ಇಂದಿನಿಂದ ಬೆಂಗಳೂರಲ್ಲಿ ಸ್ಟ್ರಿಕ್ಟ್ ರೂಲ್ಸ್ : ಅನಗತ್ಯವಾಗಿ ರಸ್ತೆಗಿಳಿಯುವ ಮುನ್ನ ಎಚ್ಚರ

Kannadaprabha News   | Asianet News
Published : Aug 03, 2021, 10:54 AM IST
ಇಂದಿನಿಂದ ಬೆಂಗಳೂರಲ್ಲಿ ಸ್ಟ್ರಿಕ್ಟ್ ರೂಲ್ಸ್ : ಅನಗತ್ಯವಾಗಿ ರಸ್ತೆಗಿಳಿಯುವ ಮುನ್ನ ಎಚ್ಚರ

ಸಾರಾಂಶ

ಇಂದಿನಿಂದ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಅನಗತ್ಯವಾಗಿ ರಸ್ತೆಗ ಈಲಿದರೆ ಬೀಳುತ್ತೆ ಭಾರೀ ದಂಡ ಅಗತ್ಯ ಸೇವೆಗಳಿಗೆ ಮಾತ್ರವೇ ರಿಯಾಯಿತಿ

ಬೆಂಗಳೂರು (ಆ.03): ಇಂದು ರಾತ್ರಿ 10 ಗಂಟೆ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ಮುನ್ನ ಎಚ್ಚರ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಇಂದಿನಿಂದ ಕಟ್ಟುನಿಟ್ಟಿನ ನೈಟ್‌ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. 

ಸೋಂಕು ಹೆಚ್ಚಳ‌ ಆತಂಕ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಇಷ್ಟು ದಿನಗಳ ಕಾಲ ನೈಟ್ ಕರ್ಫ್ಯೂ ಇದ್ದರೂ ಸಹ ಸರಿಯಾಗಿ ಪಾಲನೆ ಆಗುತ್ತಿರಲಿಲ್ಲ. ಪಾಲನೆ ಮಾಡದವರ ವಿರುದ್ಧ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದೆ. 

ಅನಗತ್ಯವಾಗಿ ಓಡಾಡಿದರೆ, ರಸ್ತೆಗಿಳಿದರೆ ದಂಡ ಪ್ರಯೋಗ  ಮಾಡಲಾಗುತ್ತದೆ. ಜತೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್‌ ದಾಖಲಿಸಲಿದ್ದಾರೆ ಪೊಲೀಸರು.  ಪೊಲೀಸರು, ಮಾರ್ಷಲ್ಸ್ ನೇತೃತ್ವದಲ್ಲಿ ಇಂದಿನಿಂದಲೇ ಕಾರ್ಯಾಚರಣೆ ಶುರುವಾಗಲಿದೆ. 

ದ.ಕ., ಉಡುಪಿ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ಉಲ್ಬಣ!

ಕೋವಿಡ್ ಮಾರ್ಗಸೂಚಿ ‌ಉಲ್ಲಂಘಿಸಿ ಓಡಾಡೋರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಅಗತ್ಯ ವಸ್ತುಗಳ ಸರಬರಾಜು, ವೈದ್ಯಕೀಯ ಸೇವೆಗಳ ವಾಹನಗಳಿಗೆ ರಿಯಾಯಿತಿ ನೀಡಲಾಗುತ್ತದೆ. 

ನೈಟ್ ಶಿಫ್ಟ್ ಕೆಲಸ ಮಾಡುವ ಸಿಬ್ಬಂದಿಗೆ ಐಡಿ ಕಾರ್ಡ್ ತೋರಿಸಿ ಓಡಾಡಲು ಅವಕಾಶವಿದೆ.  ಇನ್ನುಳಿದ ಎಲ್ಲಾ ವ್ಯಾಪಾರ ಹಾಗೂ ವಹಿವಾಟುಗಳ ನಿರ್ಬಂಧವನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ & ಬಿಬಿಎಂಪಿ ಸಜ್ಜಾಗಿದೆ. 

ಯಾವುದಕ್ಕೆಲ್ಲಾ ರಿಯಾಯಿತಿ..?

- ರೋಗಿಗಳನ್ನ ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶ

- ಯಾವುದೇ ಕಂಪನಿ ಹಾಗೂ ಕೈಗಾರಿಕಾ ಉದ್ಯೋಗಿಗಳು ಪಾಸ್ ಹೊಂದಿರಬೇಕು 

- ಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸಸ್ ವರ್ಕರ್ಸ್ ತಮ್ಮ ಐಡಿಕಾರ್ಡ್ ಗಳನ್ನ ಹೊಂದಿರಲೇಬೇಕು

- ಮೆಡಿಕಲ್ ಎಮರ್ಜೆನ್ಸಿ ಹಾಗೂ ಅಗತ್ಯ ಸರಬರಾಜುವಾಹನಗಳಿಗೆ ಅವಕಾಶ

- ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶ

- ಏರ್ಪೋರ್ಟ್, ರೈಲ್ವೆ ಸೇರಿದಂತೆ ಓಡಾಟಕ್ಕೆ ಸೂಕ್ತ ಮಾಹಿತಿ‌ ಒದಗಿಸಬೇಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!