50ರ ಮಿತಿಯಿಲ್ಲದೇ ಮದುವೇಲಿ ಭಾಗವಹಿಸಲು ಐಡಿಯಾ : ನೀವು ಮಾಡ್ಬಹುದು

By Suvarna News  |  First Published Apr 25, 2021, 1:47 PM IST

ಸದ್ಯ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಸಾವು ನೋವುಗಳು ಹೆಚ್ಚಾಗುತ್ತಿದೆ. ಇದರಿಂದ ಮದುವೆ ಸಮಾರಂಭಗಳಿಗೆ ಜನ ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕುಟುಂಬ ಒಂದು ಹೆಚ್ಚಿನ ಸಂಬಂಧಿಗಳು ಮದುವೆ ನೋಡಲು ನೂತನ ರೀತಿಯಲ್ಲಿ ಅವಕಾಶ ಕಲ್ಪಿಸಿತ್ತು. 


ಚಾಮರಾಜನಗರ (ಏ.25):  ಮದುವೆ ಸಮಾರಂಭಕ್ಕೆ 50 ರ ಮಿತಿ ಹಿನ್ನಲೆ  ಮದುವೆ ಸಮಾರಂಭದ  ಯುಟ್ಯೂಬ್ ಲೈವ್ ಗೆ ಕುಟುಂಬ ಒಂದು ಮೊರೆಹೋಗಿದೆ. 

ಚಾಮರಾಜ‌ಗರದ ಎಸ್.ಗಾಯತ್ರಿ ಮತ್ತು ಎಸ್ ರಾಮಮೂರ್ತಿ ಕುಟುಂಬದಿಂದ ವಿನೂತನ ಪ್ರಯತ್ನ ಮಾಡಿದ್ದು, ಇವರ ಮಗ  ಚೇತನ್ ಹಾಗು ನಂಜನಗೂಡಿನ  ಐಶ್ವರ್ಯ ಅವರ ಮದುವೆ ಇಂದು ನಡೆಯುತ್ತಿದ್ದು, ಕಾರ್ಯಕ್ರಮವನ್ನು ಯೂ ಟ್ಯೂಬ್ ಮೂಲಕ ಲೈವ್ ಪ್ರಸಾರ ಮಾಡಲಾಗಿದೆ. 

Tap to resize

Latest Videos

undefined

ವಿವಾಹ ಕಾರ್ಯಕ್ರಮದ ಲೈವ್ ಲಿಂಕ್

ನಂಜನಗೂಡು ತಾಲೂಕು ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿದ್ದು, 2000 ಕ್ಕು ಹೆಚ್ಚು ಜನರಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಆದರೆ ಆದರೆ ಮದುವೆಗೆ 50 ಜನರ ಮಿತಿ ಹಿನ್ನಲೆ ವಿವಾಹ ಸಮಾರಂಭವನ್ನು ಯೂ ಟ್ಯೂಬ್ ಲೈವ್ ಮೂಲಕ ಪ್ರವಾಸ ಮಾಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಮದುವೆ, ಮುಂಜಿ ಮಾಡುತ್ತಿರುವವರ ಗಮನಕ್ಕೆ ..

50 ಜನರನ್ನು ಬಿಟ್ಟು ಉಳಿದವರಿಗೆ ಮದುವೆ ಸಮಾರಂಭದ ಸಂಫೂರ್ಣ ಲೈವ್ ಚಿತ್ರಣ ತೋರಿಸಲು ಈ ಪ್ಲಾನ್ ಮಾಡಿದೆ. ಆಹ್ವಾನಿತರಿಗೆ ಯುಟೂಬ್ ಲೈವ್ ಲಿಂಕ್ ಕಳುಹಿಸಿ ಆನ್ ಲೈನ್ ನಲ್ಲೇ ಹರಸುವಂತೆ ಕುಟುಂಬ ಮನವಿ ಮಾಡಿದೆ. 

click me!