ಮಂಗಳೂರು (ಆ.03): ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೆ ರಾಜ್ಯದಲ್ಲಿ ಕೋವಿಡ್ ಆತಂಕ ಎದುರಾಗಿದೆ. ಕೇರಳದಲ್ಲಿ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ದಕ್ಷಿಣ ಕನ್ನಡದಲ್ಲೂ ಸೋಂಕಿತ ಗತಿ ಹೆಚ್ಚಾಗಿದೆ.
ಪಟ್ಟಣಗಳಲ್ಲಿ ಸೋಂಕು ರಾಜ್ಯಾದ್ಯಂತ ಪತ್ತೆಯಾಗಿದೆ. ಅತಿ ಹೆಚ್ಚು ಸೋಂಕು ಪತ್ತೆಯಾದ 20 ಪಟ್ಟಣಗಳಲ್ಲಿ ದಕ್ಷಿಣ ಕನ್ನಡದ ನಾಲ್ಕು, ಉತ್ತರ ಕನ್ನಡದ ಮೂರು, ಕೊಡಗು ಮತ್ತು ಬೆಳಗಾವಿಯ ಎರಡು, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಬೀದರ್, ಕಲಬುರಗಿ, ಉಡುಪಿ ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯ ತಲಾ ಒಂದು ಪಟ್ಟಣಗಳಿವೆ.
undefined
ಕೇರಳ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಬೆಂಗ್ಳೂರಿಗಿಂತ ಹೆಚ್ಚು ಕೇಸ್..!
ಅತಿ ಹೆಚ್ಚು ಸೋಂಕು ಕೊಪ್ಪಳ (ಶೇ.1100), ದಾವಣಗೆರೆಯ ಹರಿಹರ (ಶೇ.750), ಬೆಳಗಾವಿಯ ಹುಕ್ಕೇರಿ (ಶೇ.500), ಉತ್ತರ ಕನ್ನಡದ ಯಲ್ಲಾಪುರ (ಶೇ.333), ಕೋಲಾರದ ಮಾಲೂರು (ಶೇ.260) ಪಟ್ಟಣದಲ್ಲಿ ಪತ್ತೆಯಾಗಿದೆ. ಹಳ್ಳಿಗಳಲ್ಲಿ ಸೋಂಕು ಪತ್ತೆಯಲ್ಲಿ ಕರಾವಳಿ ಜಿಲ್ಲೆಗಳು ಮುಂದಿದ್ದರೆ, ಪಟ್ಟಣಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗುವುದರಲ್ಲಿ ಉತ್ತರ ಕರ್ನಾಟಕದ ಪಟ್ಟಣಗಳು ಮುಂದಿವೆ.
ಕೋವಿಡ್ ಹಾಟ್‌ಸ್ಪಾಟ್:
ದಕ್ಷಿಣ ಕನ್ನಡದ ಕೋಟೆಕಾರ್, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು, ಉತ್ತರ ಕನ್ನಡದ ಶಿರಸಿ, ಕಾರವಾರ, ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ, ಚಿತ್ರದುರ್ಗದ ಹಿರಿಯೂರು, ಕಲಬುರಗಿ, ಬೀದರ್, ಉಡುಪಿಯ ಕುಂದಾಪುರ, ಬಳ್ಳಾರಿ, ಬೆಳಗಾವಿಯ ರಾಯಭಾಗ, ಚಿಕ್ಕಮಗಳೂರಿನ ಎನ್.ಆರ್. ಪುರ, ಚಿತ್ರದುರ್ಗದ ಹಿರಿಯೂರು ಪಟ್ಟಣಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗಿವೆ