ಉಪಚುನಾವಣೆ ನಡೆದು ವರ್ಷ ಕಳೆಯಿತು; ಪಪಂ ಮೀಸಲಾತಿ ಇನ್ನೂ ನಿರ್ಧಾರವಾಗಿಲ್ಲ!

By Kannadaprabha News  |  First Published Jan 4, 2023, 1:28 PM IST

ಇಲ್ಲಿನ ಪಪಂ ಎರಡನೇ ಅವಧಿಯ ಚುನಾವಣೆ ಮುಗಿದು ವರ್ಷ ಗತಿಸಿದ್ದರೂ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.


 ಮರಿಯಮ್ಮನಹಳ್ಳಿ (ಜ.4) : ಇಲ್ಲಿನ ಪಪಂ ಎರಡನೇ ಅವಧಿಯ ಚುನಾವಣೆ ಮುಗಿದು ವರ್ಷ ಗತಿಸಿದ್ದರೂ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸದಸ್ಯರಾಗಿ ವರ್ಷ ಕಳೆದರೂ ಅಧಿಕಾರ ಇನ್ನೂ ಕನ್ನಡಿಯೊಳಗಿನ ಗಂಟಾಗಿದೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಬಲ ಆಕಾಂಕ್ಷಿಗಳು ಮೀಸಲಾತಿಯನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಪಂನ 18 ವಾರ್ಡ್‌ಗಳಿಗೆ ಆಯ್ಕೆಯಾದ ಸದಸ್ಯರು ಅಧಿಕಾರ ಸ್ವೀಕರಿಸದೇ ನಾಮಕೆ ವಾಸ್ತೆ ಸದಸ್ಯರಾದ್ದಾರೆ.

ವಾರ್ಡ್‌ನ ಮತದಾರರು ಪಪಂ ಸೌಲಭ್ಯಕ್ಕಾಗಿ ಸದಸ್ಯರಲ್ಲಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ನಮೂನೆ-3ರ ಸಮಸ್ಯೆ ಗಂಭೀರವಾಗಿದೆ. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ. ಪಪಂ ಕಚೇರಿಯಲ್ಲಿ ಸಾಮಾನ್ಯ ಸಭೆಗಳು ನಡೆಯದೆ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳೆಲ್ಲ ನನೆಗುದಿಗೆ ಬಿದ್ದಿವೆ.

Latest Videos

undefined

ಸಾಮಾನ್ಯ ಸಭೆಗಳು ನಡೆಯದಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ಸಂಬಂಧಿ​ಸಿದಂತೆ ಮಹತ್ವದ ನಿರ್ಣಯ ಕೈಗೊಳ್ಳುವುದು, ಹಣಕಾಸಿನ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ.

ಬಿಜೆಪಿ ಸರ್ಕಾರಕ್ಕೆ ಜನ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇದ್ದರೆ ತಕ್ಷಣವೇ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ,ಚುನಾವಣೆ ನಡೆಸಲಿ.

Ballari News: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸನ್ನದ್ಧ

click me!