ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್‌: ಶಾಸಕ ನಾಗೇಂದ್ರ ಮಾವನ ವಿರುದ್ಧ ತಿರುಗಿಬಿದ್ದ ಪಾಲಿಕೆ ಸದಸ್ಯ

By Girish Goudar  |  First Published May 12, 2022, 8:42 AM IST

*  ಅಧಿಕಾರಕ್ಕೆ ಕೋಟಿ ಕೋಟಿ ಹಣ ಚೆಲ್ಲಿ ಇದೀಗ ‌ಕಂಗಾಲು
*  ಇನ್ನೂ ಉತ್ತರಿಸದ ಶಾಸಕ ನಾಗೇಂದ್ರ
*  ಎರಿಸ್ವಾಮಿ ವಿರುದ್ಧ ದೂರು


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ 

ಬಳ್ಳಾರಿ(ಮೇ.12):  ಗಣಿಗಾರಿಕೆ ಅಕ್ರಮದ ವೇಳೆ ಮೋಸ, ವಂಚನೆ, ಅಪರೇಷನ್ ಕಮಲ ಹೀಗೆ ಹತ್ತು ಹಲವು ಅಕ್ರಮ, ಆರೋಪಿಗಳನ್ನು ಇಲ್ಲಿಯ ನಾಯಕರು ಹೊತ್ತು ಕೊಂಡರು. ಹೀಗಾಗಿ ಬಳ್ಳಾರಿ(Ballari) ಅಂದ್ರೇ ಅದೊಂದು ಅಕ್ರಮದ ತವರೂರು ಎಂದೇ ಕುಖ್ಯಾತಿ ಪಡೆದಿತ್ತು. ಗಣಿಗಾರಿಕೆ(Mining) ಸ್ಥಬ್ದವಾದ ಬಳಿಕ ಒಂದಷ್ಟು ಅಕ್ರಮ ಅನಾಚಾರಕ್ಕೆ ಬ್ರೇಕ್ ಬಿದ್ದಿತ್ತು. ಆದ್ರೇ ಇದೀಗ ಮೇಯರ್ ಸ್ಥಾನ ಕೊಡಿಸುತ್ತೇನೆಂದು ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ಏಂಬುವರು ಕಾರ್ಪೋರೇಟರ್ ಒಬ್ಬರ ಬಳಿ‌ ಮೂರುವರೆ ಕೋಟಿ ಹಣ ಪಡೆದಿದ್ರಂತೆ. ಈ ಕುರಿತು ಇಷ್ಟು ದಿನ ತೆರೆಮರೆಯಲ್ಲಿದ್ದ ಡೀಲ್ ವಿಚಾರ ಇದೀಗ ಬಹಿರಂಗಗೊಂಡಿದೆ. ಪೂರ್ಣ ಬಹುಮತ ಇದ್ರೂ ಅಧಿಕಾರ ಪಡೆಯುವಲ್ಲಿ ಹೆಣಗಾಡಿದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಹಣದ ವ್ಯವಹಾರ ಬಹಿರಂಗ ಗೊಂಡಿರೋದು ಮುಜುಗರಕ್ಕೀಡು ಮಾಡಿದೆ. 

Latest Videos

undefined

"

ಯಾರು ಯಾರಿಗೆ ಕೊಟ್ಟರು ಹಣ?

ಹೌದು, ಈ ಹಿಂದೆ ಮೇಯರ್(Mayor) ಸಾಮಾನ್ಯ ಸ್ಥಾನಕ್ಕೆ ಮೀಸಲು ಇತ್ತು. ಹೀಗಾಗಿ ಗೆದ್ದಿರೋ ಎಲ್ಲರೂ ಕೂಡ ಮೇಯರ್ ಸ್ಥಾನಕ್ಕೆ ಆಸೆ ಪಟ್ಟಿದ್ರು. ಹೇಗಾದರೂ ಮಾಡಿ ಬಳ್ಳಾರಿ ಮೇಯರ್ ಪಟ್ಟಕ್ಕೆ ಗಿಟ್ಟಿಸಿಕೊಳ್ಳಲೇಬೇಕೆಂದು ಬಹುತೇಕ ಕಾರ್ಪೋರೇಟರ್‌ಗಳು ಹಿರಿಯ ಕಾಂಗ್ರೆಸ್(Congress) ನಾಯಕರು ದಂಬಾಲು ಬಿದ್ರು. ಈ ಮಧ್ಯೆ 31 ನೇ ವಾರ್ಡಿನ ಕಾರ್ಪೋರೇಟರ್ ಆಸೀಫ್ ಮೂರುವರೆ ಕೋಟಿ ಕೊಟ್ಟ ಕೈ ಸುಟ್ಟುಕೊಂಡಿದ್ದಾರೆ. ಅದು ಅವರು ಹಣ ಕೊಟ್ಟಿರೋದು ಬೇರೆ ಯಾರ ಕೈಯಲ್ಲಿ ಅಲ್ಲ ಬದಲಾಗಿ  ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ನಾಗೇಂದ್ರ(Nagendra) ಮಾವ  ಎರ್ರಿಸ್ವಾಮಿ(Erriswamy) ಎನ್ನುವುದು ವಿಶೇಷವಾಗಿದೆ. ಇನ್ನೂ ಶಾಸಕ ನಾಗೇಂದ್ರನ ಎಲ್ಲ ಕೆಲಸಗಳನ್ನೂ ನೊಡಿಕೊಳ್ಳುತ್ತಿದ್ದ ಎರ್ರಿಸ್ವಾಮಿಯನ್ನು ನಂಬಿದ ಅಸೀಫ್ ಹಣ ಕೊಟ್ಟು ಕೈ ಸುಟ್ಟುಕೊಂಡಿದ್ದಾನೆ. 

ಕುಡುತಿನಿ ಪಪಂ ಅಧ್ಯಕ್ಷ ರಾಜಶೇಖರ ಸೇರಿ ಮೂವರ ಸದಸ್ಯರ ಸದಸ್ಯತ್ವ ರದ್ದು!

ಮೀಸಲಾತಿ ಬದಲಾಗಿರೋದೇ ಡೀಲ್ ಫೇಲ್ ಆಗಲು ಕಾರಣವಾಯ್ತೇ

ಹೌದು, ಚುನಾವಣೆಗೂ‌ ಮುನ್ನ ಸಾಮಾನ್ಯ (ಮೀಸಲಾತಿ)  ಸ್ಥಾನಕ್ಕೆ ಒಲಿದಿದ್ದ ಮೇಯರ್ ಸ್ಥಾನ ನಂತರ ಸಾಮಾನ್ಯ ಮಹಿಳೆ (ಮೀಸಲು) ಎಂದು ಬದಲಾವಣೆಯಾಗಿತ್ತು ಈ ಕುರಿತು ಕಾರ್ಪೋರೇಟರ್ ನಂದೀಶ್  ಎನ್ನುವವರು ಕೋರ್ಟ್ ಗೆ ಹೋದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅಳೆದು ತೂಗಿ ಗಲಾಟೆ ಮಾಡಿಕೊಂಡು ಪೂರ್ಣ ಬಹುಮತ ಇದ್ರೂ ರೆಸಾರ್ಟ್ ಹೋಗೋ ಮೂಲಕ ಕಳೆದ ಎರಡು ತಿಂಗಳ ಹಿಂದೆ ರಾಜೇಶ್ವರಿ ಸುಬ್ಬರಾಯಡು ಮೇಯರ್ ಆಗಿದ್ರು. ಆದ್ರೇ ಅಧಿಕಾರ ಪಡೆದು ಎರಡು ತಿಂಗಳೊಳಗೆ ಇಷ್ಟೇಲ್ಲ ರಾದ್ದಾಂತ ಅಗಿರೋದು ಕಾಂಗ್ರೆಸ್ ಗೆ ಸಾಕಷ್ಟು ಮುಜುಗರಕ್ಕಿಡು ಮಾಡಿದೆ.

ಪೂರ್ಣ ಬಹುಮತ ಇದ್ರೂ ನಿಲ್ಲದ ಗೊಂದಲ

ಕಾಂಗ್ರೆಸ್ ಒಡೆದ ಮನೆ ಅನ್ನೋದು ಬಹುತೇಕ ಜಿಲ್ಲೆಯಲ್ಲಿ ಸಾಭೀತಾಗಿದೆ. ಅದರಂತೆ 39 ಪಾಲಿಕೆ(Ballari City Corporation) ಸದಸ್ಯರ ಪೈಕಿ 21 ಕಾಂಗ್ರೆಸ್ 13 ಬಿಜೆಪಿ ಮತ್ತು 5 ಪಕ್ಷೇತರರು ಗೆದ್ದಿದ್ರು. ಪೂರ್ಣ ಬಹುಮತದ ಜೊತೆಗೆ ಪಕ್ಷೇತರರು ಕಾಂಗ್ರೆಸ್ ಜೊತೆಗೆ ಹೋಗಿದ್ರಿಂದ 26 ಸ್ಥಾನದೊಂದಿಗೆ ನಿರಾಯಾಸವಾಗಿ ಅಧಿಕಾರ ಮಾಡಬಹುದಿತ್ತು ಆದ್ರೇ ನಿತ್ಯ ಒಂದಲ್ಲೊಂದು ಗೊಂದಲ ಮಾಡಿಕೊಳ್ಳುವ ಮೂಲಕ ಬಳ್ಳಾರಿ ಪಾಲಿಕೆ ಸದಸ್ಯರು ನಗೆಪಾಟಲಿಗಿಡಾಗಿದ್ದಾರೆ.

ಬಳ್ಳಾರಿ: ಬಿರುಗಾಳಿಗೆ ನೆಲಕಚ್ಚಿದ ಪಪ್ಪಾಯಿ ಬೆಳೆ: ಸಂಕಷ್ಟದಲ್ಲಿ ರೈತ..!

ಎರಿಸ್ವಾಮಿ ವಿರುದ್ಧ ದೂರು

ಹಣದ ವ್ಯವಹಾರ ಇಷ್ಟು ದಿನ ತೆರೆಮರೆಯಲ್ಲಿ‌ ಇತ್ತು. ಆದ್ರೇ ಇದೀಗ ‌ಮೇಯರ್ ಸ್ಥಾನ ಸಿಗಲಿಲ್ಲ ಮತ್ತು ಕೊಟ್ಟ ಹಣ ವಾಪಸ್ ನೀಡದ ಕಾರಣ  ಕಾಂಗ್ರೆಸ್ ಮುಖಂಡನ ವಿರುದ್ದ ಎರಿಸ್ವಾಮಿ ವಿರುದ್ಧ ಪಾಲಿಕೆ ಸದಸ್ಯ ಅಸೀಫ್ ದೂರು  ಕೌಲ್ ಬಜಾರ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಇನ್ನೂ ಉತ್ತರಿಸದ ಶಾಸಕ ನಾಗೇಂದ್ರ

ಇನ್ನೂ ಇದೀಗ ದೂರು ಕೊಟ್ಟಿರೋ ಅಸೀಫ್ ನಾಗೇಂದ್ರ ಅತ್ತಾಪ್ತರಲ್ಲಿ ಒಬ್ಬರು ಮತ್ತು ಹಣ ಪಡೆದ ಎರಿಸ್ವಾಮಿ ನಾಗೇಂದ್ರ ಮಾವ ಜೊತೆಗೆ ಅವರ ವ್ಯವಹಾರವನ್ನು ನೋಡಿಕೊಳ್ಳುತ್ತಿರುವವರು. ಹೀಗಾಗಿ ಈ ಅಂತರಿಕ ಕಚ್ಚಾಟದ ಬಗ್ಗೆ ಶಾಸಕ ನಾಗೇಂದ್ರ ಯಾವ ರೀತಿಯ ಪ್ರತಿಕ್ರಿಯೆ ಕೊಡಬೇಕೋ ಗೊತ್ತಾಗ್ತಿಲ್ಲ ಹೀಗಾಗಿ ಸದ್ಯ ಮಾಧ್ಯಮದ ಜೊತೆಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೇ ನಾಗೇಂದ್ರ ಆಪ್ತರು ಮಾತ್ರ ಇದೆಲ್ಲ ಬಿಜೆಪಿ ಕೈವಾಡ. ಶ್ರೀರಾಮುಲು‌ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಬರೋ ಹಿನ್ನಲೆ ಕಾಂಗ್ರೆಸ್ ನ್ನು ಒಡೆಯೋ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. 
 

click me!