SSLC , PUC ವಿದ್ಯಾರ್ಥಿಗಳಿಗೆ 10 ಗ್ರಾಂ ಬಂಗಾರದ ಸರವನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರತಿಭೆಗೆ ಮೆಚ್ಚಿ ಪ್ರೋತ್ಸಾಹಿಸಲಾಗಿದೆ.
ಪಾಂಡವಪುರ [ಜ.13]: ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯಕ್ಕಾಗಿ ಪೂರ್ವಿಕರು ಪಟ್ಟಣದಲ್ಲಿ ಬಾಲಕಿಯರ ವಿದ್ಯಾಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವಕಾಲೇಜು ಹಾಗೂ ಪ್ರೌಢಶಾಲೆ ವತಿಯಿಂದ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಹವ್ಯಾಸಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಮ್ಮ ಹಿರಿಯರು ಕಟ್ಟಿಬೆಳೆಸಿದ ವಿದ್ಯಾಸಂಸ್ಥೆಯನ್ನು ಈಗಿನ ಆಡಳಿತ ಮಂಡಳಿಯು ಅಷ್ಟೇ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
undefined
ಶಾಲೆಯಲ್ಲಿ ಈ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆರಂಭಿಸಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದೇವೆ. ಸರಕಾರದಿಂದ ಅನುಮತಿಯನ್ನು ಸಹ ಪಡೆದುಕೊಂಡಿದ್ದೇವೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ತಮ್ಮ ಭವಿಷ್ಯರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ.ಪೂ.ಕಾ.ಉಪನಿರ್ದೇಶಕಿ ಜಿ.ಆರ್ .ಗೀತಾ ಮಾತನಾಡಿ, ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಿಕೊಳ್ಳಬೇಡಿ, ವಿದ್ಯಾಭ್ಯಾಸ ಮುಗಿಸಿ ನಂತರ ಮದುವೆಯಾಗಬೇಕು. ಜತೆಗೆ ವಿದ್ಯಾರ್ಥಿಗಳು ಯಾರದೆ ಬಲಬಂತಕ್ಕೆ ಒಳಗಾಗಬೇಡಿ. ತಮಗೆ ಇಷ್ಟವಿರುವ ಆಸಕ್ತ ಕ್ಷೇತ್ರಗಳು ಹಾಗೂ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಮಂಡ್ಯ ವಿವಿಗೆ ಎಳ್ಳು ನೀರು ಬಿಡ್ತಾ ಸರ್ಕಾರ..? ವಿಶ್ವವಿದ್ಯಾಲಯ ಈಗ ಅಟೋನೋಮಸ್...
ಇದೇ ವೇಳೆ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿನಿ ರಮ್ಯ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ವರಲಕ್ಷ್ಮಿ ಅವರಿಗೆ ಶಾಸಕ ಸಿ.ಎಸ್.ಪುಟ್ಟರಾಜು ತಲಾ 10 ಗ್ರಾಂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಮಂಡ್ಯದ ಶ್ರೀರಂಗನಾಥ ದೇವಸ್ಥಾನ ಹುಂಡಿಯಲ್ಲಿ ಅಮೆರಿಕನ್ ಡಾಲರ್.
ವೇದಿಕೆ ಕಾರ್ಯಕ್ರಮದ ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಪಾಧ್ಯಕ್ಷ ಮರಿದೇವೇಗೌಡ, ಕಾರ್ಯದರ್ಶಿ ಕೆ. ವೈರಮುಡಿಗೌಡ, ನಿರ್ದೇಶಕರಾದ ನಾರಾಯಣಗೌಡ, ಬಿ.ಪುಟ್ಟೇಗೌಡ, ನಟರಾಜು, ರಾಮಕೃಷ್ಣ, ಪುರಸಭೆ ಸದಸ್ಯೆ ಜಯಲಕ್ಷ್ಮಿ, ಮುಖ್ಯಶಿಕ್ಷಕಿ ಮಂಜುಳ, ಪ್ರಾಂಶುಪಾಲ ರಮೇಶ್ ಇದ್ದರು.