kannada sahitya sammelana: ಹ್ಯಾಂಡಲ್‌ ಇಲ್ಲದ ಬೈಕ್‌ಲ್ಲಿ ನುಡಿಜಾತ್ರೆಗೆ ಹೊರಟ ಸಾಹಸಿ

By Kannadaprabha News  |  First Published Jan 4, 2023, 12:54 PM IST
  • ಹ್ಯಾಂಡಲ್‌ ಇಲ್ಲದ ಬೈಕ್‌ಲ್ಲಿ ನುಡಿಜಾತ್ರೆಗೆ ಹೊರಟ ಸಾಹಸಿ
  • ಬಾಗಲಕೋಟೆಯಿಂದ ಹಾವೇರಿವರೆಗೆ 360 ಕಿಮೀ ಪಯಣ
  • ಮಾರ್ಗಮಧ್ಯೆ ಕನ್ನಡ ಜಾಗೃತಿ ಮೂಡಿಸುತ್ತಿರುವ ಭಾಷಾಪ್ರೇಮಿ

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ (ಜ.4) : ಹಾವೇರಿಯಲ್ಲಿ ಜ. 6ರಿಂದ 8ರ ವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಾಗಲಕೋಟೆಯಿಂದ ಹಾವೇರಿಗೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಈರಣ್ಣ ಜಿ. ಕುಂದರಗಿಮಠ ತೆರಳುತ್ತಿದ್ದು, ಪಟ್ಟಣಕ್ಕೆ ಮಂಗಳವಾರ ಬಂದ ಹಿನ್ನೆಲೆ ಕನ್ನಡಾಭಿಮಾನಿಗಳು ಸ್ವಾಗತಿಸಿದರು.

Latest Videos

undefined

ಈರಣ್ಣ ಜಿ. ಕುಂದರಗಿಮಠ(Eranna G Kundaragimath) ಅವರು ಒಂದು ಕೈಯಲ್ಲಿ ‘ಬಳಸಬೇಕು ಕನ್ನಡ, ಉಳಿಸಬೇಕು(Save Kannada) ಕನ್ನಡ, ಬೆಳೆಸಬೇಕು ಕನ್ನಡ’ ಎಂಬ ನಾಮಫಲಕ ಮತ್ತೊಂದು ಕೈಯಲ್ಲಿ ಕನ್ನಡ ಧ್ವಜ ಹಿಡಿದು, ಕಾಲಿನಲ್ಲೇ ಬೈಕನ್ನು ಬ್ಯಾಲೆನ್ಸ್‌ ಮಾಡುತ್ತಾ ಬರೋಬ್ಬರಿ 360 ಕಿಮೀ ದೂರ ಕ್ರಮಿಸುತ್ತಿದ್ದಾರೆ. ಜ. 3ರಂದು ಬಾಗಲಕೋಟೆಯಿಂದ ಶಿರೂರು, ಅಮೀನಗಡ, ಇಲಕಲ್‌, ಕುಷ್ಟಗಿ, ಗಜೇಂದ್ರಗಡ, ನರೇಗಲ್‌, ಬೆಟಗೇರಿ, ಗದಗ, ಹುಲಕೋಟೆ, ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಶಿಗ್ಗಾಂವಿ ಮಾರ್ಗವಾಗಿ ಹಾವೇರಿ ತಲುಪಲಿದ್ದಾರೆ.

ಹಾವೇರಿ(Haveri)ಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳದವರೆಗೆ ವಿಶೇಷ ಬೈಕ್‌ ಸಾಹಸ ಕ್ರೀಡೆಯೊಂದಿಗೆ ಹ್ಯಾಂಡಲ್‌ ಇಲ್ಲದ ಬೈಕ್‌ಅನ್ನು ಓಡಿಸಿಕೊಂಡು ಕನ್ನಡ ನಾಡು- ನುಡಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ

ದಾರ್ಶನಿಕರ ಚಿತ್ರಗಳು:

ಬೈಕ್‌ಗೆ ನಾಡದೇವಿ ಭುವನೇಶ್ವರಿ ದೇವಿಯ ಚಿತ್ರ, ರಂಭಾಪುರಿ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ(Siddeshwar swamiji), ವಿಜಯ ಮಹಾಂತಸ್ವಾಮೀಜಿ(Vijayamahantaswamiji), ಕುಮಾರ ಶಿವಯೋಗಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಡಾ. ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ ಸೇರಿದಂತೆ ವಿವಿಧ ದಾರ್ಶನಿಕರ ಶರಣರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವುದು ಆಶ್ಚರ್ಯಕರವಾದರೂ ಶ್ಲಾಘನೀಯವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು. 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ವಿವಾದಗಳ ಬಗ್ಗೆ ಡಾ.ಮಹೇಶ್‌ ಜೋಷಿ ಖಡಕ್‌ ಮಾತು

ನಾನು ಹಾವೇರಿಯಲ್ಲಿ ನಡೆಯುತ್ತಿರುವ ನುಡಿಜಾತ್ರೆಗೆ ಸುಮಾರು 360 ಕಿಲೋಮೀಟರ್‌ ದೂರವನ್ನು ಕ್ರಮಿಸುತ್ತಿದ್ದು, ನಾನು ಈ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇನೆ.

ಈರಣ್ಣ ಜಿ. ಕುಂದರಗಿಮಠ, ಬೈಕ್‌ ಸವಾರ

click me!