ಶಿವಮೊಗ್ಗ : ಮಂಗ​ನ ​ಕಾ​ಯಿ​ಲೆಗೆ ಮಹಿಳೆ ಬಲಿ

By Kannadaprabha News  |  First Published Jan 13, 2020, 8:32 AM IST

ಮಲೆನಾಡಿನಲ್ಲಿ ಕಳೆದ ವರ್ಷ ಮರಣ ಮೃದಂಗ ಭಾರಿಸಿದ್ದ ಮಂಗನ ಕಾಯಿಲೆಗೆ ಈ ವರ್ಷ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ಇದು ಮೊದಲ ಬಲಿಯಾಗಿದೆ.


ಸಾಗರ [ಜ.13]:  ತಾಲೂಕಿನ ಅರಳಗೋಡು ಭಾಗದಲ್ಲಿ ಕಳೆದ ವರ್ಷ ಹೈರಾಣಾಗಿಸಿ ಹಲವರನ್ನು ಬಲಿ ತೆಗೆದುಕೊಂಡಿದ್ದ ಮಂಗನ ಕಾಯಿಲೆ ಈ ವರ್ಷ ಮೊದಲ ಬಲಿ ತೆಗೆದುಕೊಂಡಿದೆ. ಮಂಗನಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಚದರವಳ್ಳಿ ಸಮೀಪದ ಶೀಗೆಮಕ್ಕಿಯ ಹೂವಮ್ಮ (58) ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾ​ರೆ.

ಜ.8ರಂದು ಜ್ವರಬಾಧೆಗೊಳಗಾಗಿ ಕೆಎಫ್‌ಡಿ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯಕೀಯ ಪ್ರಯೋಗಾಲಯ ಗುರುವಾರವಷ್ಟೇ ಕೆಎಫ್‌ಡಿ ಸೋಂಕಿರುವುದನ್ನು ದೃಢಪಡಿಸಿತ್ತು.

Tap to resize

Latest Videos

ಮತ್ತೆ ಕಾಣಿಸಿಕೊಂಡಿದೆ ಮಹಾಮಾರಿ ಮಂಗನ ಕಾಯಿಲೆ : ಎಚ್ಚರ!...

ತಾಲೂ​ಕಿ​ನಲ್ಲಿ ನಾಲ್ಕು ತಿಂಗಳಿಂದ ಇದುವರೆಗೆ 69 ಮಂಗಗಳು ಮೃತಪಟ್ಟಿವೆ. ಆದರೆ ಯಾವುದೇ ಮಂಗದಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿಲ್ಲ. ಹೂವಮ್ಮಗೆ ಇತರ ಆರೋಗ್ಯದ ಸಮಸ್ಯೆಗಳಿದ್ದವು. ಮಂಗನ ಕಾಯಿಲೆ ದೃಢಪಟ್ಟಿತ್ತಲ್ಲದೇ ಅವರು ರೋಗ ನಿರೋಧಕ ಚುಚ್ಚುಮದ್ದು ಪಡೆದುಕೊಂಡಿರಲಿಲ್ಲ ಎಂದು ಸಾಗರ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.

ಹೂವಮ್ಮ ಮತ್ತು ಅವರ ಪತಿ ತಿಮ್ಮಾನಾಯ್ಕ ಹೊರತುಪಡಿಸಿ ಕುಟುಂಬಸ್ಥರೆಲ್ಲರೂ ಚುಚ್ಚುಮದ್ದು ಪಡೆದಿದ್ದು, ಆರೋಗ್ಯವಾಗಿದ್ದಾರೆ. ತಿಮ್ಮಾನಾಯ್ಕ ಅವರಿಗೂ ತುರ್ತಾಗಿ ಚುಚ್ಚುಮದ್ದು ಪಡೆಯಲು ಸೂಚಿಸಿದ್ದೇವೆ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

click me!