ಕೊರೋನಾದಿಂದ ಮೃತರಾದ್ರೆ ಅಂತ್ಯಸಂಸ್ಕಾರದ ಶುಲ್ಕ ವಿನಾಯಿತಿ

By Suvarna NewsFirst Published Jul 25, 2020, 3:25 PM IST
Highlights

 ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದೇ ವೇಳೆಯಲ್ಲಿ ಶವಸಂಸ್ಕಾರಕ್ಕಾಗಿ ಎಲೆಕ್ಟಿಕ್ ಚಿತಾಗಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಇದೀಗ ಇದಕ್ಕೆ ಬ್ರೇಕ್ ಹಾಕಿರುವ ಬಿಬಿಎಂಪಿ, ಮೃತ ಸೋಂಕಿತರ ಉಚಿತ ಶವ ಸಂಸ್ಕಾರಕ್ಕೆ ಅಶೋಕ  ಆದೇಶಿಸಿದ್ದಾರೆ.

ಬೆಂಗಳೂರು, (ಜುಲೈ.25): ಕೊರೋನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡುವಾಗ ಶುಲ್ಕ ಕಟ್ಟಬೇಕಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

"

ಈ ಕುರಿತು ಇಂದು (ಶನಿವಾರ) ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶೋಕ್, ಶವ ಸಂಸ್ಕಾರಕ್ಕೆ ಚಿತಾಗಾರದಲ್ಲಿ 250 ರೂ. ನೀಡಬೇಕಿತ್ತು. ಇದೀಗ ಅದನ್ನು ತೆಗೆದುಹಾಕಲಾಗಿದ್ದು, ಇಂದಿನಿಂದ ಈ ಶುಲ್ಕಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ಕೊರೋನಾ ಗೆದ್ದವರ ಅನುಭವ: ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಇಲ್ಲ!

ಬೂದಿ ತೆಗೆದುಕೊಳ್ಳಲು 100 ರೂ. ಹಾಗೂ ಚಟ್ಟ ಕಟ್ಟಲು 900 ವೆಚ್ಚ ಆಗುತ್ತಿತ್ತು. ಇದಕ್ಕೆ ನಿನಾಯಿತಿ ನೀಡಲಾಗಿದ್ದು, ಕೊರೋನಾದಿಂದ ಮೃತಪಟ್ಟವರಿಗೆ ಬಿಬಿಎಂಪಿಯಿಂದ ಒಟ್ಟು 1250 ಶುಕ್ಲದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಒಂದು ವೇಳೆ ಸೋಂಕಿತನ ಮೃದೇಹವನ್ನು ಕುಟುಂಬಸ್ಥರು ನಿರಾಕರಿಸಿದ್ರೆ, ಬೇರೆ ಯಾರು ಅಂತ್ಯಕ್ರಿಯೆ ಮಾಡುತ್ತಾರೋ ಅವರಿಗೆ 500ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ಕೋವಿಡ್ ನಿಂದ ಮೃತರಾದವರಿಗೆ ಪ್ರತ್ಯೇಕ ಸ್ಮಶಾನ ಮಾಡಲಾಗಿದೆ. ಅಂತಹ ಸ್ಥಳಗಳಲ್ಲಿ ಸ್ಥಳೀಯರು ವಿರೋಧ ಮಾಡ್ತಿದಾರೆ. ಅವರಿಗೆ ವಿರೋಧ ಮಾಡದೇ ಮಾನವೀಯತೆಯಿಂದ ನಡೆದುಕೊಳ್ಳಲು ಮನವಿ ಮಾಡ್ತಿದ್ದೇನೆ. ಶವ ಸಂಸ್ಕಾರವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗ್ತಿದೆ. ಇದರಿಂದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಸೋಂಕು ಹರಡುವುದಿಲ್ಲ ಎಂದು ಅಶೋಕ್ ಜನರಿಗೆ ಮನವರಿಕೆ ಮಾಡಿದರು.

click me!