* ತೇಜೋವಧೆಗಾಗಿ ಮಹಾ‘ನಾಯಕ’ರ ಹುನ್ನಾರ: ರಾಜೂಗೌಡ
* ಆಡಿಯೋ ಬಿಡುವ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ
* ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶಾಸಕ
ಯಾದಗಿರಿ(ಮೇ.12): ಬೆಂಗಳೂರು(Bengaluru) ಮೂಲದ ಮಹಿಳೆಯೊಬ್ಬಳು ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರನ್ನು ವಂಚಿಸುತ್ತಿರುವುದಲ್ಲದೆ, ವ್ಯಕ್ತಿಯೊಬ್ಬರ ಜೊತೆ ಮೊಬೈಲ್ ಮಾತುಕತೆ ಸುರಪುರ ಶಾಸಕ ರಾಜೂಗೌಡರ(Rajugouda) ಹೆಸರು ಪ್ರಸ್ತಾಪಿಸಿದ ಪ್ರಕರಣವೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹೆಸರು ದುರುಪಯೋಗಪಡಿಸಿಕೊಂಡವರ ತನಿಖೆ ನಡೆಸುವಂತೆ ಶಾಸಕ ರಾಜೂಗೌಡ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
undefined
ಬೆಂಗಳೂರು ಮೂಲದ ರೇಖಾ(Rekha) ಎಂದು ಹೇಳಲಾಗಿರುವ ಮಹಿಳೆಯೊಬ್ಬಳು(Woman) ವ್ಯಕ್ತಿಯೊಬ್ಬರ ಜೊತೆ ಸಂಭಾಷಣೆ ನಡೆಸಿದ ಆಡಿಯೋ ವೈರಲ್(Audio Viral) ಆಗಿತ್ತು. ಕಲ್ಯಾಣ ಕರ್ನಾಟಕದ(Kalyana Karnataka) ಭಾಗದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕೆಲವರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಈ ಮಹಿಳೆ ಲಕ್ಷಾಂತರ ರು, ಹಣ ಪಡೆದು ವಂಚಿಸುತ್ತಿದ್ದಳೆನ್ನಲಾಗಿದೆ. ಫೋನ್ ಸಂಭಾಷಣೆ ವೇಳೆ ಶಾಸಕ ರಾಜೂಗೌಡರ ಗೆಳೆಯ ತನ್ನ ಗೆಳೆಯನಾಗಿದ್ದು, ಬೇಕಿದ್ದರೆ ಫೋನ್ ಮಾಡಿ ಅವರಿಂದ ಮಾತನಾಡಿಸುವೆ ಎಂದು ಆಕೆ ಹೇಳುತ್ತಾಳೆ.
PSI Recruitment Scam: ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?
ರಾಜೂಗೌಡ ದೂರು:
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ(Social Media) ಚರ್ಚೆಗೆ ಗ್ರಾಸವಾಗುತ್ತಿದ್ದು ತಮ್ಮ ತೇಜೋವಧೆಗಾಗಿ ಇದು ಪಕ್ಷದಲ್ಲಿನ ಕೆಲವು ಮಹಾ‘ನಾಯಕ’ರು ಮಾಡಿಸಿದ ಹುನ್ನಾರವಿದು ಎಂದು ಆರೋಪಿಸಿರುವ ಶಾಸಕ ರಾಜೂಗೌಡ, ಸುರಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ರೇಖಾ ಎನ್ನುವ ಮಹಿಳೆ ಯಾರು? ಮಾತನಾಡಿದ ಮತ್ತೋರ್ವ ವ್ಯಕ್ತಿ ಯಾರು? ಯಾವ ನೌಕರಿ? ತಮ್ಮ ಹೆಸರು ಏಕೆ ಬಳಕೆಯಾಯ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದಿರುವ ರಾಜೂಗೌಡ, ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ.
ಜೊತಗೆ ಸಚಿವ ಸಂಪುಟ ಪುನಾರಚನೆಯ(Cabinet Expansion) ವಿಚಾರಗಳ ಈ ಸಂದರ್ಭದಲ್ಲಿ, ಇಂತಹ ಆಡಿಯೋ ಬಿಡುವ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಆ ಮಹಾನಾಯಕನ ಹೆಸರನ್ನು ತಾವು ನಂತರದಲ್ಲಿ ಬಹಿರಂಗ ಪಡಿಸುವುದಾಗಿ ಅವರು ತಿಳಿಸಿದ್ದಾರೆ.