Ramanagara: ಅಪರಾಧ ಪತ್ತೆ ನಿಷ್ಣಾತ ರಾಮ್‌ ಶ್ವಾನ ಇನ್ನಿಲ್ಲ: ಪೊಲೀಸ್ ಘಟಕದಲ್ಲಿ ನೀರವ ಮೌನ

By Sathish Kumar KH  |  First Published Jan 4, 2023, 2:47 PM IST

ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಈ ಘಟನೆಯಿಂದ ಜಿಲ್ಲಾ ಪೊಲೀಸ್‌ ಘಟಕದಲ್ಲಿ ನೀರವ ಮೌನ ಮನೆ ಮಾಡಿದೆ.


ರಾಮನಗರ (ಜ.04): ಇಷ್ಟುದಿನ ಮನುಷ್ಯರಿಗೆ ಕಾಡುತ್ತಿದ್ದ ಹೃದಯಾಘಾತದ ಸಾವಿನ ಕುಣಿಕೆ ಈಗ ಪ್ರಾಣಿಗಳಿಗೂ ಆವರಿಸಿದೆ. ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಈ ಘಟನೆಯಿಂದ ಜಿಲ್ಲಾ ಪೊಲೀಸ್‌ ಘಟಕದಲ್ಲಿ ನೀರವ ಮೌನ ಮನೆ ಮಾಡಿದೆ.

ರಾಮನಗರ ಜಿಲ್ಲೆಯ ಪೊಲೀಸ್‌ ಘಟಕದಲ್ಲಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾ ಶ್ವಾನ ರಾಮ್‌ 250 ಕ್ಕೂ ಹೆಚ್ವು ಪ್ರಕರಣಗಳಲ್ಲಿ ಭಾಗಿಯಾಗಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿರತವಾಗಿತ್ತು. ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು. ಇದರಿಂದಾಗಿಯೇ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ಎಲ್ಲರ ಸ್ನೇಹವನ್ನು ಬಯಸದಿದ್ದರೂ, ಒಮ್ಮೆ ಪೊಲೀಸರನ್ನು ಹಚ್ಚಿಕೊಂಡರೆ ಅವರಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿತ್ತು. ಆದರೆ, ಇಂದು ರಾಮ್‌ ಶ್ವಾನ ಹೃದಯಾಘಾತಕ್ಕೆ ಒಳಗಾಗಿ ದಿಢೀರನೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 

Tap to resize

Latest Videos

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ: ಅಪರಾಧ ಪತ್ತೆ ದಳದ ರಾಮ್‌ ಶ್ವಾನವನ್ನು ಜಿಲ್ಲಾ ಪೊಲೀಸ್‌ ಘಟಕದಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ರಾಮ್ ಶ್ವಾನ ನಿಧನಕ್ಕೆ ರಾಮನಗರ ಜಿಲ್ಲಾ ಪೊಲೀಸರ ಸಂತಾಪ ಸೂಚಿಸಿದ್ದಾರೆ. ಇನ್ನು ರಾಜ್ಯ ರಾಜಕಾರಣದಲ್ಲಿ ನಾಯಿಮರಿ ಎಂಬ ಹೇಳಿಕೆ ಮುನ್ನೆಲೆಗೆ ಬಂದಿದ್ದು, ಪರ-ವಿರೋಧ ವ್ಯಕ್ತವಾಗುತ್ತಿದೆ. ಹೀಗಿರುವಾಗ, ಅಪರಾಧ ಪತ್ತೆ ಮಾಡುತ್ತಿದ್ದ ಪ್ರೀತಿಯ ಶ್ವಾನ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದು ಜಿಲ್ಲಾ ಪೊಲೀಸರಲ್ಲಿ ಹೆಚ್ಚು ದುಃಖವನ್ನು ಉಂಟುಮಾಡಿದೆ.

click me!