ಹಾಸನ: ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ

Kannadaprabha News   | Asianet News
Published : Aug 06, 2021, 10:53 AM ISTUpdated : Aug 06, 2021, 11:04 AM IST
ಹಾಸನ: ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ

ಸಾರಾಂಶ

*  ಪರೀಕ್ಷೆಗೆ ಹಾಜರಾಗಲು ಕೇರಳದಿಂದ ಆಗಮಿಸಿದ್ದ ವಿದ್ಯಾರ್ಥಿಗಳು *  ಹಾಸನದ ಖಾಸಗಿ ಪಿಜಿಯಲ್ಲಿ ನೆಲೆಸಿದ್ದರು ವಿದ್ಯಾರ್ಥಿನಿಯರು * ವಿದ್ಯಾರ್ಥಿನಿಯರಿಗೆ ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನ್‌ 

ಹಾಸನ(ಆ.06): ನರ್ಸಿಂಗ್‌ ಪರೀಕ್ಷೆ ಬರೆಯಲು ಕೇರಳದಿಂದ ಹಾಸನಕ್ಕೆ ಬಂದಿದ್ದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. 

ಕರ್ನಾಟಕ ರಾಜ್ಯಾದ್ಯಂತ ಶಾಲಾ-ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರವು ಈಗಾಗಲೇ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಕೇರಳದಿಂದ ಪರೀಕ್ಷೆಗೆ ಹಾಜರಾಗಲು ಹಾಸನದ ನಿಸರ್ಗ ನರ್ಸಿಂಗ್‌ ಕಾಲೇಜಿಗೆ 21 ವಿದ್ಯಾರ್ಥಿನಿಯರು ಆಗಮಿಸಿದ್ದರು. 

ಕೊರೋನಾ : ಹರ್ಡ್‌ ಇಮ್ಯುನಿಟಿ ಅಸಾಧ್ಯ - ತಜ್ಞರ ಎಚ್ಚರಿಕೆ

ಎಲ್ಲಾ ವಿದ್ಯಾರ್ಥಿಗಳು ಹಾಸನದ ಕೆ.ಆರ್‌.ಪುರಂನಲ್ಲಿ ಇರುವ ಖಾಸಗಿ ಪಿಜಿಯಲ್ಲಿ ನೆಲೆಸಿದ್ದರು. ವಿದ್ಯಾರ್ಥಿನಿಯರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಈಗಾಗಲೇ ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.
 

PREV
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ