ಚುನಾವಣಾ ಕಣದಲ್ಲಿದ್ದ JDS ಅಭ್ಯರ್ಥಿ ಬಿಜೆಪಿಗೆ

By Kannadaprabha News  |  First Published Feb 6, 2020, 11:04 AM IST

ಚುನಾವಣಾ ಕಣದಲ್ಲಿದ್ದ ಪಕ್ಷದ ಅಭ್ಯರ್ಥಿಗೆ ಅಮಿಷವೊಡ್ಡಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿರುವ ಸಂಸದರ ನಡೆ ಖಂಡನೀಯ ಎಂದು ಜೆಡಿಎಸ್ ಮಾಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ ಅಪಾದಿಸಿದ್ದಾರೆ.


ಕೋಲಾರ(ಫೆ.06): ಚುನಾವಣಾ ಕಣದಲ್ಲಿದ್ದ ಪಕ್ಷದ ಅಭ್ಯರ್ಥಿಗೆ ಅಮಿಷವೊಡ್ಡಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿರುವ ಸಂಸದರ ನಡೆ ಖಂಡನೀಯ ಎಂದು ಜೆಡಿಎಸ್ ಮಾಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ ಅಪಾದಿಸಿದ್ದಾರೆ.

ಸಂಸದರಿಂದ ಆಮಿಷ ಅವರು ಈ ಸಂಬಂಧ ಪಟ್ಟಣದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಲಕ್ಕೂರು ಕ್ಷೇತ್ರದ ತಾಪಂ ಚುನಾವಣೆಗಾಗಿ ನಮ್ಮ ಪಕ್ಷದಿಂದ ಹಿರಣಯ್ಯ ಅವರಿಗೆ ಬಿ ಫಾರಂ ನೀಡಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ ಕೋಲಾರ ಲೋಕಸಭಾ ಸದಸ್ಯರಾದ ಮುನಿಸ್ವಾಮಿ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಭ್ಯರ್ಥಿ ಹಿರಣಯ್ಯ ನವರಿಗೆ ಇನ್ನಿಲ್ಲದ ಅಮಿಷಗಳನ್ನು ವೊಡ್ಡಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದರೆ ಎಂದು ಖಂಡಿಸಿದ್ದಾರೆ.

Tap to resize

Latest Videos

ಕಾಂಗ್ರೆಸ್‌ನಲ್ಲಿ 50ಕ್ಕೂ ಅಧಿಕ ಮಂದಿ ಸಾಮೂಹಿಕ ರಾಜೀನಾಮೆ

ಬಿಜೆಪಿ ವಿರುದ್ಧ ಮತ ಚಲಾವಣೆ: ಚುನಾವಣೆಯಲ್ಲಿ ಜೆಡಿಎಸ್‌ಗೆ ಪೂರಕ ವಾತಾವರಣ ಇರುವುದನ್ನು ಗಮನಿಸಿದ ಸಂಸದರು ಕುತಂತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಇವರ ಕುತಂತ್ರ ರಾಜಕಾರಣಕ್ಕೆ ತಕ್ಕ ಉತ್ತರ ಈ ಚುನಾವಣೆಯಲ್ಲಿ ನೀಡಲು ಕ್ಷೇತ್ರದ ಜನತೆ ಸಿದ್ಧರಾಗಿದ್ದಾರೆ. ಸ್ವಾಭಿಮಾನಿ ಜೆಡಿಎಸ್ ಬೆಂಬಲಿಗರು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದರು. ತಾಲೂಕು ಪಂಚಾಯತಿ ಸದಸ್ಯ ಮುನಿರಾಜು ಮಾತನಾಡಿದರು. ಪುರಸಭೆ ಸದಸ್ಯ ಪರಮೇಶ್, ತಿಮ್ಮೇಗೌಡ, ಗೋಪಾಲಪ್ಪ ಇದ್ದರು.

click me!