ ಕ್ಷೇತ್ರದ ಜನರಿಗೆ ಯಾವ ರೀತಿಯ ಮಾಯಾಲೋಕ ತೋರಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಸರಳ ಹಾಗೂ ಸಜ್ಜನ ಮತ್ತು ಹಿರಿಯರಾದ ಎ.ಆರ್. ಕೃಷ್ಣಮೂರ್ತಿ ಅವರನ್ನು ಈಚುನಾವಣೆಯಲ್ಲಿ ಬೆಂಬಲಿಸಿ, ಆ ಮೂಲಕ ಶಾಸಕರ ನಯವಂಚಕತನಕ್ಕೆ ಮತದಾರರು ತಕ್ಕ ಪಾಠ ಕಲಿಸಿ, ಬಿಜೆಪಿ ಜಾತಿ, ಜಾತಿ ಹಾಗೂ ಧರ್ಮ, ಧರ್ಮಗಳ ನಡುವೆ ವೈರತ್ನ, ಕಿಚ್ಚು ತಂದಿಡುವ ಪಕ್ಷ ಈಚುನಾವಣೆಯಲ್ಲಿ ಆ ಪಕ್ಷವನ್ನು ದೂರವಿಡಿ ಎಂದರು.
ಈಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಉಪ್ಪಾರ ಮುಖಂಡ ಮಾದೇಶ್, ರಾಜಶೇಖರಮೂರ್ತಿ, ಕೇಶವಮೂರ್ತಿ ಮಾತನಾಡಿ, ಶಾಸಕ ಮಹೇಶ್ ಅವರು ಈಚುನಾವಣೆಯಲ್ಲಿ ಸೋತು ಕಾನ್ಸಿ ಫೌಂಡೇಷನ್ ಸೇರಲಿದ್ದಾರೆ, ಮಾಯಾವತಿ ಅವರೆ ಇವರ ಸೋಲಿಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ವಡ್ಡಗೆರೆ ದಾಸ್, ಕೊಪ್ಪಾಳಿನಾಯಕ, ಯೋಗೀಶ್, ಮೋಳೆ ಚಂದ್ರು, ಆಲಹಳ್ಳಿ ತೋಟೇಶ್, ನಂಜೇಗೌಡ, ರೇಖಾ ರಮೇಶ್, ಎ ಪಿ ಶಂಕರ್, ಸುಶೀಲ, ರಮೇಶ್, ಅಣಗಳ್ಳಿ ಬಸವರಾಜು, ಸಿದ್ದಲಿಂಗೇಗೌಡ, ಸಿಗ್ ಬತ್, ಚಿನ್ನಸ್ವಾಮಿ, ಬಸ್ತಿಪುರ ರವಿ , ಸೋಮಶೇಖರ್, ಲಿಂಗರಾಜು ಇದ್ದರು