ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರದ ಹಣ ಲಪಟಾಯಿಸಿದ ಮಾಜಿ ಶಾಸಕ ಕೆ.ಶಿವಮೂರ್ತಿ ನಾಯ್ಕ ಮತ್ತು ಪತ್ನಿ ಗೀತಾ ಶಿವಮೂರ್ತಿ ನಾಯ್ಕ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಚಿತ್ರದುರ್ಗದ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನದ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಾವಣಗೆರೆ(ಫೆ.06): ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರದ ಹಣ ಲಪಟಾಯಿಸಿದ ಮಾಜಿ ಶಾಸಕ ಕೆ.ಶಿವಮೂರ್ತಿ ನಾಯ್ಕ ಮತ್ತು ಪತ್ನಿ ಗೀತಾ ಶಿವಮೂರ್ತಿ ನಾಯ್ಕ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಚಿತ್ರದುರ್ಗದ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನದ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತಾಲೂಕಿನ ಆವರಗೆರೆ ಗ್ರಾಮದ ಸರ್ವೇ ನಂ.57/2ರಲ್ಲಿ ಗೀತಾ ಶಿವಮೂರ್ತಿ ಅವರ 28 ಗುಂಟೆ ಖುಷ್ಕಿ ಜಮೀನನ್ನು ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಲು ದಾಖಲೆಗಳನ್ನು ಆಹ್ವಾನಿಸಲಾಗಿತ್ತು. ಸರ್ಕಾರಿ ನೌಕರರಾದ ಗೀತಾ ಶಿವಮೂರ್ತಿ ತಾವು ರೈತರೆಂದು ಸುಳ್ಳು ಹೇಳಿ, ಜಮೀನು ಅಲಿನೇಷನ್ ಆಗದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ, ಅದನ್ನೇ ನೈಜ ದಾಖಲೆಯೆಂದು ನಂಬಿಸಿ, 46 ಲಕ್ಷ ರು. ಪರಿಹಾರ ಪಡೆದು, ವಂಚಿಸಿದ್ದಾರೆ. ಖುಷ್ಕಿ ಜಮೀನಿಗೆ ನಿಗದಿಪಡಿಸಿದ್ದ 3 ಲಕ್ಷ ರು. ಪರಿಹಾರ ಮೊತ್ತಕ್ಕೆ ತೃಪ್ತರಾಗದೆ ಮಾಜಿ ಸಚಿವ ಕೆ.ಶಿವಮೂರ್ತಿ ನಾಯ್ಕ ತಮ್ಮ ರಾಜಕೀಯ ಪ್ರಭಾವ ಬಳಸಿ, ಆವರೆಗರೆ ಗ್ರಾಪಂನಲ್ಲಿ ಖಾತೆ ಮಾಡಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮಾತನಾಡುತ್ತ ಕುಳಿತಿದ್ದ ವೃದ್ಧರ ಮೇಲೆ ಹರಿದ ಕ್ರೇನ್...
ಅಲ್ಲದೆ, ಮಹಾನಗರ ಪಾಲಿಕೆಯಿಂದ ನಿವೇಶನಗಳೆಂದು ಡೋರ್ ನಂಬರ್ ಪಡೆದು, ಖುಷ್ಕಿ ಜಮೀನಿನ ಬದಲಾಗಿ ನಿವೇಶನಗಳ ದರದಂತೆ ಪರಿಹಾರವನ್ನು ಪಡೆದಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಹೆಚ್ಚುವರಿ ಪರಿಹಾರದ ಹಣವನ್ನೂ ಪಡೆದಿದ್ದಾರೆ. ಈ ಬಗ್ಗೆ ನವದೆಹಲಿಯ ರಾಷ್ಟ್ರೀಯ ಜಾಗೃತ ದಳ ವಿಭಾಗದ ಅಧಿಕಾರಿಗಳು ತನಿಖೆ ನಡೆಸಿ, 95,37,278 ರು.ಗಳನ್ನು ಮರಳಿ ಪಡೆಯಲು ತಿಳಿವಳಿಕೆ ಪತ್ರ ನೀಡಿ, ಹಣ ಮರು ಪಾವತಿಗೆ ಗಡುವು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಚಾಲಕರ ಹೊಡೆದಾಟ..!
ಮಾಜಿ ಶಾಸಕ ಶಿವಮೂರ್ತಿ ನಾಯ್ಕ ತಮ್ಮ ರಾಜಕೀಯ ಪ್ರಭಾವದಿಂದ ಮತ್ತು ಪರಿಶಿಷ್ಟಜಾತಿ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಹಾಗಾಗಿ, ಕೂಡಲೇ ಶಿವಮೂರ್ತಿ ನಾಯ್ಕ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯ ಅಧೀಕ್ಷಕರಾಗಿರುವ ಗೀತಾ ಶಿವಮೂರ್ತಿ ನಾಯ್ಕ ವಿರುದ್ಧ ಸರ್ಕಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ, ವಂಚಿಸಿರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಶಿವಮೂರ್ತಿ ನಾಯ್ಕ, ಗೀತಾ ಶಿವಮೂರ್ತಿ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕ್ರಿಮಿನಲ್ ಕೇಸ್ ದಾಖಲಿಸದಿದ್ದರೆ, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಪ್ರಾಧಿಕಾರದ ಕಚೇರಿ ಎದುರು ಕ್ರಿಮಿನಲ್ ಕೇಸ್ ದಾಖಲಾಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಂಗಳೂರು: ಪುಟ್ಟ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ...
ಸಮಿತಿ ಮುಖಂಡರಾದ ಜಿ.ದೇವದಾಸ್, ಪರಮೇಶ್ವರ ನಾಯ್ಕ, ಉಮಾ ಮಹೇಶ್ವರ ನಾಯ್ಕ, ಪ್ರವೀಣಕುಮಾರ ನಾಯ್ಕ, ಶಿವಕುಮಾರ, ಜಿ.ಸಿ.ಓಂಕಾರ ನಾಯ್ಕ, ದಿನೇಶಕುಮಾರ, ಚಂದ್ರನಾಯ್ಕ, ಪಾಪ ನಾಯ್ಕ, ಲಿಂಗರಾಜ, ಪೀರಾರಯ ನಾಯ್ಕ ಇದ್ದರು.