ವರಿಷ್ಠರು ಅನುವಂಶೀಯ ರಾಜಕಾರಣಕ್ಕೆ ಮಣೆ ಹಾಕಲ್ಲ : ಯತ್ನಾಳ

By Kannadaprabha News  |  First Published Aug 3, 2021, 8:21 AM IST
  • ಬಿಜೆಪಿ ಹೈಕಮಾಂಡ್‌ ತುಂಬಾ ಸ್ಟ್ರಾಂಗ್‌ ಇದೆ. ಅನುವಂಶಿಕತೆ ರಾಜಕಾರಣಕ್ಕೆ ಹೈಕಮಾಂಡ್‌ ಮಣೆ ಹಾಕಲ್ಲ
  • ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ

ವಿಜಯಪುರ (ಆ.03): ಬಿಜೆಪಿ ಹೈಕಮಾಂಡ್‌ ತುಂಬಾ ಸ್ಟ್ರಾಂಗ್‌ ಇದೆ. ಅನುವಂಶಿಕತೆ ರಾಜಕಾರಣಕ್ಕೆ ಹೈಕಮಾಂಡ್‌ ಮಣೆ ಹಾಕಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಣೆ ಹಾಕಿದರೆ ಕಾಂಗ್ರೆಸ್‌ ಪಕ್ಷದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಉಳಿಯುವುದಿಲ್ಲ.

Tap to resize

Latest Videos

undefined

ದೇವೇಗೌಡ್ರನ್ನ ಭೇಟಿಯಾಗಲು ಸಿಎಂಗೆ ಹೈಕಮಾಂಡ್ ಹೇಳಿತ್ತಾ? ಹೊಸ ಬಾಂಬ್ ಸಿಡಿಸಿದ ಬಿಜೆಪಿ ನಾಯಕ

 ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ನಾನು ಲಾಬಿ ಮಾಡಿಲ್ಲ ಎಂದರು.75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಸ್ಥಾನ ಕೊಡಲ್ಲ. ಯಡಿಯೂರಪ್ಪನವರ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. 

ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ಹೇಳಿದ್ದೆ. ಅದನ್ನು ನಾನು ಪಾಲಿಸಿದ್ದೇನೆ. ಎರಡ್ಮೂರು ಸಂಕಲ್ಪ ಮಾಡಿದ್ದೆ. ಅದೆಲ್ಲವೂ ಈಡೇರಿವೆ. ಪಕ್ಷದ ಹಿತದೃಷ್ಟಿಯಿಂದ ಮಾತ್ರ ಹೇಳಿದ್ದೇನೆ ಎಂದರು.

click me!