ಕೊಪ್ಪಳದ ಜಾತ್ರಾಮಹೋತ್ಸವದ ವೇಳೆ ‘ಮೋದಿ ಮೋದಿ’, ‘ಹೌದು ಹುಲಿಯಾ’ ಎಂದು ಕೂಗಿದ ಜನ| ಸಿದ್ದರಾಮಯ್ಯ ಮಾತನಾಡುವ ವೇಳೆಯಲ್ಲಿಯೂ ಪುನರಾವರ್ತನೆ| ಸಿದ್ದರಾಮಯ್ಯ ಬೆಂಬಲಿಗರು ಕಂಬಳಿ ತೂರಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶನ|
ಕೊಪ್ಪಳ(ಜ. 13): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತ್ರಾಮಹೋತ್ಸವದ ವೇದಿಕೆಗೆ ಆಗಮಿಸುತ್ತಿದ್ದಂತೆ ಪೈಪೋಟಿಯಲ್ಲಿ ‘ಮೋದಿ ಮೋದಿ’ ಎಂದು ಅನೇಕರು ಕೂಗಿದರೆ ಇನ್ನು ಕೆಲವರು ‘ಹೌದು ಹುಲಿಯಾ’ ಎಂದು ಸಹ ಕೂಗಿದ ಘಟನೆ ಭಾನುವಾರ ಕೊಪ್ಪಳದಲ್ಲಿ ನಡೆದಿದೆ.
ಜಾತ್ರೆಯಲ್ಲಿ ನೆರೆದಿದ್ದ ಜನರು ಕೆಲವೊಬ್ಬರು ಮೋದಿ ಮೋದಿ ಎಂದು ಕೂಗಿದರೆ, ಇನ್ನು ಕೆಲವರು ಹೌದು ಹುಲಿಯಾ ಎಂದು ಕೂಗಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುವಂತೆ ವೇದಿಕೆ ಮುಂಭಾಗದಲ್ಲಿ ಕೂಗಾಡಲು ಶುರು ಮಾಡಿದ್ದರಿಂದ ನಿರೂಪಕರು ಪದೇ ಪದೆ ವಿನಂತಿದರು. ದಯಮಾಡಿ ಯಾರೂ ಸಹ ಈ ರೀತಿ ವರ್ತಿಸಬೇಡಿ. ಇದು ಗವಿಸಿದ್ಧೇಶ್ವರನ ಜಾತ್ರೆಯಾಗಿದ್ದು, ನಮ್ಮ ಸಂಸ್ಕೃತಿಯೂ ಅಲ್ಲ ಎಂದು ಮನವಿ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಿದ್ದರಾಮಯ್ಯ ಮಾತನಾಡುವ ವೇಳೆಯಲ್ಲಿಯೂ ಇದು ಪುನರಾವರ್ತನೆಯಾಯಿತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಸಿದ್ದರಾಮಯ್ಯ ಮಾತನಾಡಿ ಮಾತು ಮುಗಿಸಿದರು. ಸಿದ್ದರಾಮಯ್ಯ ಅವರ ಬೆಂಬಲಿಗ ಕೆಲವರು ಕಂಬಳಿ ತೂರಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶನ ಮಾಡಿದರು. ಇದಾದ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇಕ್ಬಾಲ್ ಅನ್ಸಾರಿ ಭಾಷಣದ ಕೊನೆಯಲ್ಲಿ ಹೌದು ಹುಲಿಯಾ ಎಂದರು. ಆದರೆ, ಇವರು ಯಾಕೆ ಹೀಗೆ ಹೇಳಿದರು ಎನ್ನುವುದೇ ತಿಳಿಯಲಿಲ್ಲ.