ರಾಜಧಾನಿಯಲ್ಲಿ ಹೆಚ್ಚಾದ ಹಾವುಗಳ ಹಾವಳಿ

By Kannadaprabha NewsFirst Published Aug 6, 2021, 10:24 AM IST
Highlights
  • ಮಳೆಗಾಲ ಅರಂಭವಾದ ಬೆನ್ನಲ್ಲೇ ರಾಜಧಾನಿಯಲ್ಲಿ ಹಾವುಗಳ ಹಾವಳಿ
  • ಹಲವು ಬಡಾವಣೆಗಳಲ್ಲಿ ವಿಷಕಾರಿ ಸರಿಸೃಪಗಳ  ಉಪಟಳ ಹೆಚ್ಚಳ
  •  ವನ್ಯಜೀವಿ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿಂದ ಹಾವುಗಳನ್ನು ಹಿಡಿದು ಸಂರಕ್ಷಿಸಲು ಪರದಾಟ

 ಬೆಂಗಳೂರು (ಆ.06): ಮಳೆಗಾಲ ಅರಂಭವಾದ ಬೆನ್ನಲ್ಲೇ ರಾಜಧಾನಿಯ ಹಲವು ಬಡಾವಣೆಗಳಲ್ಲಿ ವಿಷಕಾರಿ ಸರಿಸೃಪಗಳ  ಉಪಟಳ ಹೆಚ್ಚಾಗಿದ್ದು,  ಪಾಲಿಕೆ ವನ್ಯಜೀವಿ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿಂದ ಹಾವುಗಳನ್ನು ಹಿಡಿದು ಸಂರಕ್ಷಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪಾಲಿಕೆ ವನ್ಯಜೀವಿ ವಿಭಾಗದ ಸಹಾಯವಾಣಿಗೆ ಹಾವು ಹಿಡಿಯುವಂತೆ ನಿತ್ಯ ಹೆಚ್ಚು ಕರೆಗಳು ಬರುತ್ತಿವೆ. 

ಪ್ರಸಕ್ತ ಮಳೆಗಾಲದಲ್ಲಿ ನಿತ್ಯ 50ರಿಂದ 60 ಕರೆಗಳು ಬರುತ್ತಿದ್ದು ಸಾಮಾನ್ಯವಾಗಿ ಈ ಅವಧಿಯಲ್ಲಿ ದಿನಕ್ಕೆ 25 ರಿಂದ 30 ದೂರುಗಳು ಮಾತ್ರ ದಾಖಲಾಗುತ್ತಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ, ಕೆರೆಗಳು ನಶಿಸಿ ಹೋಗುತ್ತಿದ್ದು ಚರಂಡಿಗಳು, ಮನೆಗಳ ಕೈ ತೋಟ  ಇತ್ಯಾದಿಗಳನ್ನೇ ಆವಾಸ ಮಾಡಿಕೊಂಡು ವಿಷಕಾರಿ ಹಾವುಗಳು ವಾಸ ಮಾಡುತ್ತಿವೆ. ಹಾಗಾಗಿ ಮಳೆ ಸುರಿದಾಗ ನೀರಿನೊಮದಿಗೆ ಹಾವುಗಳು ಕೂಡ ಮನೆಗಳಿಗೆ ನುಗ್ಗುತ್ತಿದ್ದು, ಜನರು ಭಯದಲ್ಲೇ ಜೀವಿಸುವಂತಾಗಿದೆ. 

ಬೃಹತ್ ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್ ಹೆಣ್ಣು!

ರಾಜರಾಜೇಶ್ವರಿ ನಗರ, ನೈಸ್ ರಸ್ತೆ, ಜೆಪಿ ನಗರ ಎಚ್‌ಎಸ್‌ಆರ್ ಲೇಔಟ್, ಹೊರಮಾವು, ವಿದ್ಯಾರಣ್ಯಪುರ, ಯಲಹಂಕ, ಸರ್ಜಾಪುರ ರಸ್ತೆ, ನಾಗರಭಾವಿ, ಮಾಗಡಿ ರಸ್ತೆ, ಬನಶಂಕರಿ, ಜಯನಗರ, ಗಿಡದ ಕೋನೇನಹಳ್ಳಿ ಮುದ್ದಯ್ಯನಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಅತ್ಯಂತ  ವಿಷಕಾರಿ ಹಾವುಗಳಿದೆ. 25 ರಿಂದ 27ಕ್ಕೂ ವಿವಿಧ ಜಾತಿಯ ಹಾವುಗಳಿವೆ. 

 ಹಾವುಗಳ ಹಾವಳಿ ಎಂದು ಪ್ರತಿದಿನ 60ಕ್ಕೂ ಹೆಚ್ಚು ಕರೆಗಳು ಬರುತ್ತವೆ. ಆದರೆ ಕರೆ ಬಂದ ಕೂಡಲೇ ಸ್ಥಳಕ್ಕೆ ಹೋಗಿ ಹಾವು ಹಿಡಿಯಲು ಬೇಕಾದಷ್ಟು ಸಿಬ್ಬಂದಿ ಈ ವಿಭಾಗದಲ್ಲಿಲ್ಲ.  ವಲಯ ಒಂದಕ್ಕೆ ಇಬ್ಬರಂತೆ ಏಳು ಮಂದಿ ವನ್ಯಜೀವಿ ಸಂರಕ್ಷಕರನ್ನು  ನೇಮಕ ಮಾಡಲಾಗಿದೆ. ಆದರೆ ಈ ಸಂಖ್ಯೆ ಸಾಲುತ್ತಿಲ್ಲ. 

click me!