
ಮೈಸೂರು [ಮಾ.11]: ಕೊರೋನಾ ಹಾಗೂ ಹಕ್ಕಿ ಜ್ವರ ಆತಂಕದ ನಡುವೆ ಮೈಸೂರಿನ ಅರ್ಜುನ್ ಗುರೂಜಿ ನೇತೃತ್ವದ ತಂಡ ಕೇರಳ ಪ್ರವಾಸ ಕೈಗೊಂಡಿದೆ.
30 ಮಂದಿ ಮಾಲಾಧಾರಿಗಳ ತಂಡವು ಶಬರಿಮಲೆಗೆ ಹೊರಟಿದ್ದು, ಕೊರೋನಾ ಬಗ್ಗೆ ಆತಂಕ ಬಿಟ್ಟು ದೇವರಲ್ಲಿ ನಂಬಿಕೆ ಇರಿಸಿ ಎಂದು ಹೇಳಿದೆ.
ಕೊರೋನಾ ವೈರಸ್ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅರ್ಜುನ್ ಗುರೂಜಿ ಹೇಳಿದ್ದು, ಕೇರಳಿಗರು ಅಯ್ಯಪ್ಪನ ಮೇಲೆ ನಂಬಿಕೆ ಇಟ್ಟಲ್ಲಿ ರಕ್ಷಿಸುತ್ತಾನೆ ಎಂದರು.
ಕರ್ನಾಟಕದಲ್ಲಿ ನಾಲ್ವರಿಗೆ ಕೊರೋನಾ: ದಿಟ್ಟ ಕ್ರಮಕೈಗೊಂಡ ರಾಜ್ಯ ಸರ್ಕಾರ..
ಯಾವ ದೇಶ ಕೊರೋನಾ ಹರಡಲು ಕಾರಣವಾಯಿತೋ ಆದೇಶ ಇದೀಗ ಅದರ ಪ್ರತಿಫಲ ಉಣ್ಣುತ್ತಿದೆ. ಯಾರೂ ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಆಯುರ್ವೇದದಲ್ಲಿ ಕೊರೋನಾಗೇ ಔಷಧವಿದ್ದು, ಗೋಮೂತ್ರವಾಗಿ ನೇರವಾಗಿ ಸೇವನೆ ಮಾಡುವುದರಿಂದ ಕೊರೋನಾ ವಾಸಿ ಮಾಡಬಹುದು, ಆದರೆ ಸಂಗ್ರಹಿಸಿಟ್ಟ ಗೋಮೂತ್ರ ಬಳಸಬೇಡಿ ಎಂದು ಅರ್ಜುನ್ ಗುರೂಜಿ ಹೇಳಿದರು.